ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ, ಹಾಗೂ ವಿವೇಕ ಪದವಿಪೂರ್ವ ಕಾಲೇಜು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟ
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ, ಹಾಗೂ ವಿವೇಕ ಪದವಿ ಪೂರ್ವ ಕಾಲೇಜು ಕೋಟ ಇವರ ಸಂಯುಕ್ತ ಆಶ್ರಯ ದಲ್ಲಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ವಿವೇಕ ದ ಕ್ರೀಡಾಂಗಣ ದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟರಾಗಿ ಕೋಟ ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಎಂ ರಾಮದೇವ ಐತಾಳ್ ಆಗಮಿಸಿ ಮಾತನಾಡಿ, ಕ್ರೀಡೆ ಯಿಂದ ವಿದ್ಯಾರ್ಥಿಗಳ ದೈಹಿಕ ಹಾಗು ಮಾನಸಿಕ ಆರೋಗ್ಯ ,ಚಟುವಟಿಕೆಗಳು ಹೆಚ್ಚುತ್ತವೆ, ಅಧ್ಯಯನಕ್ಕೆ ಪೂರಕವಾಗಿ ಸಹಕರಿಸುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿ ಯಿಂದ ಭಾಗವಹಿಸಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಸುಕೇಶ್ ಶೆಟ್ಟಿ, ಕಾರ್ಯದರ್ಶಿ, ಶ್ರೀ ದಿನೇಶ್ ಶೆಟ್ಟಿ , ಇವರು ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು. ಕೋಟ ವಿದ್ಯಾ ಸಂಘದ ಸದಸ್ಯ ಶ್ರೀ ವಸಂತ ಶೆಟ್ಟಿ ಉಪಸ್ಥಿತರಿದ್ದರು. ಇಂದಿನ ಕ್ರೀಡಾ ಪರಿವೀಕ್ಷಕರಾದ ಶ್ರೀ ರಾಘು ಉಪಸ್ಥಿತ ರಿದ್ದರು. ಪ್ರಾಂಶುಪಾಲ ಶ್ರೀ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ಶ್ರೀ ವಾಗೀಶ ಕಾರ್ಯ ಕ್ರಮ ನಿರೂಪಿಸಿ, ಶ್ರೀ ಸಂಜೀವ ಜಿ. ವಂದಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಶ್ರೀ ವಸಂತ್ ಶೆಟ್ಟಿ , ಹಾಗೂ ರೊಟೇರಿಯೆನ್ ಶ್ರೀ ಸುಬ್ರಾಯ ಆಚಾರ್ಯ ಭಾಗವಹಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿ,ಶುಭ ಹಾರೈಸಿದರು . ಶ್ರೀ ಸುಕೇಶ್ ಶೆಟ್ಟಿ, ದಿನೇಶ್ ಶೆಟ್ಟಿ ಶ್ರೀ ರಘು, ಪ್ರಾಂಶುಪಾಲರಾದ ಶ್ರೀ ಜಗದೀಶ ನಾವಡ ರು, ಶ್ರೀಮತಿ ಪ್ರೀತಿರೇಖಾ , ಶ್ರೀಮತಿ ರತಿ ಬಾಯಿ ಉಪಸ್ಥಿತರಿದ್ದರು. ಶ್ರೀ ಸದಾಶಿವ ಹೊಳ್ಳ, ನಿರೂಪಿಸಿ , ಶ್ರೀ ಪ್ರೇಮಾನಂದ ವಂದಿಸಿದರು. ವಿಜೇತರ ಪಟ್ಟಿಯನ್ನು ದೈಹಿಕ ಶಿಕ್ಷಕ ಶ್ರೀ ಗಣೇಶ ಶೆಟ್ಟಿ ವಾಚಿಸಿದರು. ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದ ದಲ್ಲಿ ಬ್ರಹ್ಮಾವರ ವಲಯ ಪ್ರಥಮ ಸ್ಥಾನ, ಕುಂದಾಪುರ ವಲಯ ದ್ವಿತೀಯ ಸ್ಥಾನ ಗಳಿಸಿತು.
Explore More
