
ಕೋಟ 2024 25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಕೋಟ ವಿದ್ಯಾಸಂಘ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಪುರಸ್ಕರಿಸುವ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರ ಡಯಟ್ ಉಡುಪಿ ಇದರ ಪ್ರಾಂಶುಪಾಲರಾದ ಡಾ l l ಶ್ರೀ. ಅಶೋಕ್ ಕಾಮತ್ ಇವರು ಆಗಮಿಸಿ ವಿದ್ಯಾರ್ಥಿಗಳನ್ನು ದೇಶಸಿ ಮಾತನಾಡಿ, ಕೇವಲ ಪರೀಕ್ಷೆಗಳಲ್ಲಿ ಗಳಿಸಿದ ಅಂಕವೇ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ, ಭವಿಷ್ಯಕ್ಕೆ ಸಹಕಾರಿಯಾಗದು ವಿದ್ಯಾರ್ಥಿಗಳು ಶಾಲೆಗಳಲ್ಲಿ ಅಧ್ಯಾಪಕರು ನೀಡಿದ ತಿಳುವಳಿಕೆ , ಸಂಸ್ಕಾರಯುತ ಜೀವನ ಮೌಲ್ಯಗಳು ಮತ್ತು ಇಚ್ಚಿಸಿದ ವಿಷಯಗಳಲ್ಲಿ ಸ್ವತಃ ತೆಗೆದುಕೊಳ್ಳುವ ನಿರ್ಣಯಗಳು ಶ್ರದ್ಧೆ ಮತ್ತು ಪ್ರಯತ್ನ ಇವುಗಳಿಂದ ಉತ್ತಮ ಭವಿಷ್ಯ ನಿರೂಪಿಸಿಕೊಳ್ಳಬಹುದೆಂದು ತಿಳಿಸಿದರು.
ಅವರು ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷ ಸಿ ,ಎ ಶ್ರೀ ಪ್ರಭಾಕರ್ ಮಯ್ಯ ವಹಿಸಿದ್ದರು. ಕೋಶಾಧಿಕಾರಿ ಶ್ರೀ ವೆಲೇರಿಯನ್ ಮೆನೆಜಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ಎಂ ರಾಮದೇವ ಐತಾಳ್ ಉಪಸ್ಥಿತರಿದ್ದರು. ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇo ಪಿ ಶ್ರೀ ರಮಾನಂದ ಭಟ್ ಹಾಜರಿದ್ದರು. ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ, ಶ್ರೀಮತಿ ಪ್ರೀತಿರೇಖಾ, ಶ್ರೀ ಪ್ರೇಮಾನಂದ್ ಉಪಸ್ಥಿತರಿದ್ದರು.
ವಿಜ್ಞಾನ ವಿಭಾಗದಲ್ಲಿ ವಿಶೇಷ ಸಾಧನೆಗೈದ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಕುಮಾರಿ ಸಾನಿತಾ, ಶ್ರೀ ರಾಮ್ ಕೆ ಎನ್ ,ಹತ್ತನೇ ಸ್ಥಾನ ಪಡೆದ ಕೇಶವ್ ಉಪಾಧ್ಯ ಇವರನ್ನು ಪೋಷಕರ ಸಮ್ಮುಖದಲ್ಲಿವಿಶೇಷವಾಗಿ ಸನ್ಮಾನಿಸಲಾಯಿತು. ಉಪನ್ಯಾಸಕ ಶ್ರೀ ಶ್ರೀಕಾಂತ ಚಡಗ ಕಾರ್ಯಕ್ರಮ ನಿರೂಪಿಸಿ, ಶ್ರೀ ಶಿವಪ್ರಸಾದ್ ಶೆಟ್ಟಿಗಾರ್ ವಂದಿಸಿದರು.