ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿಜ್ಞಾನ ವಿಭಾಗದ ೨೪೪ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೋಟ ವಿದ್ಯಾಸಂಘದ ಆಡಳಿತ ಮಂಡಳಿ ಮತ್ತು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಗುರುತಿಸಲಾಯಿತು.

ಪ್ರತಿಭಾ ಪುರಸ್ಕಾರದ ಈ ಕಾರ್ಯಕ್ರಮದಲ್ಲಿ ಮುಖ್ಯ್ ಅತಿಥಿಯಾಗಿ ಶ್ರೀ ದಿನಕರ ಶೆಟ್ಟಿ, ಆಡಳಿತ ನಿರ್ದೇಶಕರು, ಪ್ರಿಂಟ್ ಟೆಕ್ ಸೊಲ್ಯೂಶನ್ಸ್ ಪೈ.ಲಿ. ಬೆಂಗಳೂರು ಇವರು ವಿದ್ಯಾರ್ಥಿಗಳನುದ್ದೇಶಿಸಿ ಮಾತನಾಡಿ ‘ವಿವೇಕ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾತ್ರ ಬೋಧಿಸುವುದಲ್ಲ ಅದರೊಂದಿಗೆ ಮುಂದೆ ಜೀವನದಲ್ಲಿ ಶಿಸ್ತು, ಸಂಯಮ, ಕರ್ತವ್ಯ ಪ್ರಜ್ಞೆ ಮೂಡಿಸುವ ಜೊತೆಗೆ ಸಮಾಜಕ್ಕೆ ಉತ್ತಮ ನಾಗರೀಕರನ್ನು ನೀಡುತ್ತಿದೆ. ಪರಿಶ್ರಮ, ಅಚಲವಾದ ಶ್ರದ್ದೆ ಪ್ರಯತ್ನದೊಂದಿಗೆ ಶ್ರೇಷ್ಟವಾದ ಸ್ಥಾನ ಹೊಂದಲು ಸಾಧ್ಯ. ಹಾಗೆಯೇ ಜೀವನದಲ್ಲಿ ಪಥ ಬದಲಾಯಿಸಿದರೂ ಗುರಿಯನ್ನು ಬದಲಾಯಿಸಬಾರದೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಭಾಸ್ಕರ ಹಂದೆಯವರು ವಹಿಸಿ ಶೈಕ್ಶಣಿಕ ಪಥದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಂಸಿದರು. ಜೊತೆ ಕಾರ್ಯದರ್ಶಿ ಶ್ರೀ ಪಿ. ಮಂಜುನಾಥ ಉಪಾಧ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸದಸ್ಯರಾದ ಶ್ರೀ ವಸಂತ ಶೆಟ್ಟಿ, ಶ್ರೀ ಶ್ರೀಪತಿ ಹೇರ್ಳೆ, ಶ್ರೀ ಲಕ್ಷ್ಮಿನಾರಾಯಣ ಕಾರಂತ್ ಉಪಸ್ಥಿತರಿದ್ದರು.

ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಚೇಂಪಿ ರಮಾನಂದ ಭಟ್ ಉಪಸ್ತಿತರಿದ್ದರು.
ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ, ಶ್ರೀಮತಿ ಪ್ರೀತಿ ರೇಖಾ, ಶ್ರೀ ಪ್ರೇಮಾಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಸೃಷ್ಠಿ, ಸಮೀಕ್ಷಾ, ಸಿಂಚನಾ, ಸುಜನ ಉಪಾಧ್ಯ ಇವರನ್ನು ವಿಶೇಷವಾಗಿ ಗುರುತಿಸಲಾಯಿತು.
ಉಪನ್ಯಾಸಕ ಶ್ರೀ ಶಿವಪ್ರಸಾದ ಶೆಟ್ಟಿಗಾರ ಕಾರ್ಯಕ್ರಮ ನಿರ್ವಹಿಸಿ, ಶ್ರೀ ಸುಬ್ರಹ್ಮಣ್ಯ್ ಭಟ್ ವಂದಿಸಿದರು.