ಕೋಟ: ಪ್ರಕೃತಿ ಇಲ್ಲದೆ ಮನುಕುಲವಿಲ,ಮನುಕುಲಕ್ಕೆ ಅಗತ್ಯವಾದ ಪ್ರಕೃತಿಯ ಮೇಲೆ ನಿರಂತರ ಹಾನಿಗೊಳಿಸುವ ಕಾರ್ಯ ಈ ಮಾನವ ಮಾಡುತ್ತಿದ್ದಾನೆ ಇದರ ಪರಿಣಾಮ ಈಗಾಲೇ ನಾವುಗಳು ಅನುಭವಿಸುತ್ತಿದ್ದೇವೆ ಹೀಗಿರುವಾಗ ಯುವ ಸಮುದಾಯ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲೇ ಬೇಕು ಎಂದು ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಬಾಲಕೀಯರ ಪ್ರೌಢಶಾಲೆಯ ಸ್ವರ್ಣಭವನದಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಗಿಡ ನಡುವ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಸಂದೇಶವನ್ನು ನೀಡಿದರು.
ವಿವೇಕ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಪರಿಸರಪ್ರೇಮಿ ಪಂಚವರ್ಣದ ಮಹೇಶ್ ಬೆಳಗಾವಿ ಮಾತನಾಡಿ ಪರಿಸರದ ಮೇಲೆ ಮಾನವ ದೌರ್ಜನ್ಯ ಎಸೆಗುತ್ತಿದ್ದಾನೆ , ಕಂಡಕoಡಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಮಲಿನಗೊಳಿಸುತ್ತಿದ್ದಾನೆ, ಅಭಿವೃದ್ಧಿ ನೆಪದಲ್ಲಿ ಮರ ಕಡಿದು ಕಾಂಕ್ರೀಟ್ ಕಾಡು ನಿರ್ಮಿಸುತ್ತಿದ್ದಾನೆ ಇದರಿಂದ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ, ಮಳೆಯ ಪ್ರಮಾಣ ಕುಸಿಯಲು ಆರಂಭಿಸಿದೆ ಹೀಗಾದರೆ ಮುಂದಿನ ಸ್ಥಿತಿ ಅಯೋಮಯ ಎಂದರಲ್ಲದೆ ವಿದ್ಯಾರ್ಥಿಗಳೇ ಜಾಗೃತರಾಗಿ ಗಿಡ ನೆಟ್ಟು ಪೋಷಿಸುವ ಕಾರ್ಯ ಮಾಡಿ, ಪ್ಲಾಸ್ಟಿಕ್ ನಿಂದ ಹೊರಬನ್ನಿ ಎಂದು ಕರೆ ನೀಡಿದರು.
ಇದೇ ವೇಳೆ ಶಾಲಾ ಕೈತೋಟದಲ್ಲಿ ಬೆಂಡೆ ಬೀಜ ನೆಟ್ಟು ವಿದ್ಯಾರ್ಥಿಗಳಿಗೆ ಸಾವಯೋವ ತರಕಾರಿ ಬೆಳೆಯುವ ಪರಿಯನ್ನು ಶಿಕ್ಷಕರು ನೀಡಿದರು.ಈ ವೇಳೆ ಮಹೇಶ್ ಬೆಳಗಾವಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾವಿಧಿ ಭೋದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ವಹಿಸಿ ಸ್ವಾಗತಿಸಿದರು.ಇಕೋ ಕ್ಲಬ್ ಸಂಚಾಲಕಿ ಶಿಕ್ಷಕಿ ಮಮತಾ, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನಘ ಹೊಳ್ಳ, ಸ್ವಾಗತಿಸಿ ನಿರೂಪಿಸಿ ಇಕೋ ಕ್ಲಬ್ ಕಾರ್ಯದರ್ಶಿ ಅಮೂಲ್ಯ ವಂದಿಸಿದರು. ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಬಾಲಕೀಯರ ಪ್ರೌಢಶಾಲೆಯ ಸ್ವರ್ಣಭವನದಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಗಿಡ ನಡುವ ಮೂಲಕ ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಜಾಗೃತಿ ಸಂದೇಶವನ್ನು ನೀಡಿದರು. ಪರಿಸರಪ್ರೇಮಿ ಪಂಚವರ್ಣದ ಮಹೇಶ್ ಬೆಳಗಾವಿ, ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಇಕೋ ಕ್ಲಬ್ ಸಂಚಾಲಕಿ ಮಮತಾ ಇದ್ದರು.