ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘವನ್ನು ಸರಸ್ವತಿ ಪದವಿಪೂರ್ವ ಕಾಲೇಜು, ಗಂಗೊಳ್ಳಿಯ ಕನ್ನಡ ಉಪನ್ಯಾಸಕರು, ಮಕ್ಕಳ ಮೇಳ, ಸಾಲಿಗ್ರಾಮ ಇದರ ಪ್ರಸ್ತುತ ನಿರ್ದೇಶಕರು, ಖ್ಯಾತ ಯಕ್ಷಗಾನ ಕಲಾವಿದರು, ಸಾಹಿತಿ ಹಾಗೂ ವಾಗ್ಮಿಗಳಾದ ಶ್ರೀ ಸುಜಯೀಂದ್ರ ಹಂದೆಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಾಹಿತ್ಯ ಸಂಘದ ಮಹತ್ವವನ್ನು ವಿವರಿಸಿದರು. ಸಾಹಿತ್ಯವು ವ್ಯಕ್ತಿತ್ವ ವಿಕಸನಕ್ಕೆ, ಭಾಷಾ ಪ್ರೌಢಿಮೆಗೆ ಹಾಗೂ ಸೃಜನಶೀಲ ಚಿಂತನೆಗೆ ಬಲ ನೀಡುವ ಸಾಧನವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಬರೆಯುವ ಅಭಿರುಚಿಯನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ತಿಳಿಸಿ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಸ್ಪರ ಸಂಬಂಧ, ಬರವಣಿಗೆಯ ಉಪಯೋಗ ಹಾಗೂ ಉತ್ತಮ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕುರಿತು ಪ್ರೇರಣಾದಾಯಕ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.