ಕೋಟ
ವಿವೇಕ ಪದವಿಪೂರ್ವಕಾಲೇಜಿನ ಈ ಶೈಕ್ಷಣಿಕ ವರ್ಷದ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿನೆರವೇರಿತು.
ಉದ್ಘಾಟಕರಾಗಿ, ಪ್ರೊ,ಬಾಲಕೃಷ್ಣ ಶೆಟ್ಟಿನಿವೃತ್ತ ಪ್ರಾಂಶುಪಾಲರು, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆಕಾಲೇಜು ಕಟೀಲು. ಇವರು ಆಗಮಿಸಿ ತಮ್ಮ ನುಡಿಮುತ್ತುಗಳ ಮೂಲಕ ಸಾಹಿತ್ಯ ಸಂಘವನ್ನುಉದ್ಘಾಟಿಸಿ ಮಾತನಾಡಿ ‘ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಸುಪ್ತ ಪ್ರತಿಭೆ ಇರುತ್ತದೆ ಅದನ್ನುವ್ಯಕ್ತಪಡಿಸಲು ಉತ್ತಮ ಲೇಖಕರ ಕೃತಿಗಳನ್ನುಓದಿ ಸರಿಯಾಗಿ ಅರ್ಥೈಸಿಕೊಂಡು ಕಥೆ ಕವನ, ಹನಿಗವನ ಲೇಖನಗಳನ್ನುಬರೆಯುವ ಅಭ್ಯಾಸ ವಿದ್ಯಾರ್ಥಿದೆಸೆಯಲ್ಲಿರೂಡಿಸಿಕೊಳ್ಳಬೇಕು, ಸಾಹಿತ್ಯವು ಮನುಷ್ಯ ಮನುಷ್ಯರ ನಡುವೆ ಸಹೃದಯತೆಯನ್ನುಮೂಡಿಸುತ್ತದೆ. ವಿದ್ಯಾರ್ಥಿಗಳು ಫೇಸ್ಬುಕ್, ವಾಟ್ಸಾಪ್ ಇನ್ಸಟಾ ಗ್ರಾಂ ಮುಂತಾದವುಗಳಲ್ಲಿವ್ಯರ್ಥವಾಗಿ ಸಮಯವನ್ನುಹಾಳು ಮಾಡುವುದರ ಬದಲು ಸಾಹಿತ್ಯದಲ್ಲಿಅಭಿರುಚಿಯನ್ನ ಬೆಳೆಸಿಕೊಂಡು ಹೃದಯವಂತರಾಗಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಜಗದೀಶ ನಾವುಡರು ಅತಿಥಿಗಳನ್ನುಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಭೂಮಿಕಾ ಕಾರ್ಯಕ್ರಮ ನಿರ್ವಹಿಸಿ ,ಉಪನ್ಯಾಸಕ ಶ್ರೀಸದಾಶಿವ ಹೊಳ್ಳ ವಂದಿಸಿದರು ಸಂಘದ ಸಂಚಾಲಕ ಶ್ರೀಚಂದ್ರಶೇಖರ ಎಚ್ಎಸ್ ಕಾರ್ಯಕ್ರಮ ಸಂಯೋಜಿಸಿದ್ದರು.