ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇದರ ನೂತನ ಚೇರ್ಮನ್ ಎಂ ,ಡಿ ಆಗಿ ಕಾರ್ಯಭಾರವನ್ನು ವಹಿಸಿಕೊಂಡಿರುವ ಶ್ರೀ ರವಿಕೋಟ ಇವರು ಇಂದು ತಾನು ಕಲಿತ ವಿವೇಕ ಪದವಿ ಪೂರ್ವ ಕಾಲೇಜಿಗೆ ಅನೌಪಚಾರಿಕವಾಗಿ ಭೇಟಿ ನೀಡಿದರು.

ಅವರು 1986 – 87 ನೇ ಸಾಲಿನ ವಿದ್ಯಾರ್ಥಿಯಾಗಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದು ತಾನು ಕಲಿತ ಸಂಸ್ಥೆಯ ಬಗ್ಗೆ, ಇಲ್ಲಿನ ವಾತಾವರಣದ,ತನಗೆ ಕಲಿಸಿದ ಗುರುಗಳ ಬಗ್ಗೆ ಅನುಭವವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.

ಇವರಿಗೆ ಪ್ರಾಂಶುಪಾಲರಾದ ಜಗದೀಶ ನಾವಡರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಗೌರವಪೂರ್ವಕ ಅಭಿನಂದಿಸಿದರು.