ವಿಶಿಷ್ಟ ಸಾಧಕರಿಗೆ ಸಂಮ್ಮಾನ
ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2018-19ನೇ ಸಾಲಿನಲ್ಲಿ
ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ
ಉತ್ತೀರ್ಣರಾದ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಒಟ್ಟು 275
ವಿದ್ಯಾಥರ್ಿಗಳನ್ನು ಕೋಟ ವಿದ್ಯಾ ಸಂಘ ಮತ್ತು ವಿವೇಕ
ವಿದ್ಯಾಸಂಸ್ಥೆಯ ವತಿಯಿಂದ ಸಂಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ 4ನೇ ಸ್ಥಾನ
ಪಡೆದ ಶಶಾಂಕ ಹಾಗು 9ನೇ ಸ್ಥಾನ ಪಡೆದ ಅನುಶಾ ಉಪಾಧ್ಯ
ಇವರನ್ನು ಗುರುತಿಸಲಾಯಿತು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ.
ಪ್ರಭಾಕರ ಮೈಯ್ಯರು ವಹಿಸಿ, ಮಾತನಾಡಿ ವಿದ್ಯಾಥರ್ಿಗಳು
ವಿದ್ಯಾರ್ಜನೆಯ ಸಂದರ್ಭದಲ್ಲಿ ಶಿಸ್ತು, ಸಂಯಮ, ಏಕಾಗ್ರತೆ, ಸ್ವ-
ಅಧ್ಯಯನ ರೂಢಿಸಿಕೊಂಡಲ್ಲಿ ಉತ್ತಮ ಫಲಿತಾಂಶವನ್ನು
ಪಡೆಯಲು ಸಾಧ್ಯ. ಹಾಗೆಯೇ ವಿದ್ಯಾಥರ್ಿ ಕಲಿಯುತ್ತಿರುವ ಶಾಲೆಯ
ವಾತಾವರಣ ಮನೆಯ ವಾತಾವರಣ ಮತ್ತು ಪರಿಸರ ಇವುಗಳು
ಕೂಡ ಉತ್ತಮ ಫಲಿತಾಂಶ ಪಡೆಯುವಲ್ಲಿ ಮಹತ್ತರವಾದ
ಪರಿಣಾಮ ಬೀರುತ್ತದೆ. ಆದ್ದರಿಂದ ವಿದ್ಯಾಥರ್ಿಗಳು ಜೀವನದಲ್ಲಿ
ಶಿಸ್ತಿನೊಂದಿಗೆ ಸ್ವ-ಅಧ್ಯಯನ ಗುಣಗಳನ್ನು ಬೆಳೆಸಿಕೊಂಡು,
ಒಳ್ಳೆಯ ಪರಿಸರ ಆಯ್ಕೆ ಮಾಡಿಕೊಂಡಲ್ಲಿ ಉತ್ತಮ ಅಂಕ ಪಡೆದು
ನಿರೀಕ್ಷಿತ ಫಲಿತಾಂಶ ಗಳಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಟ ವಿದ್ಯಾಸಂಘದ ಜೊತೆ ಕಾರ್ಯದಶರ್ಿ
ಶ್ರೀ ಎಂ. ರಾಮದೇವ ಐತಾಳರು ಮಾತನಾಡಿ, ವಿದ್ಯಾಥರ್ಿಗಳು ಬದ್ಧತೆ,
ಸಮರ್ಪಣಾ ಭಾವ ಮತ್ತು ಪ್ರಯತ್ನದಿಂದ ಉದ್ದೇಶಿತ
ಗುರಿಯನ್ನು ಹೊಂದಲು ಸಾಧ್ಯ, ನಿರಂತರ ಪ್ರಯತ್ನ-
ಪರಿಶ್ರಮದಿಂದ ಮುನ್ನುಗಬೇಕು ಎಂದು ತಿಳಿಸಿ, ಸಾಧಕರಿಗೆ ಶುಭ
ಹಾರೈಸಿದರು.
ವಿದ್ಯಾಸಂಘದ ಕೋಶಾಧಿಕಾರಿ ಶ್ರೀ ವಲೇರಿಯನ್ ಮೆನೇಜಸ್
ಸಾಧಕ ವಿದ್ಯಾಥರ್ಿಗಳಿಗೆ ಶುಭ ಹಾರೈಸಿದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ
ನಾವಡರು ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿ ಅಭ್ಯಾಗತರನ್ನು
ಸ್ವಾಗತಿಸಿದರು.
ಆಡಳಿತ ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು.
ವಿವೇಕ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಕೆ. ಜಗದೀಶ
ಹೊಳ್ಳ, ಶ್ರೀ ಶ್ರೀಪತಿ ಹೇಳರ್ೆ, ಶ್ರೀ ವೆಂಕಟೇಶ ಉಡುಪರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎರಡು ದಿನ ನಡೆದ ಈ ಸಮಾರಂಭದಲ್ಲಿ ವಿಜ್ಞಾನ ವಿಭಾಗದ 152,
ವಾಣಿಜ್ಯ ವಿಭಾಗದ 119 ಹಾಗೂ ಕಲಾ ವಿಭಾಗದ 4 ವಿಶಿಷ್ಟ ಸಾಧಕರನ್ನು
ಸಂಮ್ಮಾನಿಸಲಾಯಿತು.
ಸಾಧಕ ವಿದ್ಯಾಥರ್ಿಗಳು ತಮ್ಮ ಅನಿಸಿಕೆ ಅನುಭವನ್ನು
ಹಂಚಿಕೊಂಡರು. ವಿದ್ಯಾಥರ್ಿಗಳ ಹೆತ್ತವರೂ ಕೂಡ ತಮ್ಮ
ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಸಾಧಕ ವಿದ್ಯಾಥರ್ಿಗಳ
ಪಟ್ಟಿಯನ್ನು ಶ್ರೀ ಶ್ರೀಕಾಂತ ಚಡಗ, ಶ್ರೀಮತ ರೇಖಾ ಸಾಯಿ,
ಶ್ರೀಮತಿ ಪ್ರಜ್ಞಾಶ್ರೀ, ಸಂಜೀವ ನಾಕ್, ಶ್ರೀ ಕೃಷ್ಣ, ಶ್ರೀಮತಿ
ರೇಣುಕಾ ಇವರು ವಾಚಿಸಿದರು. ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀಮತಿ
ಶೋಭಾ ಅವಭೃತ ಧನ್ಯವಾದವನ್ನಿತ್ತರು. ಶ್ರೀ ಪ್ರಶಾಂತ
ಮತ್ತು ಶ್ರೀ ಮಂಜುನಾಥ ಉಪಾಧ್ಯರು ಕಾರ್ಯಕ್ರಮವನ್ನು
ನಿರೂಪಿಸಿದರು.