ವಿವೇಕದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

ಕೋಟ : 2019-20ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದು ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಾಲೇಜಿನಲ್ಲಿ ಜರುಗಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘ ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕಕ್ರ ಮೈಯ್ಯರು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮ ಪರೀಕ್ಷೆಯನ್ನು ಎದುರಿಸಿ, ಉತ್ತಮ ಫಲಿತಾಂಶ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುವುದರ ಮೂಲಕ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಅವರ ಮುಂದಿನ ಉನ್ನತ ಶೈಕ್ಷಣಿಕ ಜೀವನದಲ್ಲಿ ಕೂಡ ಒಳ್ಳೆಯ ರೀತಿಯಲ್ಲಿ ಸಾಗಿ ಉತ್ತಮ ಫಲಿತಾಂಶ ಪಡೆಯುವ ಹಾಗೆ ಆಗಲಿ ಎಂದು ತಿಳಿಸಿ ರಾಜ್ಯಮಟ್ಟದ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ವಿದ್ಯಾಸಂಸ್ಥೆಯ ಕೋಶಾಧಿಕಾರಿ ಶ್ರೀ ವಲೇರಿಯನ್ ಮೇನೆಜಸ್ ಇವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

2019-20ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 592 ಅಂಕಗಳೊಂದಿಗೆ 6ನೇ ಸ್ಥಾನವನ್ನು ಪಡೆದ ಕುಮಾರಿ ಪದ್ಮಿನಿ ಎಸ್. ಪುರಾಣಿಕ್ ಮತ್ತು ವಿಜ್ಞಾನ ವಿಭಾಗದಲ್ಲಿ 589 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 8ನೆಯ ಸ್ಥಾನವನ್ನು ಪಡೆದ ಅಭಿಷೇಕ್ ಭಟ್ ಜಿ.ಕೆ. ಹಾಗು 588 ಅಂಕಗಳೊಂದಿಗೆ 9ನೆಯ ಸ್ಥಾನ ಪಡೆದ ಸುಜಾತ ಭಟ್ ಇವರನ್ನು ಕೋಟ ವಿದ್ಯಾಸಂಘ ಹಾಗು ವಿದ್ಯಾಸಂಸ್ಥೆಗಳ ವತಿಯಿಂದ ಸಂಮ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಶ್ರೀ ಕೆ. ಜಗದೀಶ ನಾವಡರು ಪ್ರಸ್ತಾವನೆ ಮೂಲಕ ಸ್ವಾಗತಿಸಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು.
ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳ, ಶ್ರೀ ಶ್ರೀಪತಿ ಹೇರ್ಳೆ, ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು.

ಉಪನ್ಯಾಸಕ ಶ್ರೀ ಸದಾಶಿವ ಹೊಳ್ಳ ಕಾರ್ಯ ನಿರ್ವಹಿಸಿ, ಶ್ರೀ ಶಿವಪ್ರಸಾದ ಶೆಟ್ಟಿಗಾರ್ ಧನ್ಯವಾದವನ್ನಿತ್ತರು
ಕಾಲೇಜಿನ ವಾರ್ಷಿಕ ಪರೀಕ್ಷೆಯಲ್ಲಿ 286 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 237 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ. 99.63% ಫಲಿತಾಂಶ ಬಂದಿರುವುದು ಇಲ್ಲಿ ಸ್ಮರಿಸಬಹುದು.