
ಕೋಟ, ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆ ಮತ್ತು ವಿದ್ಯಾರ್ಥಿ ಸಂಸತ್ತು ರಚನೆಯಾಗಿ ರೂಪಗೊಂಡಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಸಂಸತ್ತಿನ ರಚನೆ, ಅದರ ಪ್ರಕ್ರಿಯೆ, ಆಡಳಿತಾತ್ಮಕ ವೈಖರಿ ಈ ವ್ಯವಸ್ಥೆಗಳ ಬಗ್ಗೆ ತಿಳಿಯಲು ಅನುಕೂಲಕರವಾಗುತ್ತದೆ. ಎಂದು ಶಿರಿಯಾರ ಶ್ರೀ ಗೋಪಾಲಕೃಷ್ಣ ಶೆಟ್ಟಿ, ವಕೀಲರು, ಕುಂದಾಪುರ ಬಾರ್ ಅಸೋಸಿಯೇಷನ್ ಅಧ್ಯಕ್ಷರು ತಿಳಿಸಿದರು.
ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರ್ಕಾರವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸತ್ತಿನ ಬಗ್ಗೆ ತಿಳಿಸಿ ವಿದ್ಯಾರ್ಥಿ ಸರ್ಕಾರದ ಮಂತ್ರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಈ ಪ್ರೇಮಾನಂದ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸರ್ಕಾರದ ವಾಕ್ಪತಿ ಅಭಿರಾಮ ಅಡಿಗ, ಉಪ ವಾಕ್ಪತಿ ಉಲ್ಲಾಸ್ ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿ ಸರಕಾರದ ಸಂಯೋಜಕರಾದ ಉಪನ್ಯಾಸಕ ಶ್ರೀ ಗಣೇಶ್ ಕುಮಾರ್ ಶೆಟ್ಟಿ, ಶಿಕ್ಷಕಿ ಶ್ರೀಮತಿ ರತಿ ಬಾಯಿ ಕಾರ್ಯಕ್ರಮಸಂಯೋಜಿಸಿದ್ದರು.
ಮುಖ್ಯಮಂತ್ರಿ ,ವಿದ್ಯಾರ್ಥಿ ನಾಯಕ ಸುಶಾನ ಶೆಟ್ಟಿ ಸ್ವಾಗತಿಸಿದರು. ಉಪ ಮುಖ್ಯಮಂತ್ರಿ ಸಮೃದ್ಧ ಜೀವನ್ ವಂದಿಸಿ, ಕುಮಾರಿ ಸಾತ್ವಿಕಾ ಶ್ರೀಯಾನ್ ನಿರೂಪಿಸಿದರು.