• By vjcuser
  • June 12, 2026

ಕೋಟ , ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಸಂಸದೀಯ ಮಾದರಿಯಲ್ಲಿ ಚುನಾವಣೆ

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ 2026 – 27 ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಇ ವಿ ಎಂ ಮೂಲಕ ಚುನಾವಣೆ ನಡೆಸಲಾಯಿತು.


ಇಂದು ಬೆಳಗ್ಗೆ ಚುನಾವಣೆ ಬಗ್ಗೆ ಘೋಷಣೆ, ನಾಮಪತ್ರ ಸಲ್ಲಿಸಲು ಅವಕಾಶ, ನಾಮಪತ್ರ ಪರಿಶೀಲನೆ ನಡೆಸಿ ಬಳಿಕ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು.
ಚುನಾವಣಾ ಅಭ್ಯರ್ಥಿ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ ತೆರಳಿ ಮತಯಾಚನೆಗೆ ಅವಕಾಶ ಕಲ್ಪಿಸಲಾಯಿತು.
ಕಾಲೇಜು ಮುಖಂಡನ ಸ್ಥಾನಕ್ಕೆ10 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.


ಹೈಸ್ಕೂಲ್ ವಿಭಾಗದಿಂದ ಉಪ ಮುಖಂಡ ಸ್ಥಾನಕ್ಕೆ 2 ಸ್ಪರ್ಧಿಸಿದ್ದರು.
ಕಾಲೇಜು ಮುಖಂಡನ ಸ್ಥಾನಕ್ಕೆ ದ್ವಿತೀಯ ಪಿಯುಸಿ ಬಿ ವಿಭಾಗದ ನಿಶಾಂತ್ ಪಿ ಕಿಣಿ ಮತ್ತು ಉಪಮುಖಂಡನ ಸ್ಥಾನಕ್ಕೆ ಪ್ರೌಢಶಾಲಾ ವಿಭಾಗದ ಪ್ರಥಮ್ ಇವರು ಆಯ್ಕೆಯಾಗಿರುತ್ತಾರೆ.

ಸಂಸ್ಥೆಯ ಉಪನ್ಯಾಸಕರು,ಅಧ್ಯಾಪಕ ಮತ್ತು ಸಿಬ್ಬಂದಿಗಳು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ವೇದಿಕೆಯಲ್ಲಿ ಹೈಸ್ಕೂಲ್ ವಿಭಾಗದ ಶ್ರೀ ಪ್ರೇಮಾನಂದ, ಚುನಾವಣಾ ಸಂಚಾಲಕರಾದ ಶ್ರೀ ಗಣೇಶ್ ಕುಮಾರ್ ಶೆಟ್ಟಿ, ಶ್ರೀ ಸುವೀರ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ಮತದಾನ , ಮತದಾನದ ಹಕ್ಕು ಮತ್ತು ನಿರ್ಭೀತಿಯಿಂದ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು.

vjcuser

previous post next post

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy