ವಿವೇಕ ಪ.ಪೂ.ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆಯ ಸಂಭ್ರಮ
ವಿವೇಕ ಪ.ಪೂ.ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆಯ ಸಂಭ್ರಮಕೋಟ : ವಿವೇಕ ಪ.ಪೂ.ಕಾಲೇಜಿನ ಸಮಾಜಸೇವಾ ಸಂಘದ ಆಶ್ರಯದಲ್ಲಿ ಸದ್ಭಾವನಾ ದಿನಾಚರಣೆಯನ್ನು ವಿದ್ಯುಕ್ತವಾಗಿ ಆಚರಿಸಲಾಯಿತು.
ಸದ್ಭಾವನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಉಪನ್ಯಾಸಕರಾದ ಶ್ರೀ ಪಿ. ಶ್ರೀನಿವಾಸ ಸೋಮಯಾಜಿಯವರು ಆಗಮಿಸಿ, ಮಾತನಾಡಿ ‘ಮನುಷ್ಯನ ಜೀವನದಲ್ಲಿ ಎಷ್ಟೇ ಆಸ್ತಿ-ಸಂಪತ್ತು ಐಶ್ವರ್ಯಗಳನ್ನು ಗಳಿಸಿದ್ದರು ಅದು ಶಾಶ್ವತವಲ್ಲ. ಅದು ಮನುಷ್ಯನ ಬದುಕಿಗೆ ನೆಮ್ಮದಿಯನ್ನು ನೀಡುವುದಿಲ್ಲ. ಆದರೆ ನಾವು ಸಮಾಜದಲ್ಲಿ ಇತರರೊಂದಿಗೆ ಸ್ನೇಹಜೀವಿಯಾಗಿ, ಉಪಕಾರಿಯಾಗಿ ಬದುಕಿದರೆ ಅದರಿಂದ ಸಿಗುವ ತೃಪ್ತಿ ವಿಶೇಷವಾದದ್ದು. ಆದ್ದರಿಂದ ನಾವು ಎಲ್ಲರೊಂದಿಗೆ ಪ್ರೀತಿ, ಸಹಬಾಳ್ವೆ, ಸಹಕಾರ ಮನೋಭಾವದಿಂದ ಬದುಕಬೇಕು. ಯಾವುದೇ ಜಾತಿ, ಮತ-ಬೇಧವಿಲ್ಲದೇ ದ್ವೇಷ-ವೈಷಮ್ಯ ಇಲ್ಲದೇ ಸದ್ಭಾವನೆಯಿಂದ ಬೆರೆತು ಬದುಕಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಸಹ ಬಾಲ್ಯದಿಂದಲೇ ಸದ್ಭಾವನೆಯ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆಯಿತ್ತರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಯಜುಷಾ ಮತ್ತು ಅಮೃತಾ ಪ್ರಾರ್ಥಿಸಿದರು.
ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಜಿ. ಅಶೋಕಕುಮಾರ ಶೆಟ್ಟಿಯವರು ಧನ್ಯವಾದವಿತ್ತರು.
ಕುಮಾರಿ ಚೇತನಾ ಪೈ ಕಾಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.