ವಿವೇಕದಲ್ಲಿ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ
ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಮತ್ತು ಕೋಟ ವಿದ್ಯಾಸಂಘ (ರಿ.), ಕೋಟ ಇವುಗಳ ಜಂಟಿ ಆಶ್ರಯದಲ್ಲಿ ವಿವೇಕ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಪದವಿಪೂರ್ವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ.ಪೂ.ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇದರ ಉಪನಿರ್ದೇಶಕರಾದ ಶ್ರೀ ಮಾರುತಿಯವರು ಉದ್ಘಾಟಿಸಿ, ಕ್ರೀಡಾಳುಗಳು ಕ್ರೀಡಾ ಸ್ಫೂರ್ತಿಯಿಂದ ಸೋಲು ಮತ್ತು ಗೆಲುವನ್ನು ಸ್ವೀಕರಿಸಬೇಕು. ಸೋಲು-ಗೆಲುವು ಸಹಜ, ಜೀವನದಲ್ಲಿ ಸೋಲು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ ಎಂದು ತಿಳಿಸಿದರು.ಮುಖ್ಯ ಅಭ್ಯಾಗತರಾಗಿ ಕೋಟ ವಿದ್ಯಾಸಂಘದ ಜೊತೆ ಕಾರ್ಯದರ್ಶಿ ಶ್ರೀ ಎಂ.ರಾಮದೇವ ಐತಾಳ, ಉದ್ಯಮಿ ಹಾಗು ಸಂಸ್ಥೆಯ ಹಳೆ ವಿದ್ಯಾರ್ಥಿ ಶ್ರೀ ವಸಂತ ಬಂಗೇರ ಇವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವೇಕ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಕೆ. ಜಗದೀಶ ಹೊಳ್ಳ, ಶ್ರೀ ಶ್ರೀಪತಿ ಹೇರ್ಳೆ, ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಶ್ರೀ ಕೆ.ಜಗದೀಶ ನಾವಡರು ಸ್ವಾಗತಿಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಸಂಘದ ಅಧ್ಯಕ್ಷ ಶ್ರೀ ಉಮೇಶ ಶೆಟ್ಟಿ, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ದಿನೇಶ ಕುಮಾರ ಉಪಸ್ಥಿತರಿದ್ದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಶ್ರೀ ಗಣೇಶ ಹೊಳ್ಳ, ಮ್ಯಾನೇಜರ್, ಕರ್ಣಾಟಕ ಬ್ಯಾಂಕ್, ಕೋಟ ಮತ್ತು ಶ್ರೀ ಸುಬ್ರಾಯ ಆಚಾರ್ಯ, ಗುತ್ತಿಗೆದಾರರು ಇವರು ಶುಭ ಹಾರೈಸಿ, ಬಹುಮಾನವನ್ನು ವಿತರಿಸಿದರು. ಶ್ರೀ ಬಿ. ವಸಂತ ಶೆಟ್ಟಿ ಧನ್ಯವಾದವನ್ನಿತ್ತರು. ಶಿಕ್ಷಕ ಶ್ರೀ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.
ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದವು.
ಬಾಲಕರ ವಿಭಾಗದಲ್ಲಿ ಕುಂದಾಪುರ ವಲಯದ ಪ್ರಥಮ ಸ್ಥಾನ, ಬ್ರಹ್ಮಾವರ ವಲಯ ದ್ವಿತೀಯ ಸ್ಥಾನ ಹಾಗು ಬಾಲಕಿಯರ ವಿಭಾಗದಲ್ಲಿ ಉಡುಪಿ ವಲಯ ಪ್ರಥಮ ಸ್ಥಾನ, ಕುಂದಾಪುರ ವಲಯ ದ್ವಿತೀಯ ಸ್ಥಾನ ಪಡೆದವು.