2026 ನೇ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು
ಕಲಾ ವಿಭಾಗದ ಲ್ಲಿ ವಿಶಿಷ್ಟ ಶ್ರೇಣಿಯ ಲ್ಲಿ ಉತ್ತೀರ್ಣ ಹೊಂದಿದ 145 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕಾರ್ಯ ಕ್ರಮ ದ ಮುಖ್ಯ ಅತಿಥಿಯಾಗಿ ಶ್ರೀ. C A ಅಮರೀಶ ಹೊಳ್ಳ , ಫೌಂಡರ್, ಪಾಟ್ನರ ಹೊಳ್ಳಮಿತ್ರನ್ Co Ltd ಬೆಂಗಳೂರು.ಇವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ನಿಖರ ಗುರಿ ಹೊಂದಿರಬೇಕು. ಏಕಾಗ್ರತೆ, ಸ್ವ ಅಧ್ಯಯನ, ನಿರಂತರ ಪರಿಶ್ರಮ ದಿಂದ ಗುರಿಯನ್ನು ತಲುಪಲು ಸಾಧ್ಯ. ನಮಗೆ ಎದುರಾಗುವ ಸಮಸ್ಯೆ ಗಳನ್ನು ಬಗೆಹರಿಸುವ ಕೌಶಲ ಹೊಂದಿರಬೇಕೆಂದು ತಿಳಿಸಿದರು.

ಕಾರ್ಯ ಕ್ರಮ ಅಧ್ಯಕ್ಷತೆ ಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷ ಶ್ರೀ ಪಿ ಭಾಸ್ಕರ ಹಂಧೆ ಇವರು ವಹಿಸಿದ್ದರು.

ಸದಸ್ಯರಾದ ಶ್ರೀ ಶ್ರೀ ಶ್ರೀಪತಿ ಹೇರ್ಳೆ ಶುಭಾಶಂಸನೆಗೈದರು.

ವೇದಿಕೆ ಮೇಲೆ ಜೊತೆ ಕಾರ್ಯದರ್ಶಿ ಶ್ರೀ ಪಿ ,ಮಂಜುನಾಥ ಉಪಾಧ್ಯ ಶ್ರೀ ವಸಂತ ಶೆಟ್ಟಿ,ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೆಂಪಿ ಶ್ರೀ ರಮಾನಂದ ಭಟ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ರಾಜ್ಯಮಟ್ಟದಲ್ಲಿ 5 6, 7 ,9ನೇ ಸ್ಥಾನ ಪಡೆದ ಸಾತ್ವಿಕಾ ಶ್ರೀಯಾನ್, ಅಪೇಕ್ಷಾ ಪೂಜಾರಿ ,ಭೂಮಿಕಾ ಟಿ ,ಡಿ, ಶರಣ್ಯಾ ವಾರಂಬಳ್ಳಿ,ಚೈತ್ರಾ ವಿ ಇವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು.

ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ, ಶ್ರೀಮತಿ ಪ್ರೀತಿರೇಖಾ, ಶ್ರೀ ಪ್ರೇಮಾನಂದ ಹಾಜರಿದ್ದರು. ಉಪನ್ಯಾಸಕಿ ಶ್ರೀಮತಿ ಶೋಭಾ ಮೇಡಂ ವಂದಿಸಿ , ಶ್ರೀ ಅಮಿತ್ ನಿರೂಪಿಸಿದರು.