ವಿವೇಕ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘದ ಉದ್ಘಾಟನೆ
ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ ವಿಜ್ಞಾನ ಸಂಘ ‘ವಿಶನ್’ ಇದರ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಉದ್ಘಾಟಕರಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪಿಸಿಯೋತೆರಪಿ ವಿಭಾಗದ ಡೀನ್ ಡಾ| ಅರುಣ್ ಮೈಯ್ಯ ಇವರು ವೈಜ್ಞಾನಿಕವಾಗಿ ಉದ್ಘಾಟಿಸಿದರು.
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವೈದ್ಯಕೀಯ ಶಾಸ್ತ್ರದ ವಿವಿಧ ಕೋರ್ಸ್‍ಗಳ ಬಗ್ಗೆ ವಿವರಿಸಿ, ಅದರ ಪೂರ್ವತಯಾರಿಯ ಕುರಿತಾಗಿ ತಿಳಿಸಿಕೊಟ್ಟರು. ಹಾಗೆಯೇ ಪಿಸಿಯೋತೆರಪಿಯ ಪ್ರಾಮುಖ್ಯತೆಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಸವಿವರವಾಗಿ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ವಿಜ್ಞಾನ ಸಂಘದ ಕಾರ್ಯದರ್ಶಿ ಕುಮಾರ ಶ್ರೇಯಸ್ ಶೇಟ್ ಧನ್ಯವಾದವನ್ನಿತ್ತರು. ಸಂಘದ ಅಧ್ಯಕ್ಷೆ ಕುಮಾರಿ ವಫಾನಾಜ್ ಕಾರ್ಯಕ್ರಮ ನಿರೂಪಿಸಿದರು.
ಭೌತಶಾಸ್ತ್ರ ಉಪನ್ಯಾಸಕ ಶ್ರೀ ರವಿ ಕಾರಂತ್ ಕಾರ್ಯಕ್ರಮ ಸಂಯೋಜಿಸಿದ್ದರು.