
ಕೋಟ, ವಿವೇಕ ವಿದ್ಯಾ ಸಂಸ್ಥೆಗಳ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾಮಗಾರಿ ಯೋಜನೆ ಅಡಿಯಲ್ಲಿ, ಸಿ ಎಸ್ ಆರ್ ಯೋಜನೆಯಡಿಯಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇವರು ಒದಗಿಸಿರುವ ಸೋಲಾರ್ ವಿದ್ಯುತ್ ಘಟಕದ ಉದ್ಘಾಟನಾ ಸಮಾರಂಭವು ಜರುಗಿತು.
ಸೋಲಾರ್ ವಿದ್ಯುತ್ ಘಟಕದ ಉದ್ಘಾಟನೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ ಶ್ರೀ ರಾಜ ಬಿ ಎಸ್ ಮಹಾ ಪ್ರಬಂಧಕರು, ಮುಖ್ಯಸ್ಥರು ಬ್ರಾಂಚ್ ಬ್ಯಾಂಕಿಂಗ್ ಡಿಪಾರ್ಟ್ಮೆಂಟ್ ಪ್ರಧಾನ ಕಚೇರಿ, ಮಂಗಳೂರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕರ್ನಾಟಕ ಬ್ಯಾಂಕ್ ಸಿಎಸ್ಆರ್ ಯೋಜನೆ ಅಡಿಯಲ್ಲಿ ಸೋಲಾರ್ ವಿದ್ಯುತ್ ಘಟಕ ನೀಡಿದ್ದು ಇದರ ಸಾರ್ಥಕ ಸದುಪಯೋಗವಾಗಲಿ, ವಿದ್ಯಾರ್ಥಿಗಳು ಜ್ಞಾನದ ಹಸಿವನ್ನ ಬೆಳೆಸಿಕೊಳ್ಳಬೇಕು, ಹೇಗೆ ಹಸಿದವನು ಮಾತ್ರ ಚೆನ್ನಾಗಿ ಆಹಾರ ಸೇವಿಸಬಲ್ಲ .ಹಾಗೆ ಜ್ಞಾನ ಪಿಪಾಸು ಮಾತ್ರ ಚೆನ್ನಾಗಿ ಜ್ಞಾನವನ್ನು ಸಂಗ್ರಹಿಸಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಚೆನ್ನಾಗಿ ಓದಿ ಉತ್ತಮ ಹುದ್ದೆಯನ್ನು ಹೊಂದಿ ಉತ್ತಮ ನಾಗರಿಕರಾಗಬೇಕೆಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಕೆ ವಾದಿರಾಜ್, ಸಹಾಯಕ ಮಹಾ ಪ್ರಬಂಧಕರು ಕ್ಷೇತ್ರಿಯ ಕಚೇರಿ ಉಡುಪಿ ಇವರು ಮಾತನಾಡಿ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಈ ಹಿಂದೆ ಓದಿದ ಅನೇಕ ವಿದ್ಯಾರ್ಥಿಗಳು ಕರ್ನಾಟಕ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ, ವಿದ್ಯಾರ್ಥಿಗಳು ಮೊಬೈಲ್ ಗೀಳನ್ನ ಬೆಳೆಸಿಕೊಳ್ಳದೆ, ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಸಿಎ ಪ್ರಭಾಕರ ಮಯ್ಯರು ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿ ಕರ್ನಾಟಕ ಬ್ಯಾಂಕಿನ ಈ ಕೊಡುಗೆಯನ್ನು ಸ್ಮರಿಸಿ ಕೊಂಡಾಡಿದರು.
ಕಾರ್ಯದರ್ಶಿ ಎಂ ರಾಮದೇವ ಐತಾಳರು ಶುಭ ಹಾರೈಸಿದರು. ಕೋಶಾಧಿಕಾರಿ ಶ್ರೀ ವೆಲೇರಿಯನ ಮೆನೇಜಸ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಜಗದೀಶ ನಾವುಡರು ಸ್ವಾಗತಿಸಿದರು, ಪರಿಸರದ ವಿವಿಧ ಕರ್ನಾಟಕ ಬ್ಯಾಂಕಿನ ಮುಖ್ಯಸ್ಥರು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಬಾಲಕರ ಪ್ರೌಢಶಾಲೆಯ ಮುಖ್ಯಸ್ಥರಾದ ಶ್ರೀ ಪ್ರೇಮಾನಂದ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ರೇಖಾ ಉಪಸ್ಥಿತರಿದ್ದರು. ಕೋಟ ವಿದ್ಯಾ ಸಂಘದ ಎಲ್ಲ ಪದಾಧಿಕಾರಿಗಳು ,ವಿದ್ಯಾಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ ಧನ್ಯವಾದ ನೀಡಿದರು, ಶಿಕ್ಷಕ ಶ್ರೀ ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.