• By vjcuser
  • April 15, 2026

ಸಮಾಜಶಾಸ್ತ್ರ ಉಪನ್ಯಾಸಕರಿಗೆ ವಿದಾಯ ಸಮಾರಂಭ

ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ 30 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ  ಇಲಾಖೆ ನಿಯಮದಂತೆ ವಯೋ ನಿವೃತ್ತಿ ಹೊಂದಿದ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಇವರನ್ನು ಕೋಟ ವಿದ್ಯಾ ಸಂಘ ಮತ್ತು ವಿವೇಕ ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗ ದ ಆಶ್ರಯದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷರಾದ  ಸಿ.ಎ. ಪಿ. ಪ್ರಭಾಕರಮಯ್ಯ ಇವರು ವಹಿಸಿ ನಿವೃತ್ತರ ಸೇವೆಯನ್ನು ಸ್ಮರಿಸಿಕೊಂಡರು.

ಕಾರ್ಯದರ್ಶಿ  ಎಂ, ರಾಮದೇವ ಐತಾಳ್ ಇವರು ನಿವೃತ್ತರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಉಪನ್ಯಾಸಕ ಶ್ರೀ ಸಂಜೀವ ಜಿ, ಮತ್ತು ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ ಇವರು ನಿವೃತ್ತರ ಕುರಿತಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.  ಶ್ರೀ ಅಶೋಕ್ ಕುಮಾರ್ ಶೆಟ್ಟಿ ಅವರು ಸನ್ಮಾನ ಸ್ವೀಕರಿಸಿ ತಮ್ಮ ಸೇವಾ ಜೀವನದ ಅನುಭವಗಳನ್ನು ಹಂಚಿಕೊಂಡರು.

ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಇಂಗ್ಲಿಷ್ ಮೀಡಿಯಂ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ರೇಖಾ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ವಿದ್ಯಾ ಸಂಸ್ಥೆಗಳ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು. ಬಾಲಕರ ಪ್ರೌಢಶಾಲೆಯ ಮುಖ್ಯಸಹ ಶಿಕ್ಷಕ ಶ್ರೀ ಪ್ರೇಮಾನಂದ ವಂದಿಸಿ, ಶಿಕ್ಷಕಿ  ಶ್ರೀಮತಿ ರತಿ ಬಾಯಿ ಕಾರ್ಯಕ್ರಮ ನಿರೂಪಿಸಿದರು

vjcuser

previous post next post

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy