ವಿಶ್ವ ಪರಿಸರ ದಿನಾಚರಣೆ

ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಕಾಲೇಜಿನ ಸಮಾಜ ಸೇವಾಸಂಘದ ಆಶ್ರಯದಲ್ಲಿ ಆಚರಿಸಲಾಯಿತು.

ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹ.ರಾ.ವಿನಯಚಂದ್ರ ಸಾಸ್ತಾನ, ಪರಿಸರವಾದಿ ಇವರು ಆಗಮಿಸಿದ್ದರು. ಅವರು ಕಾಲೇಜಿನ ಸಮಾಜಸೇವಾ ಸಂಘವನ್ನು ಉದ್ಘಾಟಿಸಿ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಾತನಾಡಿ “ನಾವು ಪ್ರಕೃತಿ ಮಾತೆಯ ಮಡಿಲಲ್ಲಿ ವಾಸಿಸುತ್ತಿದ್ದೇವೆ. ಪ್ರಕೃತಿ ನಮಗೆ ಅನ್ನ, ನೀರು, ಗಾಳಿ ಇವೆಲ್ಲವನ್ನೂ ನೀಡುತ್ತದೆ. ಪ್ರತಿಯೊಂದು ವಿಷಯದಲ್ಲಿ ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ನಾವು ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದೇವೆ. ಪರಿಸರಕ್ಕೆ ಹಾನಿ ಮಾಡಿದರು ಅದು ಖಂಡಿತವಾಗಿಯೂ ಸಹಿಸದು. ಇದರ ಕೆಟ್ಟ ಪರಿಣಾಮವನ್ನು ನಾವು ಅನುಭವಿಸಲೇ ಬೇಕಾಗುತ್ತದೆ. ಪ್ರಕೃತಿ ನಾಶವಾದರೇ ಮಾನವನ ಸಂತತಿಯೇ ವಿನಾಶದಂಚಿಗೆ ತಲುಪುತ್ತದೆ. ಆದ್ದರಿಂದ ನಮಗೂ ಹಾಗು ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬೆಳೆಸುವಲ್ಲಿ ಕಾಳಜಿ ವಹಿಸಬೇಕು. ‘ಗಿಡ ಬೆಳೆಸಿ-ನೆಲ ಉಳಿಸಿ’ ಈ ಆಂದೋಲನದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು’ ಎಂದು ಹೇಳಿದರು. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಹೆಚ್ಚು ಜಾಗೃತರಾಗಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೀಡ್ ಬಾಲ್ (ಬೀಜದ ಉಂಡೆ)ಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿದರು.

ಸಮಾಜಸೇವಾ ಸಂಘದ ಅಧ್ಯಕ್ಷೆ ಕುಮಾರಿ ನಿವೇದಿತಾ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿಯರಾದ ಮೇಘನಾ, ಗೀತಾ, ನಂದಿನಿ ಪ್ರಾರ್ಥಿಸಿದರು. ಸಮಾಜಸೇವಾ ಸಂಘದ ಕಾರ್ಯದರ್ಶಿ ನಿರೀಕ್ಷಾ ಧನ್ಯವಾದವನ್ನಿತ್ತರು. ಕುಮಾರಿ ಭಾವನ ಕಾರ್ಯಕ್ರಮ ನಿರ್ವಹಿಸಿದರು.

 ಸಮಾಜ ಶಾಸ್ತ್ರ ಉಪನ್ಯಾಸಕ ಶ್ರೀ ಅಶೋಕಕುಮಾರ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter