ಕೋಟ
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೊತೆಗೆ ಎಲ್ಲಿ ,ಹೇಗೆ ಮಾತನಾಡಬೇಕು ಸಮಯ, ಸಂದರ್ಭ ಮತ್ತು ವ್ಯಕ್ತಿಗಳನ್ನು ನೋಡಿ ಮಾತನಾಡುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.
ಬಿಡುವಿನ ವೇಳೆಯಲ್ಲಿ ಉತ್ತಮ ಲೇಖನಗಳನ್ನು ಪುಸ್ತಕಗಳನ್ನು ಓದುವುದರ ಮೂಲಕ ವಿಷಯಜ್ಞಾನವನ್ನು ಸಂಪಾದಿಸಬೇಕು. ಭಾಷೆಗಳ ಬಗ್ಗೆ ವಿಶೇಷವಾದ ಗಮನ ಹರಿಸಿ ಹೆಚ್ಚೆಚ್ಚು ಭಾಷೆಗಳನ್ನು ಕಲಿಯುವುದರಿಂದ ವ್ಯವಹರಿಸಲುಸಹಕಾರಿಯಾಗುತ್ತದೆ. ಧೃತಿಗೆಡದೆ ಧೈರ್ಯದಿಂದ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಲ್ಲಿ ಮುಂದೆ ಉತ್ತಮ ವಾಗ್ಮಿ ಆಗಲು ಸಾಧ್ಯ , ಎಂದು ರೇಡಿಯೋ ಕುಂದಾಪುರ 89. 6FM ಇದರ ಕಾರ್ಯ ನಿರ್ವಾಹಕಿ ಶ್ರೀಮತಿ ಜ್ಯೋತಿ ಸಾಲಿಗ್ರಾಮ ತಿಳಿಸಿದರು.
ಅವರು ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಏರ್ಪಡಿಸಿದ ಸಂವಹನ ಕಲೆ ಈ ಕುರಿತಾಗಿ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಪ್ರಾಪ್ತಿ ಕಾರ್ಯಕ್ರಮ ನಿರೂಪಿಸಿ, ಸಂಘದ ಸಂಚಾಲಕ ಶ್ರೀ ಚಂದ್ರಶೇಖರ್ ಹೆಚ್ ಎಸ್ ವಂದಿಸಿದರು.