ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಧ್ವಜಾರೋಹಣ ಕಾರ್ಯಕ್ರಮ ಮುಗಿದ ಬಳಿಕ ಕಾಲೇಜಿನ ಸಭಾಂಗಣದಲ್ಲಿ ಕೋಟ ವಿದ್ಯಾ ಸಂಘ ಇದರ ಆಡಳಿತ ಮಂಡಳಿ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಅಧ್ಯಾಪಕರ ಕೂಡುವಿಕೆಯಲ್ಲಿ ವಾಲಿ ಮೋಕ್ಷ ಎಂಬ ಆಖ್ಯಾನದ ಯಕ್ಷಗಾನ ತಾಳಮದ್ದಲೆ ಜರುಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕನ್ನಡ ಉಪನ್ಯಾಸಕರಾದ ಶ್ರೀ ಸದಾಶಿವ ಹೊಳ್ಳ, ಮದ್ದಲೆ ಗಾರರಾಗಿ ವಿವೇಕದ ಹಿಂದಿನ ವಿದ್ಯಾರ್ಥಿ ಲೋಹಿತ್ ಕೊಮೆ, ಚಂಡೆ ವಾದಕರಾಗಿ ಪ್ರಸ್ತುತ ವಿದ್ಯಾರ್ಥಿ ಶ್ರೀ ವಾಗ್ವಿಲಾಸ್ ಭಟ್ ಭಾಗವಹಿಸಿದ್ದರು.
ಮುಮ್ಮೇಳ ದಲ್ಲಿ ಅರ್ಥದಾರಿಗಳಾಗಿ, ಆಡಳಿತ ಮಂಡಳಿ ಯ ಕಾರ್ಯದರ್ಶಿ ಎಂ ,ರಾಮದೇವ ಐತಾಳ್ , ವಾಲಿ ಪಾತ್ರಧಾರಿಯಾಗಿ, ಗಣಿತ ಉಪನ್ಯಾಸಕ ಶ್ರೀ ಪ್ರಶಾಂತ್ ಬೇಳೂರು ಸುಗ್ರೀವನಾಗಿ, ಹಿಂದಿ ಉಪನ್ಯಾಸಕ ಶ್ರೀ ಚಂದ್ರಶೇಖರ್ ಹೆಚ್ ಎಸ್, ಶ್ರೀ ರಾಮನಾಗಿ, ಆಂಗ್ಲ ಭಾಷೆ ಉಪನ್ಯಾಸಕ ಶ್ರೀ ಶಿವಪ್ರಸಾದ್ ಶೆಟ್ಟಿಗಾರ್ ತಾರೆಯಾಗಿ ಪಾತ್ರ ನಿರ್ವಹಿಸಿದರು.
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದು ಪ್ರೇಕ್ಷಕರ ಮನ ಗೆದ್ದಿತು, ಆಡಳಿತ ಮಂಡಳಿಅಧ್ಯಕ್ಷರಾದ ಶ್ರೀ ಪ್ರಭಾಕರ ಮಯ್ಯ ರು ಭಾಗವಹಿಸಿದ ಕಲಾವಿದರಿಗೆ ಸ್ಮರಣಿಕೆ ಯೆನ್ನು ವಿತರಿಸಿದರು.