ಭವಿಷ್ಯದ ಭದ್ರ ಬುನಾದಿ ನೀಡುವುದೇ ವಿದ್ಯಾರ್ಥಿ ಜೀವನ – ರವೀಂದ್ರ ಕೋಟ

ಕೋಟ:  ವಿದ್ಯಾರ್ಥಿ ಜೀವನವೇ ವಿದ್ಯಾರ್ಥಿಯ ಭವಿಷ್ಯದ ಭದ್ರ ಬುನಾದಿಗೆ ನಾಂದಿ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.

ಸೋಮವಾರ ಕೋಟ ವಿವೇಕ ವಿದ್ಯಾಸಂಸ್ಥೆಯ  ಫ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಅಸೆಂಬ್ಲಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ  ಮಾತನಾಡಿ ವಿದ್ಯಾರ್ಥಿಗಳ ತಮ್ಮ ಜೀವನದಲ್ಲಿ ಅನುಸರಿಸಬೇಕಾದ ನೈಜ ಬದುಕಿನ ಕಾಯಕ ,ಸಾಧನೆಯ ಮಜಲುಗಳ ದಾರಿ ,ಪರೀಕ್ಷೆ ಎದುರಿಸಲು ಬೇಕಾದ ದೃಢತೆ ಈ ಕುರಿತಂತೆ ಮಾಹಿತಿ ನೀಡಿದರಲ್ಲದೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಸಮಾಜ ,ಹಸಿರು ವಾತಾವರಣ ಸೃಷ್ಠಿಸುವ ಬಗ್ಗೆ ಸಮರ್ಪಕ ಮಾಹಿತಿ ನೀಡಿ, ಅತಿ ಹೆಚ್ಚು ಮೊಬೈಲ್ ಬಳಕೆಯಿಂದದಾಗುವ ಸಮಸ್ಯೆಗಳು,ಮಾದಕ ವ್ಯಸನದಿಂದ ದೂರವಿರಲು ಮಾರ್ಗೋಪಾಯ ಕುರಿತು ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ  ವತಿಯಿಂದ ರವೀಂದ್ರ ಕೋಟ ಇವರನ್ನು ಗೌರವಿಸಲಾಯಿತು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಹಮ್ಮಿಕೊಂಡಜಿಲ್ಲಾಮಟ್ಟದ ಕಂಠ ಶ್ಲೋಕ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ನಿಧೀಶ್ ಭಟ್ ಇವರನ್ನು ಗೌರವಿಸಲಾಯಿತು. ಪಂಚವರ್ಣ ಪರಿಸರಸ್ನೇಹಿ ಅಭಿಯಾನದಲ್ಲಿ ಭಾಗವಹಿಸಿದ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಈ ವೇಳೆ ಅಭಿನಂದಿಸಲಾಯಿತು.
ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ವೆಂಕಟೇಶ ಉಡುಪ,ಶಿಕ್ಷಕರಾದ ಶಂಭು ಭಟ್, ಬಾಲಕೃಷ್ಣ ನಕ್ಷತ್ರಿ,ದೈಹಿಕ ಶಿಕ್ಚಕ  ಗಣೇಶ್ ಶೆಟ್ಟಿ, ರತಿ ಬಾೈ, ನಾಗರತ್ನ, ನಳೀನಾಕ್ಷಿ, ಶ್ಯಾಮಲ ಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಮುಖಂಡ ಕೇಶವ ಉಪಾಧ್ಯ ನಿರ್ವಹಿಸಿದರು.

ಸೋಮವಾರ ಕೋಟ ವಿವೇಕ ವಿದ್ಯಾಸಂಸ್ಥೆಯ  ಫ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಅಸೆಂಬ್ಲಿಯಲ್ಲಿ ಪತ್ರಕರ್ತ ರವೀಂದ್ರ ಕೋಟ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.  ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ವೆಂಕಟೇಶ ಉಡುಪ,ಶಿಕ್ಷಕರಾದ ಶಂಭು ಭಟ್, ಬಾಲಕೃಷ್ಣ ನಕ್ಷತ್ರಿ ಮತ್ತಿತರರರು ಇದ್ದರು.