ವೃತ್ತಿ ಮಾರ್ಗದರ್ಶನ ಶಿಬಿರ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾಥರ್ಿಗಳಿಗೆ
ಪಿ.ಯು.ಸಿ. ನಂತರ ಮುಂದೇನು? ಎಂಬ ವಿಷಯದ ಕುರಿತಾಗಿ ಒಂದು
ದಿನದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ
ಮಂಗಳೂರು ಸೈಂಟ್ ಆಲೋಶಿಯಸ್ ಕಾಲೇಜಿನ ನಿವೃತ್ತ
ಉಪಪ್ರಾಂಶುಪಾಲರಾದ ಶ್ರೀ ರೋನಾಲ್ಡ್ ಪಿಂಟೋ ಇವರು ಆಗಮಿಸಿ,
ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿ ಪಿ.ಯು.ಸಿ. ನಂತರ ಮುಂದಿನ
ಉನ್ನತ ವ್ಯಾಸಂಗದ ಕುರಿತಾಗಿ ಇರುವ ಹಲವು ಮಾರ್ಗಗಳ ಬಗ್ಗೆ
ತಿಳಿಸಿದರು. ವಿದ್ಯಾಥರ್ಿಗಳು ಆರಂಭದಲ್ಲೇ ಮುಂದಿನ ಉನ್ನ್ತ
ವ್ಯಾಸಂಗದ ಬಗ್ಗೆ ಯೋಚಿಸಿ, ಅದರಂತೆ ತಮ್ಮ ಅಧ್ಯಯನವನ್ನು
ನಡೆಸಿದರೆ ಮುಂದೆ ಉತ್ತಮ ಹಾಗು ಸುಲಭ ಸಾಧ್ಯ ಎಂದು
ಮನವರಿಕೆ ಮಾಡಿಕೊಟ್ಟರು.
ವಿಜ್ಞಾನ, ವಾಣಿಜ್ಯ ಹಾಗು ಕಲಾ ವಿಭಾಗದ ವಿದ್ಯಾಥರ್ಿಗಳಿಗೆ
ಪ್ರತ್ಯೇಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಇಂದು ಕೇವಲ
ಇಂಜಿನಿಯರ್, ಡಾಕ್ಟರ್ ಹುದ್ದೆ ಮಾತ್ರವಲ್ಲ. ಬೇರೆ ಹಲವು
ಮಾರ್ಗಗಳು ಇದ್ದು ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸುವ
ಮೂಲಕ ಉನ್ನತ ಹುದ್ದೆ ಪಡೆಯಬಹುದೆಂದು ಪವರ್ ಪಾಯಿಂಟ್
ಪ್ರೆಸೆಂಟೇಶನ್ ಮೂಲಕ ತಿಳಿಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು
ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀ ಸದಾಶಿವ
ಹೊಳ್ಳರು ಧನ್ಯವಾದವನ್ನಿತ್ತರು. ಶ್ರೀ ಶಿವಪ್ರಸಾದ ಶೆಟ್ಟಿಗಾರ್
ಹಾಗು ಶ್ರೀ ರವಿ ಕಾರಂತ್ ಕಾರ್ಯಕ್ರಮ ನಿರ್ವಹಿಸಿದರು