ಕೋಟ ವಿದ್ಯಾ ಸಂಘ ಪ್ರವರ್ತಿತ ವಿವೇಕ ಪದವಿ ಪೂರ್ವ ಕಾಲೇಜು ಪ್ರೌ ಢ ಶಾಲಾ ವಿಭಾಗ ಹಾಗೂ ವಿವೇಕ ಬಾಲಕರ ಪ್ರೌಢ ಶಾಲೆಯ ಪ್ರಾರಂಭೋತ್ಸವ ಇತ್ತೀಚೆಗೆ ನಡೆಯಿತು. ಮಾರ್ಗದರ್ಶಕರಾಗಿ ಬಂದಿದ್ದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರವರು ವಿದ್ಯಾರ್ಥಿಗಳು ಎಳವೆಯಲ್ಲಿಯೆ ಶೈಕ್ಷಣಿಕ ಹರವುಗಳನ್ನು ವಿಸ್ತರಿಸಿಕೊಳ್ಳಬೇಕು. ತಮ್ಮ ನ್ಯೂನತೆ ದೋಷಗಳನ್ನು ಸರಿ ಪಡಿಸಿಕೊಂಡು ಇನ್ನಷ್ಟು ಸಾಮರ್ಥ್ಯ ವೃದ್ಧಿಸಲು ಮತ್ತು ವ್ಯಕ್ತಿತ್ವ ವಿಕಸನಲು ಬೇಕಾದಂತ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳಬೇಕು. ಆ ಎಲ್ಲಾ ವ್ಯವಸ್ಥೆಗಳು ವಿವೇಕ ವಿದ್ಯಾ ಸಂಸ್ಥೆಯಲ್ಲಿ ಇವೆ. ಅದನ್ನ ವಿಫುಲವಾಗಿ ಇವೆ,ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಶ್ರೀ ವೆಂಕಟೇಶ ಉಡುಪರು, ವಿವೇಕ ವಿದ್ಯಾ ಸಂಸ್ಥೆಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳ ಬೆಳವಣಿಗೆ ಇರುವ ಅವಕಾಶಗಳ ಬಗ್ಗೆ ವಿವರ ನೀಡಿದರು.
ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಅಭ್ಯಾಗದ ಮುಖ್ಯಸ್ಥರಾದ ಶ್ರೀ ಪ್ರೇಮಾನಂದರು ಶಾಲಾ ನಿಯಮಗಳನ್ನು ಸು ವಿವರವಾಗಿ ತಿಳಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆ ಹಿರಿಯ ಶಿಕ್ಷಕರಾದ ಶ್ರೀ ನರೇಂದ್ರ ಕುಮಾರ್ ಕೋಟರವರು ಕಾರ್ಯಕ್ರಮವನ್ನು ನಿರ್ವಹಿಸಿದರು.