• By kotaadmin
  • July 14, 2025

ಆಸಕ್ತಿ ,ಕುತೂಹಲ ,ಪ್ರಯತ್ನದಿಂದ ಸಾಧನೆ ಸಾಧ್ಯ.

ಕೋಟ, ವಿದ್ಯಾರ್ಥಿಗಳು ತಮಗೆ ಇಷ್ಟವಾದ  ವಿಷಯದ ಕುರಿತು ಮೊದಲು ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಜೊತೆ ಜೊತೆಗೆ ಹೊಸಹೊಸ ಸಾಧ್ಯತೆಗೆ ಕುತೂಹಲ ಚಿತ್ತರಾಗಿ ಪ್ರಯತ್ನ ಮಾಡಿದರೆ ಜೀವನದಲ್ಲಿ ಸಾಧನೆಯನ್ನ ಮಾಡಬಹುದು, ಎಂದು ಐಟಿ ಉದ್ಯೋಗಿಯಾಗಿದ್ದು ಪ್ರಸ್ತುತ ಪರಂ ಫೌಂಡೇಶನ್ ಬೆಂಗಳೂರು ಇದರ ಓರ್ವ ಟ್ರಸ್ಟಿಯಾದ ಶ್ರೀ ರಾಧಾಕೃಷ್ಣ ಹೊಳ್ಳ ಇವರು ತಿಳಿಸಿದರು.

ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ , ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ, ಈ ವಿಷಯದ ಕುರಿತಾಗಿ ಮಾತನಾಡುತ್ತಾ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು, ಕುತೂಹಲ ಗುಣಗಳನ್ನು ಬೆಳೆಸಿಕೊಂಡು ಹೊಸ ಹೊಸ ಅನ್ವೇಷಣೆಯನ್ನು  ಮಾಡಿ, ಸಾಧನೆಯನ್ನು ಮಾಡಿ ರಾಷ್ಟ್ರಕ್ಕೆ ಸಮರ್ಪಣೆ ಮಾಡ ಬೇಕು ತನ್ಮೂಲಕವಾಗಿ  ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿಕೈಜೋಡಿಸಬೇಕೆಂದು ತಿಳಿಸಿ ದೇಶ ಮೊದಲು ಆಮೇಲೆ ನಾವು ಈ ಭಾವನೆಯೊಂದಿಗೆ ಈ ದೇಶದ ನಾಗರಿಕರಾಗಿ ಈ ಭೂಮಿಗೆ ಉತ್ತಮ ಕೊಡುಗೆಯನ್ನು ನೀಡುವಂತಾಗಬೇಕೆಂದು ಅನೇಕ ಉದಾಹರಣೆಯೊಂದಿಗೆ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ಶ್ರೀ ರವಿಕಾರಂತ್ ವಂದಿಸಿ, ಶ್ರೀ ಸದಾಶಿವ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

kotaadmin

previous post next post

Stay Connected With Child's Learning

Download the Parent App now!

contact info

Social Media Link

Copyright© 2025 Kota Vidya Sangha (R.) Kota | Powered By D-apps, Kumbashi                                            Privacy Policy