ವಿವೇಕ ಬಾಲಕಿಯರ ಪ್ರೌಢಶಾಲೆಯ ಆರೋಗ್ಯ ಸಂಘ ಹಾಗೂ ಮಕ್ಕಳ ಹಕ್ಕುಗಳ ಸಂಘ ವತಿಯಿಂದ “ತಂಬಾಕು ವಿರೋಧಿ” ಕಾರ್ಯಕ್ರಮದಲ್ಲಿ ಡಾಕ್ಟರ್ ಶ್ರೀ ಮಾಧವ ಪೈ ಯವರು ಭಾಗವಹಿಸಿ ,ತಂಬಾಕು ಮತ್ತು ನಿಕೋಟಿನ್ ಸೇವನೆಯು ನೇರವಾಗಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದ್ದು, ಸಮಾಜದಲ್ಲಿ ಶೇಕಡಾ 29 ರಷ್ಟು ಜನರು ವಿವಿಧ ರೀತಿಯ ಕ್ಯಾನ್ಸರ್ ರೋಗದಿಂದ ನರಳುತ್ತಿದ್ದಾರೆ. ನಶ್ಯ, ಸಿಗರೇಟು, ಗುಟ್ಕಾದಂತಹ ತಂಬಾಕು ಉತ್ಪನ್ನಗಳು ನೇರವಾಗಿ ಸಾವಿಗೆ ಆಹ್ವಾನ ನೀಡುತ್ತಿವೆ .
ಸ್ತ್ರೀಯರ ತಂಬಾಕು ಸೇವನೆ ಮತ್ತು ಧೂಮಪಾನ ಮಾಡುವುದರಿಂದ ಗರ್ಭಕೋಶದ ಕ್ಯಾನ್ಸರ್ ಬರುವ ಪ್ರಮಾಣ ತೀವ್ರವಾಗಿ ಜಾಸ್ತಿಯಾಗುತ್ತಿದೆ .
ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಇವುಗಳ ಆಕರ್ಷಣೆಗಳಿಗೆ ಒಳಗಾಗಿ ಶಿಕ್ಷಣದ ಗುರಿಯನ್ನು ಬಿಟ್ಟು ದಾರಿ ತಪ್ಪುವ ಸಂಭವ ಹೆಚ್ಚು ಇರುತ್ತದೆ. ಆದ್ದರಿಂದ, ಶಾಲೆಗಳಲ್ಲಿ ಈ ಹಂತದಲ್ಲೇ ತಂಬಾಕು ವಿರೋಧಿ ಮೌಲ್ಯ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಮಕ್ಕಳಲ್ಲಿ ಮೈಗೂಡಿಸಬೇಕು. ಈ ನಿಟ್ಟಿನಲ್ಲಿ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ ಪೋಷಕರು ಹೆಚ್ಚಿನ ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು ಡಾ. ಪೈಯವರು ಪ್ರತಿಪಾದಿಸಿದರು
ಆರೋಗ್ಯ ಸಂಘದ ಸಂಚಾಲಕಿ ಶ್ರೀಮತಿ ಮಮತಾ, ಕಾರ್ಯದರ್ಶಿ ಸಾನ್ವಿ, ಮಕ್ಕಳ ಹಕ್ಕುಗಳ ಸಂಘದ ಸಂಚಾಲಕಿ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಕಾರ್ಯದರ್ಶಿ ಅವನಿ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು