• By vjcuser
  • March 1, 2026

‘ಹೃದಯ ,ಸಂಬಂಧಿ ಕಾಯಿಲೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

ಕೋಟ  ವಿವೇಕ ಪದವಿ ಪೂರ್ವ ಕಾಲೇಜು . ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆ ಹಾಗು ಹೃದಯಘಾತ ಇದರ ಕುರಿತಾಗಿ ವಿಜ್ಞಾನ ಸಂಘದ ವತಿಯಿಂದ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರದ ಸಂಪನ್ಮೂಲ  ವ್ಯಕ್ತಿಯಾಗಿ ಡಾl ಪ್ರಭಾವತಿ, ಹೃದ್ರೋಗ ತಜ್ಞೆ ಜಯದೇವ ಆಸ್ಪತ್ರೆ ಬೆಂಗಳೂರು ಇಲ್ಲಿನ ಪ್ರಾಧ್ಯಾಪಕ ರು  ಆದ ಇವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಮತ್ತು ಆಹಾರ ಕ್ರಮ, ಒತ್ತಡದ ಬದುಕಿನಿಂದಾಗಿ ಹೆಚ್ಚು ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತಗಳು ಹೆಚ್ಚುತ್ತಿದೆ. ಆದ್ದರಿಂದ ನಾವು ಬದುಕುವ ರೀತಿ, ಸೇವಿಸುವ ಆಹಾರ ಕ್ರಮ ಒಂದು ನಿಯಮದಿಂದ ಕೂಡಿರಬೇಕು. ಅಧಿಕ ಕೊಬ್ಬನ್ನು ಹೆಚ್ಚಿಸುವ, ಆರೋಗ್ಯವನ್ನು ಹಾಳು ಮಾಡುವ ಜಂಕ್ ಫುಡ್ ಗಳನ್ನು ಸೇವಿಸಲೇಬಾರದು. ಪ್ರತಿನಿತ್ಯ ವಾಕಿಂಗ್, ವ್ಯಾಯಾಮ ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡು ಯಾವುದನ್ನು ಅತಿಯಾಗಿ ವರ್ತಿಸದೆ ಸಂತೋಷದಿಂದ ಬದುಕಬೇಕೆಂದು ತಿಳಿಸಿದರು. ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಹೃದಯ ,ಹೃದಯ ಸಂಬಂಧಿ ಕಾಯಿಲೆ ಬಗ್ಗೆ ವಿವರಿಸಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕ್ರಮದ ಬಗ್ಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕ ಶ್ರೀ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿ, ಶ್ರೀ ಚಂದ್ರಶೇಖರ್ ಹೆಚ್ ಎಸ್ ವಂದಿಸಿದರು. ಸಂಘದ ಸಂಚಾಲಕ ಶ್ರೀ ರವಿಕಾರಂತ್ ಕಾರ್ಯಕ್ರಮ ಸಂಯೋಜಿಸಿದ್ದರು.

Explore More
  • By vjcuser
  • March 1, 2026

ವಿವೇಕ ಪದವಿ ಪೂರ್ವ ಕಾಲೇಜು ಕೋಟ, 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ

ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಧ್ವಜಾರೋಹಣ ಕಾರ್ಯಕ್ರಮ ಮುಗಿದ ಬಳಿಕ ಕಾಲೇಜಿನ ಸಭಾಂಗಣದಲ್ಲಿ ಕೋಟ ವಿದ್ಯಾ ಸಂಘ ಇದರ ಆಡಳಿತ ಮಂಡಳಿ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಅಧ್ಯಾಪಕರ ಕೂಡುವಿಕೆಯಲ್ಲಿ ವಾಲಿ ಮೋಕ್ಷ ಎಂಬ ಆಖ್ಯಾನದ ಯಕ್ಷಗಾನ ತಾಳಮದ್ದಲೆ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕನ್ನಡ ಉಪನ್ಯಾಸಕರಾದ ಶ್ರೀ ಸದಾಶಿವ ಹೊಳ್ಳ, ಮದ್ದಲೆ ಗಾರರಾಗಿ ವಿವೇಕದ ಹಿಂದಿನ ವಿದ್ಯಾರ್ಥಿ ಲೋಹಿತ್ ಕೊಮೆ, ಚಂಡೆ ವಾದಕರಾಗಿ  ಪ್ರಸ್ತುತ ವಿದ್ಯಾರ್ಥಿ ಶ್ರೀ ವಾಗ್ವಿಲಾಸ್ ಭಟ್ ಭಾಗವಹಿಸಿದ್ದರು. ಮುಮ್ಮೇಳ ದಲ್ಲಿ ಅರ್ಥದಾರಿಗಳಾಗಿ, ಆಡಳಿತ ಮಂಡಳಿ ಯ ಕಾರ್ಯದರ್ಶಿ  ಎಂ ,ರಾಮದೇವ  ಐತಾಳ್ , ವಾಲಿ ಪಾತ್ರಧಾರಿಯಾಗಿ, ಗಣಿತ ಉಪನ್ಯಾಸಕ ಶ್ರೀ ಪ್ರಶಾಂತ್ ಬೇಳೂರು ಸುಗ್ರೀವನಾಗಿ,  ಹಿಂದಿ ಉಪನ್ಯಾಸಕ ಶ್ರೀ ಚಂದ್ರಶೇಖರ್ ಹೆಚ್ ಎಸ್, ಶ್ರೀ ರಾಮನಾಗಿ, ಆಂಗ್ಲ ಭಾಷೆ ಉಪನ್ಯಾಸಕ ಶ್ರೀ ಶಿವಪ್ರಸಾದ್ ಶೆಟ್ಟಿಗಾರ್ ತಾರೆಯಾಗಿ ಪಾತ್ರ ನಿರ್ವಹಿಸಿದರು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದು ಪ್ರೇಕ್ಷಕರ ಮನ ಗೆದ್ದಿತು, ಆಡಳಿತ ಮಂಡಳಿಅಧ್ಯಕ್ಷರಾದ ಶ್ರೀ ಪ್ರಭಾಕರ ಮಯ್ಯ ರು ಭಾಗವಹಿಸಿದ ಕಲಾವಿದರಿಗೆ ಸ್ಮರಣಿಕೆ ಯೆನ್ನು ವಿತರಿಸಿದರು.

Explore More

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy