ವಿವೇಕ ವಿದ್ಯಾಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ
ಕೋಟದ ವಿವೇಕ ವಿದ್ಯಾಸಂಸ್ಥೆಗಳಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ತುಂಬ ಸರಳವಾಗಿ ಶಾಲಾ ಮೈದಾನದಲ್ಲಿ ಆಚರಿಸಲಾಯಿತು. ಈ ಬಾರಿ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರವi ವನ್ನು ನಡೆಸಲಾಯಿತು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಕೆ. ಜಗದೀಶ ನಾವಡರು ಧ್ವಜಾರೋಹಣವನ್ನು ನೆರವೇರಿಸಿ ನೆರೆದಿರುವ ವಿವೇಕ ವಿದ್ಯಾಸಂಸ್ಥೆಯ ಸಿಬ್ಬಂದಿಗಳನ್ನುದ್ದೇಶಿಸಿ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ಪಣವಿಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡರು. ಹಾಗೇನೆ ಸದ್ಯಕ್ಕೆ ದೇಶದಲ್ಲಿ ಕಾಡುತ್ತಿರುವ ಕೊರೋನಾದಿಂದ ಕೂಡಾ ಮುಕ್ತಿ ಪಡೆಯಲು ನಾವೆಲ್ಲರೂ ಸ್ವಯಂ ಜಾಗೃತೆಯಿಂದಿರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯಸ್ಥ ಶ್ರೀ ಕೆ. ಜಗದೀಶ ಹೊಳ್ಳ, ಆಂಗ್ಲಮಾಧ್ಯಮ ಪ್ರೌಢಶಾಲೆ ಮುಖ್ಯಸ್ಥ ಶ್ರೀ ಪಿ. ಶ್ರೀಪತಿ ಹೇರ್ಳೆ, ಹಾಗೆ ಬಾಲಕರ ಪ್ರೌಢಶಾಲೆಯ ಮುಖ್ಯಸ್ಥ ಶ್ರೀ ವೆಂಕಟೇಶ ಉಡುಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
