ಕೋಟ ವಿವೇಕ ಪದವಿ ಪೂರ್ವ ಕಾಲೇಜು .
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆ ಹಾಗು ಹೃದಯಘಾತ ಇದರ ಕುರಿತಾಗಿ ವಿಜ್ಞಾನ ಸಂಘದ ವತಿಯಿಂದ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರದ ಸಂಪನ್ಮೂಲ ವ್ಯಕ್ತಿಯಾಗಿ ಡಾl ಪ್ರಭಾವತಿ, ಹೃದ್ರೋಗ ತಜ್ಞೆ ಜಯದೇವ ಆಸ್ಪತ್ರೆ ಬೆಂಗಳೂರು ಇಲ್ಲಿನ ಪ್ರಾಧ್ಯಾಪಕ ರು ಆದ ಇವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ, ಮತ್ತು ಆಹಾರ ಕ್ರಮ, ಒತ್ತಡದ ಬದುಕಿನಿಂದಾಗಿ ಹೆಚ್ಚು ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತಗಳು ಹೆಚ್ಚುತ್ತಿದೆ.
ಆದ್ದರಿಂದ ನಾವು ಬದುಕುವ ರೀತಿ, ಸೇವಿಸುವ ಆಹಾರ ಕ್ರಮ ಒಂದು ನಿಯಮದಿಂದ ಕೂಡಿರಬೇಕು. ಅಧಿಕ ಕೊಬ್ಬನ್ನು ಹೆಚ್ಚಿಸುವ, ಆರೋಗ್ಯವನ್ನು ಹಾಳು ಮಾಡುವ ಜಂಕ್ ಫುಡ್ ಗಳನ್ನು ಸೇವಿಸಲೇಬಾರದು. ಪ್ರತಿನಿತ್ಯ ವಾಕಿಂಗ್, ವ್ಯಾಯಾಮ ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡು ಯಾವುದನ್ನು ಅತಿಯಾಗಿ ವರ್ತಿಸದೆ ಸಂತೋಷದಿಂದ ಬದುಕಬೇಕೆಂದು ತಿಳಿಸಿದರು. ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಹೃದಯ ,ಹೃದಯ ಸಂಬಂಧಿ ಕಾಯಿಲೆ ಬಗ್ಗೆ ವಿವರಿಸಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕ್ರಮದ ಬಗ್ಗೆ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ಜೀವಶಾಸ್ತ್ರ ಉಪನ್ಯಾಸಕ ಶ್ರೀ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿ, ಶ್ರೀ ಚಂದ್ರಶೇಖರ್ ಹೆಚ್ ಎಸ್ ವಂದಿಸಿದರು. ಸಂಘದ ಸಂಚಾಲಕ ಶ್ರೀ ರವಿಕಾರಂತ್ ಕಾರ್ಯಕ್ರಮ ಸಂಯೋಜಿಸಿದ್ದರು.