
ಸನ್ಮಾನ್ಯ ಸಭಾಧ್ಯಕ್ಷರಿಗೆ, ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರಿಗೆ, ಪೂಜ್ಯ ಗುರುವೃಂದಕ್ಕೆ, ಆಡಳಿತ ಮಂಡಳಿಯ ಹಾಗೂ ಹಿಂದಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ, ಎಲ್ಲ ಆಹ್ವಾನಿತರಿಗೆ ಹಾಗೂ ನನ್ನೋಲವಿನ ಸ್ನೇಹಿತರಿಗೆ ಗೌರವಪೂರ್ವಕವಾದ ನಮನವನ್ನು ಸಲ್ಲಿಸುತ್ತಾ, ತಮ್ಮೆಲ್ಲರ ಅನುಮತಿಯ ಮೇರೆಗೆ 2024-2025ನೆಯ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರದ ವರದಿಯನ್ನು ತಮ್ಮ ಮುಂದಿಡಲು ಆಷಿಸುತ್ತೇನೆ.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮೌಲ್ಯಗಳ ಮತ್ತು ಸಂಸದೀಯ ನಡವಳಿಕೆಗಳ ಅರಿವು ಮೂಡಿಸಿ, ಅವರನ್ನು ಪ್ರಜ್ಞಾವಂತ ಪ್ರಜೆಗಳಾಗಿ ರೂಪಿಸುವ ಗುರಿಯನ್ನು ಹೊಂದಿರುವ ಶಾಲಾ ಸಂಸತ್ತಿನ ರಚನೆಗಾಗಿ 15-06-2024ರಂದು ನಡೆದ ಚುನಾವಣೆಯಲ್ಲಿ ಕೇಶವ ಉಪಾಧ್ಯ, ವಿದ್ಯಾರ್ಥಿ ನಾಯಕನಾಗಿ ಹಾಗು ವಿದ್ಯಾರ್ಥಿನಿ ಮುಖಂಡಳಾಗಿ ಶುೃತ ಆರ್. ಹೆಬ್ಬಾರ್ ಮತ್ತು ಸಮೀಕ್ಷಾ ಜೋಗಿ, ಉ ಇವರು ಆಯ್ಕೆಯಾದರು. ಶಾಲಾ ಸಂಸತ್ತಿನ ವಾಕ್ಪತಿಯಾಗಿ ಅದಿತಿದೇವಿ, ಆರಿಸಲ್ಪಟ್ಟರು.
ದಿನಾಂಕ 08-07-2024ರಂದು ವಿದ್ಯಾರ್ಥಿ ಸಂಸತ್ತನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ ಕುಂದರ್ ಇವರು ಉದ್ಘಾಟಿಸಿದರು. ಅದೇ ದಿನ ಪ್ರತಿಜ್ಞಾಬದ್ಧರಾದ ಸಂಸತ್ತಿನ ಸದಸ್ಯರನ್ನು ಪ್ರತಿನಿಧಿಸುವ ಮಂತ್ರಿಮಂಡಲವನ್ನು ರಚಿಸಲಾಯಿತು.
ವರದಿ ವರ್ಷದಲ್ಲಿ ವಿದ್ಯಾರ್ಥಿ ಸರಕಾರವು ತನ್ನ ಅಂಗ-ಸಂಘಗಳಾದ ಸಾಹಿತ್ಯ ಸಂಘ, ಇಂಟರ್ಯಾಕ್ಟ್ ಕ್ಲಬ್, ಸಮಾಜಸೇವಾ ಸಂಘ, ವಾಣಿಜ್ಯ ಸಂಘ, ವಿಜ್ಞಾನ ಸಂಘವಾಗಿರುವ ‘ವಿಶನ್’ ಹಾಗೂ ಕ್ರೀಡಾ ವಿಭಾಗಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯ ಸಸಿಗೆ ಸಾರ ನೀರೆರೆಯಬಲ್ಲ ಹಾಗೂ ಅವರ ವ್ಯಕ್ತಿತ್ವದ ಬೆಳೆಸಿಗೆ ಪೂರಕವೂ, ಪ್ರೇರಕವೂ ಆಗಬಲ್ಲ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ. ಯಶಸ್ಸಿನ ಶಿಲ್ಪಗಳ ಪ್ರತಿಬಿಂಬವನ್ನು ತಮ್ಮ ಮುಂದಿಡಬಯಸುತ್ತೇನೆ.
ಪ್ರತಿ ಬಾರಿಯಂತೆ ಈ ಬಾರಿಯೂ ವಿಜ್ಞಾನ, ವಾಣಿಜ್ಯ ಹಾಗು ಕಲಾ ವಿಭಾಗಗಳಲ್ಲಿ ವಿಶಿಷ್ಠ ಶ್ರೇಣಿಯನ್ನು ಪಡೆದವರನ್ನು ಗುರುತಿಸುವ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ 11 ಮತ್ತು 12ರ ಜುಲೈ 2024ರಂದು ನಡೆಯಿತು. ಇದರಲ್ಲಿ 370 ಮಂದಿ ವಿಶಿಷ್ಠ ಶ್ರೇಣಿ ಸಾಧಕರನ್ನು ಪೋಷಕರ, ಗುರುವೃಂದದ, ಆಡಳಿತ ಮಂಡಳಿ ಮತ್ತು ಕಿರಿಯ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಅಭಿನಂದಿಸಲಾಯಿತು.
ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಭೆ ಮತ್ತು ವಿಶೇಷ ಕಾರ್ಯಕ್ರಮಗಳು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಜರಗಿದವು. ಅಕ್ಟೋಬರ್ 2ನೆಯ ತಾರೀಕಿನಂದು ಗಾಂಧಿ ಜಯಂತಿಯ ಪ್ರಯುಕ್ತ ನಮ್ಮ ಸಂಸ್ಥೆಯ ಸಮಾಜಸೇವಾ ಸಂಘವನ್ನು ಶ್ರೀ ಮುರಳಿ ಕಡೇಕಾರ್,ಕಾರ್ಯದರ್ಶಿ, ಯಕ್ಷಗಾನ ಕಲಾಕೇಂದ್ರ ಉಡುಪಿ ಇವರು ಉದ್ಘಾಟಿಸಿದರು. ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳು ಶಾಲಾ ಮೈದಾನದ ಸ್ವಚ್ಛತೆ ಹಾಗು ವನಮಹೋತ್ಸವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನವಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ದಿನಾಂಕ 04/06/2024ರಂದು ನಮ್ಮ ಕಾಲೇಜಿನ ವಿಜ್ಞಾನ ಸಂಘ ‘ವಿಶನ್’ ಇದರ ಉದ್ಘಾಟನೆಯನ್ನು ಎಂ.ಐ.ಟಿ. ಮಣಿಪಾಲದ ಡಾ|| ರವಿ ಪ್ರಕಾಶ್ ವೈ. ಇವರು ಉದ್ಘಾಟನೆಯನ್ನು ನೆರವೇರಿಸಿದರು. ನಂತರ ‘ಖಛಿಜಣಜಿಛಿ ಖಿಟಿಞಟಿರ’ ಎನ್ನುವ ವಿಷಯದ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ನೀಡಿದರು. ದಿನಾಂಕ 08/06/2024ರಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇವರು ನಡೆಸಿದ ‘ಟಿಠಿಡಿಜ ಎಣಟಿಠಡಿ’ ಎನ್ನುವ ಕಾರ್ಯಕ್ರಮದಲ್ಲಿ ನಾನು ಹಾಗೂ ನನ್ನ ಮಿತ್ರರಾದ ಆರನ್ ಹಾಗೂ ಸನಾತನ್ ಇವರು ಭಾಗವಹಿಸಿದ್ದೆವು. ವಿಜ್ಞಾನ ಸಂಘದ ವತಿಯಿಂದ ನಮ್ಮ ಹಳೆ ವಿದ್ಯಾರ್ಥಿ ಶ್ರೀಮತಿ ಶ್ರೀರಕ್ಷಾ ಇವರು ಠಿಠಣತಣಥಿ ಜಿಠಡಿ ಛಜಣಣಜಡಿ ಟಜಿಜ ಎನ್ನುವ ವಿಷಯದಲ್ಲಿ ಹಾಗೂ ಶ್ರೀ ವಿಶ್ವಾಸ್ ನಾವಡ ಕೆ. ಇವರು ವಿದ್ಯಾರ್ಥಿಗಳೊಂದಿಗೆ ಚರ್ಚಾ ಕಾರ್ಯಕ್ರಮವನ್ನು ನಡೆಸಿದರು. ಹಾಗೆಯೇ ಶ್ರೀ ಪೃಥ್ವೀಶ್ ಭಟ್ ಇವರು ಅಥಿಛಜಡಿ ಖಜಛಿಣಡಿಣಥಿ ಕುರಿತು ಮಾಹತಿಯನ್ನು ನೀಡಿದರು. ಅದಲ್ಲದೇ ಮೈಸೂರಿನಲ್ಲಿ ನಡೆದ ವಲಯಮಟ್ಟದ ರೂರಲ್ ಐ.ಟಿ.ಕ್ವಿಜ್ ಸ್ಪರ್ಧೆಯಲ್ಲಿ ನನ್ನ ಮಿತ್ರರಾದ ಶಿವಪ್ರಸಾದ್, ಆರನ್, ಸನತ್ ಎ. ಪೂಜಾರಿ ಇವರು ಭಾಗವಹಿಸಿದ್ದರು. ವಿವಿಧ ಕಾಲೇಜುಗಳಲ್ಲಿ ನಡೆಸಿದ ವಿಜ್ಞಾನ ಸಂಬಂಧಪಟ್ಟ ಸ್ಪರ್ಧೆಗಳಲ್ಲಿ ಸನಾತನ್, ನಾದೇಶ್, ಸಿಂಚನಾ, ಶ್ರೀಕಾ, ಹಸ್ಮಿಯಾ, ಸನತ್ ಎ.ಪೂಜಾರಿ, ಕವನ್ ಶೆಟ್ಟಿ, ಶಿವಪ್ರಸಾದ್, ಸತ್ಯಪ್ರಸಾದ್, ಶ್ರೀರಾಮ್, ಕೇಶವ ಉಪಾಧ್ಯ, ನಿಧಿಶ್ರೀ, ಶ್ರೀನಿಧಿ, ಸಮೀಕ್ಷಾ ಹಾಗೂ ಪ್ರತೀಕ್ಷಾ ಬಹುಮಾನ ಪಡೆದು ಸಂಸ್ಥೆಯ ಕೀತರ್ಿಯನ್ನು ಹೆಚ್ಚಿಸಿದಾರೆ.
ಪ್ರಸಕ್ತ ಸಾಲಿನ ಸಾಹಿತ್ಯ ಸಂಘದ ಉದ್ಘಾಟನೆಯು ದಿನಾಂಕ 15/07/2024ರಂದು ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ ನರೇಂದ್ರ ಕುಮಾರ್ ಇವರಿಂದ ಉದ್ಘಾಟನೆಗೊಂಡಿತು. ದಿನಾಂಕ 05/08/2024ರಂದು ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ರೋ.ತಿಮ್ಮ ಪೂಜಾರಿಯವರು ನಡೆಸಿಕೊಟ್ಟರು. ರಾಜ್ಯಮಟ್ಟದ ಮಕ್ಕಳ ಸಂಸತ್ತು ಸ್ಪಧರ್ೆಗೆ ಸುರಕ್ಷಾ ಇವಳು ಆಯ್ಕೆಯಾಗಿ ಮುಖ್ಯಮಂತ್ರಿಯ ಆಪ್ತಕಾರ್ಯದರ್ಶಿ ಯೊಂದಿಗೆ ಮಾತುಕತೆ ನಡೆಸಿದ್ದಳು.
ಅಲ್ಲದೇ ಈ ಶೈಕ್ಷಣಿಕ ವರ್ಷದಲ್ಲಿ ನಡೆದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಕೂಡಾ ಇಂಟರಾಕ್ಟ್ ಕ್ಲಬ್ ಸಹಭಾಗಿತ್ವ ನೀಡಿದೆ.
2024-25ನೇ ಸಾಲಿನ ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಸಾಂಸ್ಕೃತಿಕ ಸಹಪಠ್ಯೇತರ ಸ್ಫರ್ಧೆಗಳಲ್ಲಿ ಭಾಗವಹಿಸಿ ಶ್ರೀರಕ್ಷ ಸೋಮಯಾಜಿ, ಅಭಿರಾಮ್ ಅಡಿಗ, ಶರಧಿ, ಎಸ್.ಬಿ.ಶುೃತಿ, ನಯನ ವೈ.ಎಸ್. ಪ್ರಶಸ್ತಿ ಪಡೆದು ಮೈಸೂರು ವಿಭಾಗಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ನಮ್ಮ ಸಂಸ್ಥೆಯಲ್ಲಿರುವ ಒಳಾಂಗಣ ಕ್ರೀಡಾಂಗಣ ಸುಸಜ್ಜಿತವಾದ ಓಟದ ಮೈದಾನ, ಕ್ರೀಡಾ ಚಟುವಟಿಕೆಗಳಿಗೆ ಪ್ರೇರಕವಾದ ಸ್ಥಳಾವಕಾಶ, ಎಲ್ಲಕ್ಕಿಂತ ಮಿಗಿಲಾಗಿ ಸಂಸ್ಥೆಯ ನಾಲ್ಕು ಮಂದಿ ಕ್ರೀಡಾ ಶಿಕ್ಷಕರ ಮಾರ್ಗದರ್ಶನಗಳಿಂದ ಕ್ರೀಡಾ ಚಟುವಟಿಕೆಯಲ್ಲಿಯೂ ನನ್ನ ಸ್ನೇಹಿತರು ಹಿಂದೆ ಬಿದ್ದಿಲ್ಲ. ಅಂತರ್ಶಾಲಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ ನನ್ನೆಲ್ಲಾ ಸೋದರ-ಸೋದರಿಯರಿಗೆ ಅಭಿನಂದನೆ.
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ, ಪ್ರಥಮ ಪ್ರಶಸ್ತಿ ಪಡೆದ ತಂಡದಲ್ಲಿ ಭಾಗವಹಿಸಿದ ನಮ್ಮ ಹೆಮ್ಮೆಯ ವಿದ್ಯಾರ್ಥಿ ಶೋಭಿತ್ ಇವರಿಗೆ ಹಾರ್ದಿಕಾ ಅಭಿನಂದನೆಗಳು.
ಕಬಡ್ಡಿ ಪಂದ್ಯಾಟದಲ್ಲಿ ಪ್ರಜ್ವಲ್, ಆಕಾಶ್, ವರುಣ್ ; ಕುಸ್ತಿ ಪಂದ್ಯಾಟದಲ್ಲಿ ವರುಣ್, ರಿತೇಶ್ ಬಾಯರಿ ; ಈಜು ಸ್ಫರ್ಧೆಯಲ್ಲಿ ವೈಭವ್, ಶ್ರೇಯಾಂಕ್ ಐತಾಳ್, ಆಯುಷ್ ಆರ್. ರಾವ್, ವೈಷ್ಣವಿ ಬೆಟ್ಟಿನ್ ; ತ್ರೋಬಾಲ್ ಪಂದ್ಯಾಟದಲ್ಲಿ ದಶಮಿ ಎಲ್. ಶಿವಗಂಗೆ ಹಾಗೂ ಸೃಷ್ಟಿ ಇವರು ಪ್ರಶಸ್ತಿ ಗಳಿಸಿ ರಾಜ್ಯಮಟ್ಟ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ.
ನಮ್ಮ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ತಾಲೂಕುಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸ್ವಯಂ-ಸೇವಕರಾಗಿ ಸಹಕಾರ ನೀಡಿದ ಎಲ್ಲ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ವಿದ್ಯಾಭಿಮಾನಿಗಳೇ, ವಿವೇಕ ವಿದ್ಯಾಸಂಸ್ಥೆಗಳ ಸಾಧಕರ ವರದಿ ಬಹಳಷ್ಟು ಇದ್ದು, ಅದನ್ನು ಕ್ರೋಢಿಕರಿಸಿ ತಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ.
ನಮ್ಮೆಲ್ಲಾ ಸಾಧನೆಗಳ ಸ್ಪೂರ್ಥಿ ಚೇತನರಾದ ಪ್ರಾಂಶುಪಾಲರು, ಗುರುವೃಂದ, ಆಡಳಿತ ಮಂಡಳಿ, ಹಿಂದಿನ ವಿದ್ಯಾರ್ಥಿ ಸಂಘ, ಪೋಷಕರು, ಪರಿಸರದ ಸಂಘ-ಸಂಸ್ಥೆಗಳು, ದತ್ತಿನಿಧಿಗಳ ಮೂಲಕ ಸಾಧಕರನ್ನು ಗೌರವಿಸುತ್ತಿರುವ ದಾನಿಗಳು ಮತ್ತು ಎಲ್ಲ ಶಿಕ್ಷಣಾಭಿಮಾನಿಗಳನ್ನು ಗೌರವಪೂರ್ವಕವಾಗಿ ವಂದಿಸುತ್ತಾ ನಿಮ್ಮೆಲ್ಲರ ಹಾರೈಕೆಯಿಂದ ಇನ್ನಷ್ಟು ಸಾಧನೆಗಳನ್ನು ದಾಖಲಿಸುವಂತಾಗಲಿ ಎಂದು ಪ್ರಾರ್ಥಿಸುತ್ತ, ಸಹಕರಿಸಿದ, ಬೋಧಿಸಿದ, ಮಾರ್ಗದರ್ಶನ ನೀಡಿದ ಎಲ್ಲ ಸಹೃದಯೀ ಸಜ್ಜನರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಜೈ ಹಿಂದ್