• By vjcuser
  • February 28, 2026

ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಖೊಖೊ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ. ಕೋಟ ವಿದ್ಯಾಸಂಘ  ರಿ ಕೋಟ, ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ಸಂಯುಕ್ತಆಶ್ರಯದಲ್ಲಿ ಪದವಿ ಪೂರ್ವ ವಿಭಾಗದ ಬಾಲಕ ಬಾಲಕಿಯರ ಖೊ  ಖೋ ಪಂದ್ಯಾಟದ ಉದ್ಘಾಟನಾ ಸಮಾರಂಭ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ, ಡಾ । ಎಚ್ ,ವಿ ಸೋಮಿಯಾಜಿ, ನಿವೃತ್ತ ಪ್ರಾಂಶುಪಾಲರು ಎಸ್ ಎಂ ಎಸ್ ಪದವಿ ಕಾಲೇಜು ಬ್ರಹ್ಮಾವರ ಇವರು ದೀಪ ಬೆಳಗಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ಸಾಹದಿಂದ, ಕ್ರೀಡಾ ಸ್ಪೂರ್ತಿಯಿಂದ ಆಟೋಟದಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಖೋ  ಖೋ ಆಟದಿಂದ ವಿದ್ಯಾರ್ಥಿಗಳಲ್ಲಿ ಸಂಘಟಿತ ಶಕ್ತಿ, ಜಾಗರೂಕತೆ, ಮತ್ತು ಚುರುಕುತನವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಕೇವಲ ಗೆಲುವನ್ನ ಅಪೇಕ್ಷಿಸದೆ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸಬೇಕೆಂದು ಅರುಣಿಮಾ ಸಿನ್ಹಾ ಅವರ ಜೀವನದ ಕಥೆಯನ್ನು ವಿವರಿಸುತ್ತಾ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾ ಸಂಘದ ಕಾರ್ಯದರ್ಶಿ ಎಂ ರಾಮದೇವ ಐತಾಳ ವಹಿಸಿದ್ದರು. ವಿದ್ಯಾಸಂಘದ ಸದಸ್ಯರಾದ ಶ್ರೀ ವಸಂತ ಶೆಟ್ಟಿ ಇವರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶನಾವುಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕ್ರೀಡಾಪರಿವೇಕ್ಷಕರಾದ  ಶ್ರೀನವೀನ್ ಚಂದ್ರ ನಾಯಕ್  ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ರೇಖಾ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಪ್ರಾರ್ಥಿಸಿ, ಶ್ರೀ ಪ್ರೇಮಾನಂದ್ ಧನ್ಯವಾದವಿತ್ತರು. ಶ್ರೀ ಚಂದ್ರಶೇಖರ್ ಹೆಚ್ ಕಾರ್ಯಕ್ರಮ ನಿರೂಪಿಸಿದರು.

ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಕೋಟ ವಿದ್ಯಾ ಸಂಘದ ಸದಸ್ಯರಾದ  ಶ್ರೀ ವಸಂತ್ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೈ ಸದಾರಾಮ ಹೇರ್ಳೆ, ಉಪಾಧ್ಯಕ್ಷರು ವಿವೇಕ ಹಿಂದಿನ ವಿದ್ಯಾರ್ಥಿ ಸಂಘ, ಮತ್ತು ಶ್ರೀ ಸುಬ್ರಾಯ ಆಚಾರ್ ಕೋಟ , ಇವರು  ವಿದ್ಯಾರ್ಥಿಗಳಿಗೆ ಶುಭಹಾರೈಸಿ ವಿಜೇತ ತಂಡಗಳಿಗೆ ಪಾರಿತೋಷಕ ವಿತರಿಸಿದರು. ಹಿರಿಯ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಬಾಲಕರ ಮತ್ತು ಬಾಲಕಿಯರ  ಎರಡೂ ವಿಭಾಗಗಳಲ್ಲಿ ಬ್ರಹ್ಮಾವರ ತಾಲೂಕು ಪ್ರಶಸ್ತಿ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದೆ.

ಶ್ರೀ ಶಿವಪ್ರಸಾದ್ ಶೆಟ್ಟಿಗಾರ್ ನಿರೂಪಿಸಿದರು.

ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ವಿಶ್ವನಾಥ ನಾಯಕ್ ಸಹಕರಿಸಿದರು.

vjcuser

previous post next post

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy