• By vjcuser
  • August 18, 2026

ವಿವೇಕವೆಂದರೆ ಬರಿಯ ಶಾಲೆಯಲ್ಲ, ಅದು ಬಂಧನ ರಹಿತ ಸ್ವರ್ಗ’: ನಿವೃತ್ತ ಮುಖ್ಯಶಿಕ್ಷಕ ವೆಂಕಟೇಶ ಉಡುಪ ಭಾವನಾತ್ಮಕ ನುಡಿ

ಕೋಟ: ಕೋಟ ವಿದ್ಯಾಸಂಘದ ಆಡಳಿತಕ್ಕೊಳಪಟ್ಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಶ್ರೀ ವೆಂಕಟೇಶ ಉಡುಪ ಅವರಿಗೆ ಸಂಸ್ಥೆಯ ಮಹಾತ್ಮ ಗಾಂಧಿ ಸ್ಮಾರಕ ಮಂದಿರದಲ್ಲಿ ಅತ್ಯಂತ ಭಾವನಾತ್ಮಕ ಹಾಗೂ ಸಡಗರದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭ ಜರುಗಿತು. ಮಧುರ ನೆನಪುಗಳ ಮೆಲುಕು ಕಾರ್ಯಕ್ರಮದಲ್ಲಿ ತಮ್ಮ ಅಧ್ಯಾಪನದ ಅವಧಿಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ನಿವೃತ್ತ ಮುಖ್ಯಶಿಕ್ಷಕ ಶ್ರೀ ವೆಂಕಟೇಶ ಉಡುಪ ಅವರು, “ವಿವೇಕವೆಂದರೆ ಬರಿಯ ಶಾಲೆಯಲ್ಲ, ಅದು ನನ್ನ ಪಾಲಿಗೆ ಬಂಧನ ರಹಿತ ಸ್ವರ್ಗವಾಗಿತ್ತು” ಎಂದು ಸ್ಮರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಭಾಸ್ಕರ ಹಂದೆ ಅವರು, ಉಡುಪರ ಶ್ರೇಷ್ಠ ಸೇವೆಯನ್ನು ಸ್ಮರಿಸಿ, ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಗಣ್ಯರ ಮೆಚ್ಚುಗೆ ಹಾಗೂ ಶುಭ ಹಾರೈಕೆ ಶ್ರೀ ಎಂ. ರಾಮದೇವ ಐತಾಳ್ (ಕಾರ್ಯದರ್ಶಿ, ಕೋಟ ವಿದ್ಯಾಸಂಘ): ಶ್ರೇಷ್ಠ ಶಿಕ್ಷಕರಾಗಿ ಸಮರ್ಪಣಾ ಮನೋಭಾವದಿಂದ ಮಾಡಿರುವ ಅಧ್ಯಾಪನ ವಿವೇಕ ಸಂಸ್ಥೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕೊಂಡಾಡಿದರು. ಶ್ರೀ ಮಂಜುನಾಥ ಉಪಾಧ್ಯ (ಜೊತೆ ಕಾರ್ಯದರ್ಶಿ): ವೈಜ್ಞಾನಿಕ ಮನೋಭಾವವನ್ನು ಬೆಳೆಸಿದ ಶ್ರೇಷ್ಠ ಶಿಕ್ಷಕರಾಗಿ, ಆಡಳಿತ ಮಂಡಳಿಯ ಎಲ್ಲರ ಪ್ರೀತಿಗೆ ಪಾತ್ರರಾದ ಉಡುಪರ ಸೇವೆಯನ್ನು ಕೊಂಡಾಡಿದರು. ಇದೇ ವೇಳೆ, ಬಾಲಕಿಯರ ಪ್ರೌಢಶಾಲೆಯ ಮುಂದಿನ ಮುಖ್ಯಶಿಕ್ಷಕರಾಗಿ ಅಧಿಕಾರ ಸ್ವೀಕರಿಸಲಿರುವ ಶ್ರೀ ಪ್ರೇಮಾನಂದ ಹಾಗೂ ವಿವೇಕ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿರಿಯ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಲಿರುವ ಶ್ರೀಮತಿ ರತಿ ಅವರಿಗೆ ಶುಭ ಕೋರಿದರು. ಸಮಾರಂಭದಲ್ಲಿ ಹಿರಿಯ ಸಹಶಿಕ್ಷಕ ಶ್ರೀ ಪ್ರೇಮಾನಂದ ಹಾಗೂ ಅಧ್ಯಾಪಕರಾದ ಶ್ರೀ ನರೇಂದ್ರ ಕುಮಾರ್ ಅವರು ವೆಂಕಟೇಶ ಉಡುಪರ ಕುರಿತು ಮಾತನಾಡಿ, ಅವರ ಶೈಕ್ಷಣಿಕ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮದ ಮುಖ್ಯಾಂಶಗಳು ಸ್ವಾಗತ: ಶ್ರೀ ಕೆ. ಜಗದೀಶ ನಾವಡ (ಪ್ರಾಂಶುಪಾಲರು, ವಿವೇಕ ಪದವಿಪೂರ್ವ ಕಾಲೇಜು) ಪ್ರಾರ್ಥನೆ: ಶ್ರೀಮತಿ ಅನಿತಾ ಹೊಳ್ಳ ನಿರೂಪಣೆ: ಶ್ರೀಮತಿ ನಳಿನಾಕ್ಷಿ ವಂದನಾರ್ಪಣೆ: ಶ್ರೀಮತಿ ಪ್ರೀತಿರೇಖಾ (ಮುಖ್ಯಶಿಕ್ಷಕರು, ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆ) ವೇದಿಕೆಯಲ್ಲಿ ವಿದ್ಯಾಸಂಘದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ರೀಪತಿ ಹೇರ್ಳೆ, ಶ್ರೀ ವಸಂತ ಶೆಟ್ಟಿ, ಶ್ರೀ ಲಕ್ಷ್ಮೀನಾರಾಯಣ ಕಾರಂತ ಹಾಗೂ ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ಶ್ರೀ ಪ್ರೇಮಾನಂದ, ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಪ್ರೀತಿರೇಖಾ ಉಪಸ್ಥಿತರಿದ್ದರು.

Explore More
  • By vjcuser
  • August 18, 2026

ಸಮಾಜ ಸೇವಾ ಸಂಘದ ಉದ್ಘಾಟನೆ ಹಾಗೂ ಮಾದಕ ದ್ರವ್ಯ ಮುಕ್ತಿ ಜಾಗೃತಿ ಕಾರ್ಯಕ್ರಮ

ಕೋಟ: ಇಲ್ಲಿನ ಪ್ರಸಿದ್ಧ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ಸೇವಾ ಸಂಘದ ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕುಂದಾಪುರದ ಮಾತಾ ಆಸ್ಪತ್ರೆ ಹಾಗೂ ಕೋಟದ ಪರಿವರ್ತನಾ ಆಸ್ಪತ್ರೆಯ ಖ್ಯಾತ ಮನೋವೈದ್ಯರಾದ ಡಾ. ಪ್ರಕಾಶ್ ತೋಳಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾದಕ ದ್ರವ್ಯ ಮುಕ್ತಿ ಮತ್ತು ಜಾಗೃತಿ ಕುರಿತು ವಿಶೇಷ ಉಪನ್ಯಾಸ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪ್ರಕಾಶ್ ತೋಳಾರ್ ಅವರು, ವಿದ್ಯಾರ್ಥಿಗಳನ್ನುದ್ದೇಶಿಸಿ ‘ಮಾದಕ ದ್ರವ್ಯ ಮುಕ್ತಿ ಮತ್ತು ಜಾಗೃತಿ’ ಎಂಬ ವಿಷಯದ ಕುರಿತು ಅತ್ಯಂತ ಮಾಹಿತಿಪೂರ್ಣ ಹಾಗೂ ಚಿಂತನಶೀಲ ಉಪನ್ಯಾಸ ನೀಡಿದರು. ಆಕರ್ಷಕ ಪಿಪಿಟಿ (PowerPoint) ಪ್ರಸ್ತುತಿಯ ಮೂಲಕ ವಿಷಯವನ್ನು ಮನವರಿಕೆ ಮಾಡಿಕೊಟ್ಟ ಅವರು ಪ್ರಮುಖವಾಗಿ ಈ ಕೆಳಗಿನ ಅಂಶಗಳ ಬಗ್ಗೆ ಬೆಳಕು ಚೆಲ್ಲಿದರು: ವ್ಯಸನಕ್ಕೆ ಪ್ರಮುಖ ಕಾರಣಗಳು: ಯುವ ಪೀಳಿಗೆಯು ಮಾದಕ ದ್ರವ್ಯಗಳ ದಾಸರಾಗಲು ಇರುವ ಪ್ರಮುಖ ಸಾಮಾಜಿಕ ಮತ್ತು ಮಾನಸಿಕ ಕಾರಣಗಳನ್ನು ವಿವರಿಸಿದರು. ದುಷ್ಪರಿಣಾಮಗಳು: ಮಾದಕ ವ್ಯಸನದಿಂದ ಕೇವಲ ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ, ಆತನ ಕುಟುಂಬ ಮತ್ತು ಇಡೀ ಸಮಾಜದ ಮೇಲಾಗುವ ಭೀಕರ ಪರಿಣಾಮಗಳ ಕುರಿತು ಎಚ್ಚರಿಸಿದರು. ತಡೆಗಟ್ಟುವ ಕ್ರಮಗಳು: ಈ ಕೆಟ್ಟ ಅಭ್ಯಾಸದಿಂದ ದೂರವಿರಲು ಮತ್ತು ಇಂತಹ ವ್ಯಸನಗಳಿಗೆ ಬಲಿಯಾದವರನ್ನು ಮುಖ್ಯವಾಹಿನಿಗೆ ತರಲು ಇರುವ ಪ್ರಾಯೋಗಿಕ ತಡೆಗಟ್ಟುವ ವಿಧಾನಗಳನ್ನು ತಿಳಿಸಿಕೊಟ್ಟರು. ಡಾ. ತೋಳಾರ್ ಅವರು ತಮ್ಮ ವೈದ್ಯಕೀಯ ವೃತ್ತಿಜೀವನದ ನೈಜ ಉದಾಹರಣೆಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವಿಷಯವನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸಿದರು. ಆರೋಗ್ಯಕರ ಜೀವನಕ್ಕೆ ಪ್ರೇರಣೆ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತವಾಗಿದ್ದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಹಾಗೂ ಮಾದಕದ್ರವ್ಯ ಮುಕ್ತ ಜೀವನವನ್ನು ನಡೆಸುವ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಸಮಾಜ ಸೇವಾ ಸಂಘದ ಸಂಚಾಲಕರು, ಸಂಘದ ಅಧ್ಯಕ್ಷರು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಕ್ರಿಯವಾಗಿ ಭಾಗವಹಿಸಿದ್ದರು. ವಿದ್ಯಾರ್ಥಿನಿ  ಕುಮಾರಿ  ವೀಕ್ಷಿತ ನಿರೂಪಿಸಿ,   ಪ್ರಾಪ್ತಿ ವಂದಿಸಿದರು. ರಾಜ್ಯ ಶಾಸ್ತ್ರ ಉಪನ್ಯಾಸಕ  ಶ್ರೀ ಕೃಷ್ಣ  ಸಂಯೋಜಿಸಿದ್ದರು.

Explore More
  • By vjcuser
  • August 18, 2026

ವಿವೇಕಾ ಶಿಕ್ಷಣ ಸಂಸ್ಥೆಗಳಲ್ಲಿ ‘ಇಂಟರ್ಯಾಕ್ಟ್ ಕ್ಲಬ್’ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕೋಟ: ಕೋಟ ಸಾಲಿಗ್ರಾಮ ರೋಟರಿ ಕ್ಲಬ್‌ನ ಮಾರ್ಗದರ್ಶನದಲ್ಲಿ ಇತ್ತೀಚೆಗೆ ವಿವೇಕಾ ಶಿಕ್ಷಣ ಸಂಸ್ಥೆಗಳ ಮೂರು ಪ್ರೌಢಶಾಲೆಗಳು ಹಾಗೂ ವಿವೇಕಾ ಪದವಿ ಪೂರ್ವ ಕಾಲೇಜಿನ ‘ಇಂಟರ್ಯಾಕ್ಟ್ ಕ್ಲಬ್’ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ವೇದಿಕೆಯಲ್ಲಿ ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷರಾದ ಮಿಲ್ಟನ್ ಅಲ್ಮೇಡಾ, ಕಾರ್ಯದರ್ಶಿ ಶ್ರೀ ಕರುಣಾಕರ್, ಮುಖ್ಯ ಅತಿಥಿ ರೋಟೇರಿಯನ್ ಶ್ರೀ ಗಣೇಶ್ ಶೆಟ್ಟಿ, ರೋಟೇರಿಯನ್ ಶ್ರೀಮತಿ ಕುಸುಮಾ ಶೆಟ್ಟಿ, ವಿವಿಧ ವಿವೇಕಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ನೂತನವಾಗಿ ಪದಗ್ರಹಣ ಮಾಡಿದ ಇಂಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಇಂಟರ್ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು. ಅಲ್ಲದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಇಂಟರ್ಯಾಕ್ಟ್ ಕ್ಲಬ್‌ನ ಪಾತ್ರ ಮತ್ತು ಪ್ರಾಮುಖ್ಯತೆಯ ಕುರಿತು ಬೆಳಕು ಚೆಲ್ಲಿದರು. ರೋಟರಿ ಕ್ಲಬ್‌ನ ಸದಸ್ಯರು, ಸಂಸ್ಥೆಯ ಬೋಧಕ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾರಂಭವನ್ನು ಅರ್ಥಪೂರ್ಣ ಹಾಗೂ ಪ್ರೇರಣಾದಾಯಿಯಾಗಿಸಿದರು.

Explore More
  • By vjcuser
  • August 18, 2026

ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘ ಉದ್ಘಾಟನೆ….

ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘವನ್ನು ಸರಸ್ವತಿ ಪದವಿಪೂರ್ವ ಕಾಲೇಜು, ಗಂಗೊಳ್ಳಿಯ ಕನ್ನಡ ಉಪನ್ಯಾಸಕರು, ಮಕ್ಕಳ ಮೇಳ, ಸಾಲಿಗ್ರಾಮ ಇದರ ಪ್ರಸ್ತುತ ನಿರ್ದೇಶಕರು, ಖ್ಯಾತ ಯಕ್ಷಗಾನ ಕಲಾವಿದರು, ಸಾಹಿತಿ ಹಾಗೂ ವಾಗ್ಮಿಗಳಾದ ಶ್ರೀ ಸುಜಯೀಂದ್ರ ಹಂದೆಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಾಹಿತ್ಯ ಸಂಘದ ಮಹತ್ವವನ್ನು ವಿವರಿಸಿದರು. ಸಾಹಿತ್ಯವು ವ್ಯಕ್ತಿತ್ವ ವಿಕಸನಕ್ಕೆ, ಭಾಷಾ ಪ್ರೌಢಿಮೆಗೆ ಹಾಗೂ ಸೃಜನಶೀಲ ಚಿಂತನೆಗೆ ಬಲ ನೀಡುವ ಸಾಧನವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಬರೆಯುವ ಅಭಿರುಚಿಯನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ತಿಳಿಸಿ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಸ್ಪರ ಸಂಬಂಧ, ಬರವಣಿಗೆಯ ಉಪಯೋಗ ಹಾಗೂ ಉತ್ತಮ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕುರಿತು ಪ್ರೇರಣಾದಾಯಕ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Explore More
  • By vjcuser
  • August 18, 2026

ವಿಜ್ಞಾನ ಸಂಘ ‘ವಿಷನ್’ ಉದ್ಘಾಟನೆ: ವಿಜ್ಞಾನದತ್ತ ವಿದ್ಯಾರ್ಥಿಗಳ ಆಸಕ್ತಿ ವೃದ್ಧಿಗೆ ಕರೆ

ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ‘ವಿಷನ್’ ವಿಜ್ಞಾನ ಸಂಘವನ್ನು ಮಣಿಪಾಲದ ಎಂಐಟಿ (MAHE) ಸಹ ಪ್ರಾಧ್ಯಾಪಕರಾದ ಡಾ. ಗುರುಮೂರ್ತಿ ಅವರು ಉದ್ಘಾಟಿಸಿದರು. ಉದ್ಘಾಟನೆಯ ನಂತರ, ಡಾ. ಗುರುಮೂರ್ತಿ ಅವರು “Science for Gen Z” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸ್ಲೈಡ್‌ಗಳ ಮೂಲಕ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ ಅತ್ಯಂತ ಆಸಕ್ತಿದಾಯಕವಾಗಿತ್ತು. ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ವಿಜ್ಞಾನವು ಹೇಗೆ ಸ್ಫೂರ್ತಿಯಾಗಬಲ್ಲದು ಮತ್ತು ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಅವರು ಮೌಲ್ಯಯುತ ಮಾಹಿತಿ ಹಂಚಿಕೊಂಡರು. ಸಂವಾದಾತ್ಮಕವಾಗಿದ್ದ ಈ ಉಪನ್ಯಾಸ ವಿದ್ಯಾರ್ಥಿಗಳಿಗೆ ಹೊಸ ದೃಷ್ಟಿಕೋನವನ್ನು ಒದಗಿಸಿತು. ಭೌತಶಾಸ್ತ್ರ ವಿಭಾಗದ ಶ್ರೀಮತಿ ಗಾಯತ್ರಿ ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರು ಸ್ವಾಗತ ಭಾಷಣ ಮಾಡಿದರು. ವಿಜ್ಞಾನ ಸಂಘದ ಸಂಚಾಲಕರಾದ ಶ್ರೀ ರವಿ ಕಾರಂತ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

Explore More
  • By vjcuser
  • August 18, 2026

ವಾಣಿಜ್ಯ ಮತ್ತು ಕಲಾ ವಿಭಾಗದ ವಿಶಿಷ್ಟ ಶ್ರೇಣಿಯ ಸಾಧಕರಿಗೆ ಸಮ್ಮಾನ

2026 ನೇ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗದ ಲ್ಲಿ ವಿಶಿಷ್ಟ ಶ್ರೇಣಿಯ ಲ್ಲಿ ಉತ್ತೀರ್ಣ ಹೊಂದಿದ 145 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯ ಕ್ರಮ ದ ಮುಖ್ಯ ಅತಿಥಿಯಾಗಿ ಶ್ರೀ. C A ಅಮರೀಶ ಹೊಳ್ಳ , ಫೌಂಡರ್, ಪಾಟ್ನರ ಹೊಳ್ಳಮಿತ್ರನ್ Co Ltd ಬೆಂಗಳೂರು.ಇವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ನಿಖರ ಗುರಿ ಹೊಂದಿರಬೇಕು. ಏಕಾಗ್ರತೆ, ಸ್ವ ಅಧ್ಯಯನ, ನಿರಂತರ ಪರಿಶ್ರಮ ದಿಂದ ಗುರಿಯನ್ನು ತಲುಪಲು ಸಾಧ್ಯ. ನಮಗೆ ಎದುರಾಗುವ ಸಮಸ್ಯೆ ಗಳನ್ನು ಬಗೆಹರಿಸುವ ಕೌಶಲ ಹೊಂದಿರಬೇಕೆಂದು ತಿಳಿಸಿದರು. ಕಾರ್ಯ ಕ್ರಮ ಅಧ್ಯಕ್ಷತೆ ಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷ ಶ್ರೀ ಪಿ ಭಾಸ್ಕರ ಹಂಧೆ ಇವರು ವಹಿಸಿದ್ದರು. ಸದಸ್ಯರಾದ ಶ್ರೀ ಶ್ರೀ ಶ್ರೀಪತಿ ಹೇರ್ಳೆ ಶುಭಾಶಂಸನೆಗೈದರು. ವೇದಿಕೆ ಮೇಲೆ ಜೊತೆ ಕಾರ್ಯದರ್ಶಿ ಶ್ರೀ ಪಿ ,ಮಂಜುನಾಥ ಉಪಾಧ್ಯ ಶ್ರೀ ವಸಂತ ಶೆಟ್ಟಿ,ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೆಂಪಿ ಶ್ರೀ ರಮಾನಂದ ಭಟ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ರಾಜ್ಯಮಟ್ಟದಲ್ಲಿ 5 6, 7 ,9ನೇ ಸ್ಥಾನ ಪಡೆದ ಸಾತ್ವಿಕಾ ಶ್ರೀಯಾನ್, ಅಪೇಕ್ಷಾ ಪೂಜಾರಿ ,ಭೂಮಿಕಾ ಟಿ ,ಡಿ, ಶರಣ್ಯಾ ವಾರಂಬಳ್ಳಿ,ಚೈತ್ರಾ ವಿ ಇವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು. ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ, ಶ್ರೀಮತಿ ಪ್ರೀತಿರೇಖಾ, ಶ್ರೀ ಪ್ರೇಮಾನಂದ ಹಾಜರಿದ್ದರು. ಉಪನ್ಯಾಸಕಿ ಶ್ರೀಮತಿ ಶೋಭಾ ಮೇಡಂ ವಂದಿಸಿ , ಶ್ರೀ ಅಮಿತ್ ನಿರೂಪಿಸಿದರು.

Explore More
  • By vjcuser
  • August 18, 2026

ವಿಶಿಷ್ಟ ಸಾಧಕರಿಗೆ ಪುರಸ್ಕಾರ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿಜ್ಞಾನ ವಿಭಾಗದ ೨೪೪ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೋಟ ವಿದ್ಯಾಸಂಘದ ಆಡಳಿತ ಮಂಡಳಿ ಮತ್ತು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಗುರುತಿಸಲಾಯಿತು. ಪ್ರತಿಭಾ ಪುರಸ್ಕಾರದ ಈ ಕಾರ್ಯಕ್ರಮದಲ್ಲಿ ಮುಖ್ಯ್ ಅತಿಥಿಯಾಗಿ ಶ್ರೀ ದಿನಕರ ಶೆಟ್ಟಿ, ಆಡಳಿತ ನಿರ್ದೇಶಕರು, ಪ್ರಿಂಟ್ ಟೆಕ್ ಸೊಲ್ಯೂಶನ್ಸ್ ಪೈ.ಲಿ. ಬೆಂಗಳೂರು ಇವರು ವಿದ್ಯಾರ್ಥಿಗಳನುದ್ದೇಶಿಸಿ ಮಾತನಾಡಿ ‘ವಿವೇಕ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾತ್ರ ಬೋಧಿಸುವುದಲ್ಲ ಅದರೊಂದಿಗೆ ಮುಂದೆ ಜೀವನದಲ್ಲಿ ಶಿಸ್ತು, ಸಂಯಮ, ಕರ್ತವ್ಯ ಪ್ರಜ್ಞೆ ಮೂಡಿಸುವ ಜೊತೆಗೆ ಸಮಾಜಕ್ಕೆ ಉತ್ತಮ ನಾಗರೀಕರನ್ನು ನೀಡುತ್ತಿದೆ. ಪರಿಶ್ರಮ, ಅಚಲವಾದ ಶ್ರದ್ದೆ ಪ್ರಯತ್ನದೊಂದಿಗೆ ಶ್ರೇಷ್ಟವಾದ ಸ್ಥಾನ ಹೊಂದಲು ಸಾಧ್ಯ. ಹಾಗೆಯೇ ಜೀವನದಲ್ಲಿ ಪಥ ಬದಲಾಯಿಸಿದರೂ ಗುರಿಯನ್ನು ಬದಲಾಯಿಸಬಾರದೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಭಾಸ್ಕರ ಹಂದೆಯವರು ವಹಿಸಿ ಶೈಕ್ಶಣಿಕ ಪಥದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಂಸಿದರು. ಜೊತೆ ಕಾರ್ಯದರ್ಶಿ ಶ್ರೀ ಪಿ. ಮಂಜುನಾಥ ಉಪಾಧ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸದಸ್ಯರಾದ ಶ್ರೀ ವಸಂತ ಶೆಟ್ಟಿ, ಶ್ರೀ ಶ್ರೀಪತಿ ಹೇರ್ಳೆ, ಶ್ರೀ ಲಕ್ಷ್ಮಿನಾರಾಯಣ ಕಾರಂತ್ ಉಪಸ್ಥಿತರಿದ್ದರು. ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಚೇಂಪಿ ರಮಾನಂದ ಭಟ್ ಉಪಸ್ತಿತರಿದ್ದರು. ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ವೆಂಕಟೇಶ ಉಡುಪ, ಶ್ರೀಮತಿ ಪ್ರೀತಿ ರೇಖಾ, ಶ್ರೀ ಪ್ರೇಮಾಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ   ಸೃಷ್ಠಿ,  ಸಮೀಕ್ಷಾ, ಸಿಂಚನಾ, ಸುಜನ ಉಪಾಧ್ಯ ಇವರನ್ನು ವಿಶೇಷವಾಗಿ ಗುರುತಿಸಲಾಯಿತು. ಉಪನ್ಯಾಸಕ ಶ್ರೀ ಶಿವಪ್ರಸಾದ ಶೆಟ್ಟಿಗಾರ ಕಾರ್ಯಕ್ರಮ ನಿರ್ವಹಿಸಿ, ಶ್ರೀ ಸುಬ್ರಹ್ಮಣ್ಯ್ ಭಟ್ ವಂದಿಸಿದರು.

Explore More
  • By vjcuser
  • August 18, 2026

ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜನೆ

ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಹಾಗೂ ಮಾದಕ ದ್ರವ್ಯ ಮುಕ್ತ ಜೀವನದ ಮಹತ್ವವನ್ನು ತಿಳಿಸಲು ನಮ್ಮ ಕಾಲೇಜಿನಲ್ಲಿ ಇತ್ತೀಚೆಗೆ ‘ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ’ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಬೆಂಗಳೂರಿನಿಂದ ನೇರ ಕಾರ್ಯಕ್ರಮವಾಗಿತ್ತು . ಜೂಮ್ ಮೀಟಿಂಗ್ ಹಾಗು ಯು ಟ್ಯೂಬ್ ನ ಮೂಲಕ ನೇರ ಪ್ರಸಾರದ ಕಾರ್ಯಕ್ರಮವಾಗಿತ್ತು . ತದನಂತರ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ (PSI) ಶ್ರೀ ಗೋಪಾಲ್ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಮಾಹಿತಿಪೂರ್ಣ ಉಪನ್ಯಾಸ ನೀಡಿದರು. ಅವರು ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ಗಂಭೀರ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಕಾನೂನುಬಾಹಿರ ಪರಿಣಾಮಗಳ ಬಗ್ಗೆ ವಿವರಿಸಿದರು. ಇಂತಹ ಚಟಗಳಿಂದ ದೂರವಿರುವಂತೆ ಅವರು ವಿದ್ಯಾರ್ಥಿಗಳಿಗೆ ಕಳಕಳಿಯ ಮನವಿ ಮಾಡಿದರು. ಪವರ್‌ಪಾಯಿಂಟ್ ಪ್ರೆಸೆಂಟೇಶನ್ (PowerPoint presentation) ಮೂಲಕ ಮಾದಕ ದ್ರವ್ಯಗಳ ಅಪಾಯಗಳ ಕುರಿತು ಮೌಲ್ಯಯುತವಾದ ಮಾಹಿತಿಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ಮತ್ತು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಅರಿವು ಮೂಡಿಸಿತು.

Explore More
  • By vjcuser
  • August 18, 2026

ಕೋಟ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

ವಿವೇಕ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ನಿವೃತ್ತ ಪ್ರಾಂಶುಪಾಲರಾದ ಶ್ರೀ ಪಿ. ಲಕ್ಷ್ಮೀನಾರಾಯಣ ತುಂಗ, ಐರೋಡಿ ಸಾಸ್ತಾನ ಇವರು ಆಗಮಿಸಿ, ದೀಪ ಪ್ರಜ್ವಲಗೊಳಿಸಿ, ಮತನಾಡಿ ’ಒಂದು ದೇಶದ ಸಂಸತ್, ಆ ದೇಶವನ್ನು ಮುನ್ನೆಡುಸುವಲ್ಲಿ ಹೇಗೆ ಸಹಕಾರಿಯೋ, ಹಾಗೇ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಸತ್ ಕೂಡ ವಿದ್ಯಾರ್ಥಿಗಳ ಎಲ್ಲಾ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನೆಡಸಲು ಸಹಕಾರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲೇ ಸಂಸತ್ತಿನ ರಚನೆ, ಅದರ ಕಾರ್ಯ ವೈಖರಿಗಳನ್ನು, ಅದರ ಶಿಸ್ತನ್ನು ತಿಳಿದು ಸಾಗಿದಲ್ಲಿ ಮುಂದೆ ಉತ್ತಮ ನಾಯಕನಾಗಲು ಸಾಧ್ಯ ಎಂದು ತಿಳಿಸಿ, ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಪ್ರಾಮಾಣಿಕ ಆದರ್ಶ ನಾಯಕರಾಗಬೇಕೆಂದು ಕರೆಯಿತ್ತರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ವಿದ್ಯಾರ್ಥಿ ಸರಕಾರದ ವಾಕ್ಪತಿ, ಉಪವಾಕ್ಪತಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಹಾಗೂ ಎಲ್ಲಾ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು. ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕರಾದ ಶ್ರೀ ಪ್ರೇಮಾನಂದ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿ ಸರಕಾರದ ವಾಕ್ಪತಿಯಾಗಿ, ಕುಮಾರಿ ಅದಿತಿ, ಉಪವಾಕ್ಪತಿಯಾಗಿ ಹೈಸ್ಕೂಲಿನ ಆರುಷ್ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ತಿನ ಸಂಚಾಲಕ ಉಪನ್ಯಾಸಕ ಶ್ರೀ ಗಣೇಶಕುಮಾರ್ ಶೆಟ್ಟಿ ಹಾಗೂ ಶಿಕ್ಷಕಿ ಶ್ರೀಮತಿ ರತಿ ಬಾಯಿ ಶ್ರೀ ಸುವೀರ್ ಹೊಳ್ಳ ಮಾರ್ಗದರ್ಶನ ನೀಡಿ, ಕಾರ್ಯಕ್ರಮ ಸಂಯೋಜಿಸಿದ್ದರು. ಸರಕಾರ ಮುಖ್ಯಮಂತ್ರಿ ನಿಶಾಂತ್ ಕಿಣಿ, ಅತಿಥಿಗಳನ್ನು ಸ್ವಾಗತಿಸಿದರು. ಉಪಮುಖ್ಯಮಂತ್ರಿ ’ಪ್ರಥಮ್’ ವಂದಿಸಿದರು. ವಿದ್ಯಾರ್ಥಿನಿ ಕುಮಾರಿ ಪ್ರಾಪ್ತಿ ಕಾರ್ಯಕ್ರಮ ನಿರ್ವಹಿಸಿದರು.

Explore More
  • By vjcuser
  • August 18, 2026

ಕೋಟ , ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಸಂಸದೀಯ ಮಾದರಿಯಲ್ಲಿ ಚುನಾವಣೆ

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ 2026 – 27 ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಇ ವಿ ಎಂ ಮೂಲಕ ಚುನಾವಣೆ ನಡೆಸಲಾಯಿತು. ಇಂದು ಬೆಳಗ್ಗೆ ಚುನಾವಣೆ ಬಗ್ಗೆ ಘೋಷಣೆ, ನಾಮಪತ್ರ ಸಲ್ಲಿಸಲು ಅವಕಾಶ, ನಾಮಪತ್ರ ಪರಿಶೀಲನೆ ನಡೆಸಿ ಬಳಿಕ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಚುನಾವಣಾ ಅಭ್ಯರ್ಥಿ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ ತೆರಳಿ ಮತಯಾಚನೆಗೆ ಅವಕಾಶ ಕಲ್ಪಿಸಲಾಯಿತು. ಕಾಲೇಜು ಮುಖಂಡನ ಸ್ಥಾನಕ್ಕೆ10 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಹೈಸ್ಕೂಲ್ ವಿಭಾಗದಿಂದ ಉಪ ಮುಖಂಡ ಸ್ಥಾನಕ್ಕೆ 2 ಸ್ಪರ್ಧಿಸಿದ್ದರು. ಕಾಲೇಜು ಮುಖಂಡನ ಸ್ಥಾನಕ್ಕೆ ದ್ವಿತೀಯ ಪಿಯುಸಿ ಬಿ ವಿಭಾಗದ ನಿಶಾಂತ್ ಪಿ ಕಿಣಿ ಮತ್ತು ಉಪಮುಖಂಡನ ಸ್ಥಾನಕ್ಕೆ ಪ್ರೌಢಶಾಲಾ ವಿಭಾಗದ ಪ್ರಥಮ್ ಇವರು ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ಉಪನ್ಯಾಸಕರು,ಅಧ್ಯಾಪಕ ಮತ್ತು ಸಿಬ್ಬಂದಿಗಳು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ವೇದಿಕೆಯಲ್ಲಿ ಹೈಸ್ಕೂಲ್ ವಿಭಾಗದ ಶ್ರೀ ಪ್ರೇಮಾನಂದ, ಚುನಾವಣಾ ಸಂಚಾಲಕರಾದ ಶ್ರೀ ಗಣೇಶ್ ಕುಮಾರ್ ಶೆಟ್ಟಿ, ಶ್ರೀ ಸುವೀರ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ಮತದಾನ , ಮತದಾನದ ಹಕ್ಕು ಮತ್ತು ನಿರ್ಭೀತಿಯಿಂದ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು.

Explore More

Stay Connected With Child's Learning

Download the Parent App now!

contact info

Social Media Link

[mc4wp_form id=1143]

Copyright© 2025 Kota Vidya Sangha (R.) Kota   |   Powered By D-apps, Kumbashi  |   Privacy Policy