• By vjcuser
  • July 29, 2026

ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5ರಂದು ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಶಾಂತಿ ವಿಹಾರದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿ ಮತ್ತು ಉಪಯುಕ್ತತೆ ಬಗ್ಗೆ ತಿಳಿಸಲಾಯಿತು , ಪರಿಸರವೆಂದರೆ ನಮ್ಮ ಸುತ್ತಮುತ್ತಲಿನ ಅವಕಾಶ ಗಿಡಮರ, ಪ್ರಾಣಿ ಪಕ್ಷಿ,ಸಕಲ ಜೀವ ಜಂತುಗಳನ್ನು ಪೋಷಿಸುವ ಜವಾಬ್ದಾರಿ ನಮ್ಮೆಲ್ಲರಲ್ಲೂ ಇದೆ. ಎನ್ನುವ ಜಾಗೃತಿ ಸಂದೇಶವನ್ನು ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ನಾಗರತ್ನ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರೇಮಾನಂದ ಹಾಗೂ ಹಿರಿಯ ಶಿಕ್ಷಕಿ ಶ್ರೀಮತಿ ರತಿಬಾಯಿ ಹಾಗೂ ಎಲ್ಲಾ ಶಿಕ್ಷಕ ವರ್ಗ ಪಾಲ್ಗೊಂಡಿದ್ದರು.

Explore More
  • By vjcuser
  • July 29, 2026

ಎನ್.ಎಂ.ಎಂ.ಎಸ್ (NMMS) ಪರೀಕ್ಷೆಯಲ್ಲಿ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕೋಟ: ಕೋಟದ ವಿವೇಕ ಪದವಿಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು ಎನ್.ಎಂ.ಎಂ.ಎಸ್ (NMMS) ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ತೇರ್ಗಡೆಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಕಿಶನ್, ಸೃಜನ್ ಆರ್. ಪೂಜಾರಿ ಮತ್ತು ಪ್ರಸೀದ ಅವರನ್ನು ಕಾಲೇಜಿನ ಆಡಳಿತ ಮಂಡಳಿ, ಕೋಟ ವಿದ್ಯಾ ಸಂಘ (ರಿ.), ಕೋಟ, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಹಾಗೂ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Explore More
  • By vjcuser
  • July 29, 2026

ಕೋಟ- ಪ್ರಕೃತಿ ಇಲ್ಲದಿದ್ದರೆ ಮನುಕುಲ ಉಳಿಯುವುದಿಲ್ಲ ಹಸಿರು ಜಾಗೃತಿ ಅಗತ್ಯ- ರವೀಂದ್ರ ಕೋಟ

ಕೋಟ: ಪ್ರಕೃತಿ ಇಲ್ಲದೆ ಮನುಕುಲವಿಲ,ಮನುಕುಲಕ್ಕೆ ಅಗತ್ಯವಾದ ಪ್ರಕೃತಿಯ ಮೇಲೆ ನಿರಂತರ ಹಾನಿಗೊಳಿಸುವ ಕಾರ್ಯ ಈ ಮಾನವ ಮಾಡುತ್ತಿದ್ದಾನೆ ಇದರ ಪರಿಣಾಮ ಈಗಾಲೇ ನಾವುಗಳು ಅನುಭವಿಸುತ್ತಿದ್ದೇವೆ ಹೀಗಿರುವಾಗ ಯುವ ಸಮುದಾಯ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲೇ ಬೇಕು ಎಂದು ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಬಾಲಕೀಯರ ಪ್ರೌಢಶಾಲೆಯ ಸ್ವರ್ಣಭವನದಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಗಿಡ ನಡುವ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಸಂದೇಶವನ್ನು ನೀಡಿದರು. ವಿವೇಕ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನ ಸ್ವೀಕರಿಸಿ ಪರಿಸರಪ್ರೇಮಿ ಪಂಚವರ್ಣದ ಮಹೇಶ್ ಬೆಳಗಾವಿ ಮಾತನಾಡಿ ಪರಿಸರದ ಮೇಲೆ ಮಾನವ ದೌರ್ಜನ್ಯ ಎಸೆಗುತ್ತಿದ್ದಾನೆ , ಕಂಡಕoಡಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಮಲಿನಗೊಳಿಸುತ್ತಿದ್ದಾನೆ, ಅಭಿವೃದ್ಧಿ ನೆಪದಲ್ಲಿ ಮರ ಕಡಿದು ಕಾಂಕ್ರೀಟ್ ಕಾಡು ನಿರ್ಮಿಸುತ್ತಿದ್ದಾನೆ ಇದರಿಂದ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ, ಮಳೆಯ ಪ್ರಮಾಣ ಕುಸಿಯಲು ಆರಂಭಿಸಿದೆ ಹೀಗಾದರೆ ಮುಂದಿನ ಸ್ಥಿತಿ ಅಯೋಮಯ ಎಂದರಲ್ಲದೆ ವಿದ್ಯಾರ್ಥಿಗಳೇ ಜಾಗೃತರಾಗಿ ಗಿಡ ನೆಟ್ಟು ಪೋಷಿಸುವ ಕಾರ್ಯ ಮಾಡಿ, ಪ್ಲಾಸ್ಟಿಕ್ ನಿಂದ ಹೊರಬನ್ನಿ ಎಂದು ಕರೆ ನೀಡಿದರು. ಇದೇ ವೇಳೆ ಶಾಲಾ ಕೈತೋಟದಲ್ಲಿ ಬೆಂಡೆ ಬೀಜ ನೆಟ್ಟು ವಿದ್ಯಾರ್ಥಿಗಳಿಗೆ ಸಾವಯೋವ ತರಕಾರಿ ಬೆಳೆಯುವ ಪರಿಯನ್ನು ಶಿಕ್ಷಕರು ನೀಡಿದರು.ಈ ವೇಳೆ ಮಹೇಶ್ ಬೆಳಗಾವಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾವಿಧಿ ಭೋದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ ವಹಿಸಿ ಸ್ವಾಗತಿಸಿದರು.ಇಕೋ ಕ್ಲಬ್ ಸಂಚಾಲಕಿ ಶಿಕ್ಷಕಿ ಮಮತಾ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನಘ ಹೊಳ್ಳ, ಸ್ವಾಗತಿಸಿ ನಿರೂಪಿಸಿ ಇಕೋ ಕ್ಲಬ್ ಕಾರ್ಯದರ್ಶಿ ಅಮೂಲ್ಯ ವಂದಿಸಿದರು. ಕೋಟದ ವಿವೇಕ ವಿದ್ಯಾಸಂಸ್ಥೆಯ ವಿವೇಕ ಬಾಲಕೀಯರ ಪ್ರೌಢಶಾಲೆಯ ಸ್ವರ್ಣಭವನದಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಗಿಡ ನಡುವ ಮೂಲಕ ಪತ್ರಕರ್ತ ರವೀಂದ್ರ ಕೋಟ ವಿದ್ಯಾರ್ಥಿಗಳಿಗೆ ಜಾಗೃತಿ ಸಂದೇಶವನ್ನು ನೀಡಿದರು. ಪರಿಸರಪ್ರೇಮಿ ಪಂಚವರ್ಣದ ಮಹೇಶ್ ಬೆಳಗಾವಿ, ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಇಕೋ ಕ್ಲಬ್ ಸಂಚಾಲಕಿ ಮಮತಾ ಇದ್ದರು.

Explore More
  • By vjcuser
  • July 29, 2026

ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲೆಯ ಪ್ರಾರಂಭೋತ್ಸವ

ಕೋಟ ವಿದ್ಯಾ ಸಂಘ ಪ್ರವರ್ತಿತ ವಿವೇಕ ಪದವಿ ಪೂರ್ವ ಕಾಲೇಜು ಪ್ರೌ ಢ ಶಾಲಾ ವಿಭಾಗ ಹಾಗೂ ವಿವೇಕ ಬಾಲಕರ ಪ್ರೌಢ ಶಾಲೆಯ ಪ್ರಾರಂಭೋತ್ಸವ ಇತ್ತೀಚೆಗೆ ನಡೆಯಿತು. ಮಾರ್ಗದರ್ಶಕರಾಗಿ ಬಂದಿದ್ದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರವರು ವಿದ್ಯಾರ್ಥಿಗಳು ಎಳವೆಯಲ್ಲಿಯೆ ಶೈಕ್ಷಣಿಕ ಹರವುಗಳನ್ನು ವಿಸ್ತರಿಸಿಕೊಳ್ಳಬೇಕು. ತಮ್ಮ ನ್ಯೂನತೆ ದೋಷಗಳನ್ನು ಸರಿ ಪಡಿಸಿಕೊಂಡು ಇನ್ನಷ್ಟು ಸಾಮರ್ಥ್ಯ ವೃದ್ಧಿಸಲು ಮತ್ತು ವ್ಯಕ್ತಿತ್ವ ವಿಕಸನಲು ಬೇಕಾದಂತ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳಬೇಕು. ಆ ಎಲ್ಲಾ ವ್ಯವಸ್ಥೆಗಳು ವಿವೇಕ ವಿದ್ಯಾ ಸಂಸ್ಥೆಯಲ್ಲಿ ಇವೆ. ಅದನ್ನ ವಿಫುಲವಾಗಿ ಇವೆ,ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಶ್ರೀ ವೆಂಕಟೇಶ ಉಡುಪರು, ವಿವೇಕ ವಿದ್ಯಾ ಸಂಸ್ಥೆಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳ ಬೆಳವಣಿಗೆ ಇರುವ ಅವಕಾಶಗಳ ಬಗ್ಗೆ ವಿವರ ನೀಡಿದರು.   ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಅಭ್ಯಾಗದ ಮುಖ್ಯಸ್ಥರಾದ ಶ್ರೀ ಪ್ರೇಮಾನಂದರು ಶಾಲಾ ನಿಯಮಗಳನ್ನು ಸು ವಿವರವಾಗಿ ತಿಳಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆ ಹಿರಿಯ ಶಿಕ್ಷಕರಾದ ಶ್ರೀ ನರೇಂದ್ರ ಕುಮಾರ್ ಕೋಟರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

Explore More
  • By vjcuser
  • July 29, 2026

ಕೋಟ – ವಿವೇಕ ಪದವಿಪೂರ್ವ ಕಾಲೇಜಿಗೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ನೂತನ ಚೇರ್ಮನ್ ಶ್ರೀ ರವಿ ಕೋಟ, ಇವರ ಅನಿರೀಕ್ಷಿತ ಭೇಟಿ.

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇದರ ನೂತನ ಚೇರ್ಮನ್ ಎಂ ,ಡಿ ಆಗಿ ಕಾರ್ಯಭಾರವನ್ನು ವಹಿಸಿಕೊಂಡಿರುವ ಶ್ರೀ ರವಿಕೋಟ ಇವರು ಇಂದು ತಾನು ಕಲಿತ ವಿವೇಕ ಪದವಿ ಪೂರ್ವ ಕಾಲೇಜಿಗೆ ಅನೌಪಚಾರಿಕವಾಗಿ ಭೇಟಿ ನೀಡಿದರು. ಅವರು 1986 – 87 ನೇ ಸಾಲಿನ ವಿದ್ಯಾರ್ಥಿಯಾಗಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದು ತಾನು ಕಲಿತ ಸಂಸ್ಥೆಯ ಬಗ್ಗೆ, ಇಲ್ಲಿನ ವಾತಾವರಣದ,ತನಗೆ ಕಲಿಸಿದ ಗುರುಗಳ ಬಗ್ಗೆ ಅನುಭವವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು. ಇವರಿಗೆ ಪ್ರಾಂಶುಪಾಲರಾದ ಜಗದೀಶ ನಾವಡರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಗೌರವಪೂರ್ವಕ ಅಭಿನಂದಿಸಿದರು.

Explore More
  • By vjcuser
  • July 29, 2026

ರಾಜ್ಯಮಟ್ಟದಲ್ಲಿ ಕೋಟ ವಿವೇಕದ ಶರಧಿಯ ಸಾಧನೆ

ಕೋಟ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು ಇವರು  ತುಮಕೂರಿನಲ್ಲಿ ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ  ಶರಧಿ ಇವರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಕಳೆದ ಬಾರಿಯೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ ಇವರಿಗೆ ಕೋಟವಿದ್ಯಾ ಸಂಘದ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದೆ.

Explore More
  • By vjcuser
  • July 29, 2026

ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶರಧಿ ರಾಜ್ಯಮಟ್ಟಕ್ಕೆ

ಕೋಟ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು ಇವರು  ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ನಡೆಸಿದ ವಿಭಾಗಿಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ  ಶರಧಿ ಇವರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ . ಇವರಿಗೆ ಕೋಟವಿದ್ಯಾ ಸಂಘ ದ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Explore More
  • By vjcuser
  • July 29, 2026

ಕೋಟ ವಿವೇಕ ವಿದ್ಯಾಸಂಸ್ಥೆಯ ಸಂಭ್ರಮದ ವಾರ್ಷಿಕೋತ್ಸವಕ್ಕೆ ಚಾಲನೆ ವಿವೇಕ ವಿದ್ಯಾಸಂಸ್ಥೆ ಶೈಕ್ಷಣಿಕ ಕ್ಷೇತ್ರದ ಹೆಮ್ಮೆ ದೇಗುಲ- ಚಿತ್ರನಟಿ ಶೀತಲ್ ಶೆಟ್ಟಿ

ಕೋಟ:ಶೈಕ್ಷಣಿಕ ಕ್ಷೇತ್ರದಲ್ಲಿ ವಿವೇಕ ವಿದ್ಯಾಸಂಸ್ಥೆಯ ಹೆಮ್ಮೆ ವಿದ್ಯಾದೇಗುಲ ಇಲ್ಲಿನ ಶಿಕ್ಷಣ ಗುಣಮಟ್ಟ ಅದ್ಭುತವಾದದ್ದು ಎಂದು ಕನ್ನಡದ ಚಿತ್ರನಟಿ ಶೀತಲ್ ಶೆಟ್ಟಿ ಹೇಳಿದರು. ಶುಕ್ರವಾರ ಕೋಟ ವಿದ್ಯಾಸಂಘ , ಕೋಟ ವಿವೇಕ ವಿದ್ಯಾಸಂಸ್ಥೆಗಳು, ಕೋಟ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಶಿಕ್ಷಣದಲ್ಲಿ ವಿವಿಧ ಸ್ತರಗಳ ಬಗ್ಗೆ ಚಿಂತಿಸುತ್ತೇವೆ ಆದರೆ ಮುಂದೆ ಹೋದಾಗ ನಮ್ಮಲ್ಲಿರುವ ಕೌಶಲ್ಯ ಕೆಲಸ ಮಾಡುತ್ತದೆ ಅದೇ ಮುಂದೆ ನಮ್ಮ ದಾರಿಯನ್ನು ಸುಲಲಿತಗೊಳಿಸುತ್ತದೆ, ಆಯ್ಕೆ ಮಾಡಿಕೊಂಡ ವಿದ್ಯಾಕ್ಷೇತ್ರ ಹೊರತುಪಡಿಸಿ ನಮ್ಮಜೀವನ ಆಯ್ಕೆ ಬೇರೆಯದ್ದೆ ಆಗಿರುತ್ತದೆ, ನಿಮ್ಮಲ್ಲಿರುವ ಸ್ಕೀಲ್ ಇದ್ದರೆ ನಿಮ್ಮನ್ನು ಬಹು ಎತ್ತರಕ್ಕೆ ಕೊಂಡ್ಯೋಯುತ್ತದೆ, ನಮ್ಮ ಆಯ್ಕೆ ನಮ್ಮ ಜೀವನದ ತಳಹದಿಯನ್ನು ಗಟ್ಟಿಗೊಳಿಸುವ ಹಾಗೇ ಮುನ್ನಡೆಯಬೇಕು, ನಿಮ್ಮಲ್ಲಿರು ಅಗಾಧವಾದ ಪ್ರತಿಭೆಗಳನ್ನು ಹೊರ ಚುಮ್ಮಿಸಲು ಪ್ರಯತ್ನಿಸಿ ಆಗ ನಿಮ್ಮ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ, ಜೀವನದಲ್ಲಿ ಸೋಲು ಗೆಲುವು ಇದದ್ದೆ ಸೋತ್ತಿದ್ದೇನೆ ಎಂಬ ಭ್ರಮೆಯಿಂದ ಹೊರಬನ್ನಿ ಭವಿಷ್ಯದ ಭದ್ರ ಬುನಾದಿಗೆ ಪ್ರೇರಕ ಶಕ್ತಿಯಾಗಿ ಜಗತ್ತಿಗೆ ಪ್ರಜ್ವಲಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ. ಪ್ರಭಾಕರ ಮಯ್ಯ ವಹಿಸಿದ್ದರು. ಜಾಗೃತಿ ಸಂಚಿಕೆಯನ್ನು ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯ ಮುಖ್ಯಸ್ಥ ಕಮಲ್ ಕಾರಂತ್ ಐರೋಡಿ ಬಿಡುಗಡೆಗೊಳಿಸಿದರು. ವಿಶೇಷ ಅಥಿತಿಗಳಾದ  ಅಮೇರಿಕರದ ವೈದ್ಯರಾದ ಡಾ.ಶ್ರೀಪತಿ ಹೊಳ್ಳ ಇವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ವೇದಿಕೆಯಲ್ಲಿದ್ದ ಮೂವರು ಹಿಂದಿನ ವಿದ್ಯಾರ್ಥಿಗಳಾದ ಕಮಲ್ ಕಾರಂತ್ , ಶೀತಲ್ ಶೆಟ್ಟಿ, ಡಾ.ಸ್ವಸ್ತಿಕ್ ಉಪಾಧ್ಯಾ ಇವರುಗಳನ್ನು ಅಭಿನಂದಿಸಲಾಯಿತು. ಅಭ್ಯಾಗತರಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ವೈದ್ಯರಾದ ಡಾ| ಸ್ವಸ್ತಿಕ್ ಉಪಾಧ್ಯ ಪಿ.,ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾಸಂಘದ ಅಧ್ಯಕ್ಷ ರಮಾನಂದ ಭಟ್, ವಿದ್ಯಾಸಂಘದ ಉಪಾಧ್ಯಕ್ಷ ಶ್ರೀಧರ ಉಪಾಧ್ಯಾ, ಕಾರ್ಯದರ್ಶಿ ರಾಮದೇವ ಐತಾಳ್, ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಪ್ರೀತಿ ರೇಖಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿ ಪರಿಚಯಿಸಿದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸದಾಶಿವ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು. ಬಾಲಕರ ವಿಭಾಗದ ಮುಖ್ಯ ಶಿಕ್ಷಕ ಪ್ರೇಮಾನಂದ ವಂದಿಸಿದರು. ಕೋಟ ವಿದ್ಯಾಸಂಘ ,ಕೋಟ ವಿವೇಕ ವಿದ್ಯಾಸಂಸ್ಥೆಗಳು, ಕೋಟ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಶೇಷ ಅಥಿತಿಗಳಾದ  ಅಮೇರಿಕರದ ವೈದ್ಯರಾದ ಡಾ.ಶ್ರೀಪತಿ ಹೊಳ್ಳ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ. ಪ್ರಭಾಕರ ಮಯ್ಯ ಇದ್ದರು.

Explore More
  • By vjcuser
  • July 29, 2026

ನಿಧೀಶ ಭಟ್ಟ ರಾಜ್ಯಮಟ್ಟಕ್ಕೆ ಆಯ್ಕೆ

ಕೋಟ: ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಆಶ್ರಯದಲ್ಲಿ ನಡೆದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಹಿಂದೂಸ್ಥಾನಿ ಸಂಗೀತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ ಆದ ನಿಧೀಶ ಭಟ್ಟ. ಈತ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಅಧ್ಯಾಪಕ ಶಂಭು ಭಟ್ಟ ಹಾಗೂ ರಮ್ಯಾ ದಂಪತಿಗಳ ಪುತ್ರನಾಗಿದ್ದಾನೆ.

Explore More
  • By vjcuser
  • July 29, 2026

ಕೋಟ ವಿವೇಕ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ

ಕೋಟ: ಕೋಟ ವಿದ್ಯಾ ಸಂಘ  ಕೋಟ ಇವರ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ಶಿಕ್ಷಣ ಸಂಸ್ಥೆಗಳ 2025ರ ವಾರ್ಷಿಕ ಕ್ರೀಡಾಕೂಟವು ವಿಜೃಂಭಣೆಯಿAದ ನಡೆಯಿತು. ಸಮಾರಂಭವನ್ನು ಭಾರತೀಯ ಮಿಲಿಟರಿಯಲ್ಲಿ ಆಡಳಿತಾತ್ಮಕ ಸಹಾಯಕ ಅಧಿಕಾರಿಯಾಗಿ ಜಾಮ್‌ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿ  ಎಸ್.ಜಿ.ಟಿ. ಶ್ರೀಕಾಂತ್ ಮಧ್ಯಸ್ಥ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಫೂರ್ತಿ ತುಂಬಿದರು. ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ಹಂಚಿಕೊAಡ ಶ್ರೀ ಶ್ರೀಕಾಂತ್ ಮಧ್ಯಸ್ಥ ಅವರು, “ಕ್ರೀಡೆಯು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ. ಕ್ರೀಡೆಯಿಂದ ಕಲಿಯುವ ಶಿಸ್ತು, ಸಂಯಮ ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವವು ಮಿಲಿಟರಿ ಸೇವೆ ಸೇರಿದಂತೆ ಯಾವುದೇ ಉನ್ನತ ಸಾಧನೆಗೆ ಬುನಾದಿಯಾಗುತ್ತದೆ. ಕ್ರೀಡೆಯಲ್ಲಿ ಸಕ್ರಿಯರಾಗಿದ್ದರಿಂದಲೇ ನಾನು ಭಾರತೀಯ ಮಿಲಿಟರಿ ವೃತ್ತಿಯನ್ನು ಆಯ್ಕೆ ಮಾಡಲು ಸಾಧ್ಯವಾಯಿತು” ಎಂದರು. ವಿದ್ಯಾರ್ಥಿ ದಿನಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದ ಬಹುಮಾನ ಪಡೆದಿದ್ದನ್ನು ಸ್ಮರಿಸಿದ ಅವರು, ತಮ್ಮ ಈ ಸಾಧನೆಗೆ ಸಹಕರಿಸಿದ ಎಲ್ಲ ದೈಹಿಕ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿ, ವಿದ್ಯಾರ್ಥಿಗಳು ಕೇವಲ ಗೆಲುವಿಗಾಗಿ ಅಲ್ಲದೇ ಉತ್ತಮ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಯೋಧ  ಶ್ರೀಕಾಂತ್ ಮಧ್ಯಸ್ಥ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೋಟ ವಿದ್ಯಾ ಸಂಘದ ಜತೆ ಕಾರ್ಯದರ್ಶಿ  ಪಿ.ಮಂಜುನಾಥ್ ಉಪಾಧ್ಯಾ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಪ್ರಶಸ್ತಿ ಮುಖ್ಯವಲ್ಲ, ಎಲ್ಲರೂ ಭಾಗವಹಿಸುವುದು ಮುಖ್ಯ ಎಂದು ಕರೆ ನೀಡಿ ಕ್ರೀಡೆಯಿಂದ ಮನಸ್ಸು ಹಗುರವಾಗುತ್ತದೆ ಮತ್ತು ಇದು ಶ್ರೀಕಾಂತ್ ಮಧ್ಯಸ್ಥ ಅವರ ಹಾಗೆ ಉನ್ನತ ಸಾಧನೆ ಗೈಯ್ಯಲು ಸಹಾಯಕ ಎಂದರು. ಈ ಸಂದರ್ಭದಲ್ಲಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ  ಪ್ರೀತಿ ರೇಖಾ, ಬಾಲಕರ ಪ್ರೌಢಶಾಲೆಯ ಹಿರಿಯ ಸಹಾಯಕ ಶಿಕ್ಷಕ ಪ್ರೇಮಾನಂದ ಮತ್ತು ಪ್ರಕಾಶ ಮಧ್ಯಸ್ಥ ಉಪಸ್ಥಿತರಿದ್ದರು. ಕ್ರೀಡೋತ್ಸವವು ವಿವೇಕ ಸಂಸ್ಥೆಯ ವಿದ್ಯಾರ್ಥಿಗಳ ಎನ್‌ಸಿಸಿ ಪರೇಡ್ ಮತ್ತು ಬ್ಯಾಂಡ್‌ನೊoದಿಗೆ ಭವ್ಯವಾದ ಪಥಸಂಚಲನದೊoದಿಗೆ ಆರಂಭಗೊoಡಿತು. ಯೋಧ  ಶ್ರೀಕಾಂತ್ ಮಾಧ್ಯಾಸ್ಥ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಚಂದ್ರಶೇಖರ್ ಎಚ್.ಎಸ್., ನರೇಂದ್ರ ಕುಮಾರ್, ಶಿವಪ್ರಸಾದ್ ಶೆಟ್ಟಿಗಾರ್ ಹಾಗೂ ಮಹಾಲಕ್ಷ್ಮೀ ಅವರು ನಿರ್ವಹಿಸಿದರು. ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ ಸ್ವಾಗತಿಸಿದರು. ಕ್ರೀಡಾಕೂಟದ ಜವಾಬ್ದಾರಿಯನ್ನು ದೈಹಿಕ ಶಿಕ್ಷಕರಾದ ಮಮತಾ,  ಗಣೇಶ್ ಶೆಟ್ಟಿ,  ವಿಶ್ವನಾಥ್ ನಾಯಕ್ ಹಾಗೂ  ರಕ್ಷತ್ ಅವರು ಯಶಸ್ವಿಯಾಗಿ ನಿಭಾಯಿಸಿದರು. ಕೋಟ ವಿದ್ಯಾ ಸಂಘ  ಕೋಟ ಇವರ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ಶಿಕ್ಷಣ ಸಂಸ್ಥೆಗಳ 2025ರ ವಾರ್ಷಿಕ ಕ್ರೀಡಾಕೂಟದಲ್ಲಿ ಯೋಧ  ಶ್ರೀಕಾಂತ್ ಮಧ್ಯಸ್ಥ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ವಿವೇಕ ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ, ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ  ಪ್ರೀತಿ ರೇಖಾ ಇದ್ದರು.

Explore More

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy