• By vjcuser
  • July 28, 2026

ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5ರಂದು ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಶಾಂತಿ ವಿಹಾರದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿ ಮತ್ತು ಉಪಯುಕ್ತತೆ ಬಗ್ಗೆ ತಿಳಿಸಲಾಯಿತು , ಪರಿಸರವೆಂದರೆ ನಮ್ಮ ಸುತ್ತಮುತ್ತಲಿನ ಅವಕಾಶ ಗಿಡಮರ, ಪ್ರಾಣಿ ಪಕ್ಷಿ,ಸಕಲ ಜೀವ ಜಂತುಗಳನ್ನು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರಲ್ಲೂ ಇದೆ. ಎನ್ನುವ ಜಾಗೃತಿ ಸಂದೇಶವನ್ನು ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ನಾಗರತ್ನ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರೇಮಾನಂದ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ರತಿಬಾಯಿ ಹಾಗೂ ಎಲ್ಲಾ ಶಿಕ್ಷಕ ವರ್ಗ ಪಾಲ್ಗೊಂಡಿದ್ದರು.

Explore More
  • By vjcuser
  • July 28, 2026

ಎನ್.ಎಂ.ಎಂ.ಎಸ್ (NMMS) ಪರೀಕ್ಷೆಯಲ್ಲಿ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕೋಟ: ಕೋಟದ ವಿವೇಕ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್ (NMMS) ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ತೇರ್ಗಡೆಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕಿಶನ್, ಸೃಜನ್ ಆರ್. ಪೂಜಾರಿ ಮತ್ತು ಪ್ರಸೀದ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಕೋಟ ವಿದ್ಯಾ ಸಂಘ (ರಿ.), ಕೋಟ, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಹಾಗೂ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Explore More
  • By vjcuser
  • July 28, 2026

ಕೋಟ- ಪ್ರಕೃತಿ ಇಲ್ಲದಿದ್ದರೆ ಮನುಕುಲ ಉಳಿಯುವುದಿಲ್ಲ ಹಸಿರು ಜಾಗೃತಿ ಅಗತ್ಯ- ರವೀಂದ್ರ ಕೋಟ

ಕೋಟ: ಪ್ರಕೃತಿ ಇಲ್ಲದೆ ಮನುಕುಲವಿಲ,ಮನುಕುಲಕ್ಕೆ ಅಗತ್ಯವಾದ ಪ್ರಕೃತಿಯ ಮೇಲೆ ನಿರಂತರ ಹಾನಿಗೊಳಿಸುವ ಕಾರ್ಯ ಈ ಮಾನವ ಮಾಡುತ್ತಿದ್ದಾನೆ ಇದರ ಪರಿಣಾಮ ಈಗಾಲೇ ನಾವುಗಳು ಅನುಭವಿಸುತ್ತಿದ್ದೇವೆ ಹೀಗಿರುವಾಗ ಯುವ ಸಮುದಾಯ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲೇ ಬೇಕು ಎಂದು ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಬಾಲಕೀಯರ ಪ್ರೌಢಶಾಲೆಯ ಸ್ವರ್ಣಭವನದಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಗಿಡ ನಡುವ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಸಂದೇಶವನ್ನು ನೀಡಿದರು. ವಿವೇಕ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಪರಿಸರಪ್ರೇಮಿ ಪಂಚವರ್ಣದ ಮಹೇಶ್ ಬೆಳಗಾವಿ ಮಾತನಾಡಿ ಪರಿಸರದ ಮೇಲೆ ಮಾನವ ದೌರ್ಜನ್ಯ ಎಸೆಗುತ್ತಿದ್ದಾನೆ , ಕಂಡಕoಡಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಮಲಿನಗೊಳಿಸುತ್ತಿದ್ದಾನೆ, ಅಭಿವೃದ್ಧಿ ನೆಪದಲ್ಲಿ ಮರ ಕಡಿದು ಕಾಂಕ್ರೀಟ್ ಕಾಡು ನಿರ್ಮಿಸುತ್ತಿದ್ದಾನೆ ಇದರಿಂದ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ, ಮಳೆಯ ಪ್ರಮಾಣ ಕುಸಿಯಲು ಆರಂಭಿಸಿದೆ ಹೀಗಾದರೆ ಮುಂದಿನ ಸ್ಥಿತಿ ಅಯೋಮಯ ಎಂದರಲ್ಲದೆ ವಿದ್ಯಾರ್ಥಿಗಳೇ ಜಾಗೃತರಾಗಿ ಗಿಡ ನೆಟ್ಟು ಪೋಷಿಸುವ ಕಾರ್ಯ ಮಾಡಿ, ಪ್ಲಾಸ್ಟಿಕ್ ನಿಂದ ಹೊರಬನ್ನಿ ಎಂದು ಕರೆ ನೀಡಿದರು. ಇದೇ ವೇಳೆ ಶಾಲಾ ಕೈತೋಟದಲ್ಲಿ ಬೆಂಡೆ ಬೀಜ ನೆಟ್ಟು ವಿದ್ಯಾರ್ಥಿಗಳಿಗೆ ಸಾವಯೋವ ತರಕಾರಿ ಬೆಳೆಯುವ ಪರಿಯನ್ನು ಶಿಕ್ಷಕರು ನೀಡಿದರು.ಈ ವೇಳೆ ಮಹೇಶ್ ಬೆಳಗಾವಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾವಿಧಿ ಭೋದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ವಹಿಸಿ ಸ್ವಾಗತಿಸಿದರು.ಇಕೋ ಕ್ಲಬ್ ಸಂಚಾಲಕಿ ಶಿಕ್ಷಕಿ ಮಮತಾ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನಘ ಹೊಳ್ಳ, ಸ್ವಾಗತಿಸಿ ನಿರೂಪಿಸಿ ಇಕೋ ಕ್ಲಬ್ ಕಾರ್ಯದರ್ಶಿ ಅಮೂಲ್ಯ ವಂದಿಸಿದರು. ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಬಾಲಕೀಯರ ಪ್ರೌಢಶಾಲೆಯ ಸ್ವರ್ಣಭವನದಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಗಿಡ ನಡುವ ಮೂಲಕ ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಜಾಗೃತಿ ಸಂದೇಶವನ್ನು ನೀಡಿದರು. ಪರಿಸರಪ್ರೇಮಿ ಪಂಚವರ್ಣದ ಮಹೇಶ್ ಬೆಳಗಾವಿ, ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಇಕೋ ಕ್ಲಬ್ ಸಂಚಾಲಕಿ ಮಮತಾ ಇದ್ದರು.

Explore More
  • By vjcuser
  • July 28, 2026

ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲೆಯ ಪ್ರಾರಂಭೋತ್ಸವ

ಕೋಟ ವಿದ್ಯಾ ಸಂಘ ಪ್ರವರ್ತಿತ ವಿವೇಕ ಪದವಿ ಪೂರ್ವ ಕಾಲೇಜು ಪ್ರೌ ಢ ಶಾಲಾ ವಿಭಾಗ ಹಾಗೂ ವಿವೇಕ ಬಾಲಕರ ಪ್ರೌಢ ಶಾಲೆಯ ಪ್ರಾರಂಭೋತ್ಸವ ಇತ್ತೀಚೆಗೆ ನಡೆಯಿತು. ಮಾರ್ಗದರ್ಶಕರಾಗಿ ಬಂದಿದ್ದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರವರು ವಿದ್ಯಾರ್ಥಿಗಳು ಎಳವೆಯಲ್ಲಿಯೆ ಶೈಕ್ಷಣಿಕ ಹರವುಗಳನ್ನು ವಿಸ್ತರಿಸಿಕೊಳ್ಳಬೇಕು. ತಮ್ಮ ನ್ಯೂನತೆ ದೋಷಗಳನ್ನು ಸರಿ ಪಡಿಸಿಕೊಂಡು ಇನ್ನಷ್ಟು ಸಾಮರ್ಥ್ಯ ವೃದ್ಧಿಸಲು ಮತ್ತು ವ್ಯಕ್ತಿತ್ವ ವಿಕಸನಲು ಬೇಕಾದಂತ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳಬೇಕು. ಆ ಎಲ್ಲಾ ವ್ಯವಸ್ಥೆಗಳು ವಿವೇಕ ವಿದ್ಯಾ ಸಂಸ್ಥೆಯಲ್ಲಿ ಇವೆ. ಅದನ್ನ ವಿಫುಲವಾಗಿ ಇವೆ,ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಶ್ರೀ ವೆಂಕಟೇಶ ಉಡುಪರು, ವಿವೇಕ ವಿದ್ಯಾ ಸಂಸ್ಥೆಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳ ಬೆಳವಣಿಗೆ ಇರುವ ಅವಕಾಶಗಳ ಬಗ್ಗೆ ವಿವರ ನೀಡಿದರು.   ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಅಭ್ಯಾಗದ ಮುಖ್ಯಸ್ಥರಾದ ಶ್ರೀ ಪ್ರೇಮಾನಂದರು ಶಾಲಾ ನಿಯಮಗಳನ್ನು ಸು ವಿವರವಾಗಿ ತಿಳಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆ ಹಿರಿಯ ಶಿಕ್ಷಕರಾದ ಶ್ರೀ ನರೇಂದ್ರ ಕುಮಾರ್ ಕೋಟರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

Explore More
  • By vjcuser
  • July 28, 2026

ಕೋಟ – ವಿವೇಕ ಪದವಿಪೂರ್ವ ಕಾಲೇಜಿಗೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ನೂತನ ಚೇರ್ಮನ್ ಶ್ರೀ ರವಿ ಕೋಟ, ಇವರ ಅನಿರೀಕ್ಷಿತ ಭೇಟಿ.

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇದರ ನೂತನ ಚೇರ್ಮನ್ ಎಂ ,ಡಿ ಆಗಿ ಕಾರ್ಯಭಾರವನ್ನು ವಹಿಸಿಕೊಂಡಿರುವ ಶ್ರೀ ರವಿಕೋಟ ಇವರು ಇಂದು ತಾನು ಕಲಿತ ವಿವೇಕ ಪದವಿ ಪೂರ್ವ ಕಾಲೇಜಿಗೆ ಅನೌಪಚಾರಿಕವಾಗಿ ಭೇಟಿ ನೀಡಿದರು. ಅವರು 1986 – 87 ನೇ ಸಾಲಿನ ವಿದ್ಯಾರ್ಥಿಯಾಗಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದು ತಾನು ಕಲಿತ ಸಂಸ್ಥೆಯ ಬಗ್ಗೆ, ಇಲ್ಲಿನ ವಾತಾವರಣದ,ತನಗೆ ಕಲಿಸಿದ ಗುರುಗಳ ಬಗ್ಗೆ ಅನುಭವವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಇವರಿಗೆ ಪ್ರಾಂಶುಪಾಲರಾದ ಜಗದೀಶ ನಾವಡರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಗೌರವಪೂರ್ವಕ ಅಭಿನಂದಿಸಿದರು.

Explore More

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy