ಕೋಟ- ವಿವೇಕ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವದ ಲಾಂಛನ,ಜ್ಞಾಪನಾ ಪತ್ರ ಅನಾವರಣ, ವಿವೇಕ ವಿದ್ಯಾಸಂಸ್ಥೆಯ ಸಾಧನೆ ಅಗಾಧ- ಆನಂದ್ ಸಿ ಕುಂದರ್
ಕೋಟ: ಕೋಟ ವಿವೇಕ ವಿದ್ಯಾಸಂಸ್ಥೆಯ 2023-2024ನೇ ಸಾಲಿನಲ್ಲಿ ಅಮೃತ ಮಹೋತ್ಸವದ ಸಂಭ್ರಮ ಆಚರಿಸಿಕೊಳ್ಳುವ ಹಿನ್ನಲೆಯಲ್ಲಿ ಇದರ ಲಾಂಛನ,ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ಬುಧವಾರ ಕಾಲೇಜಿನ ಮಹಾತ್ಮಗಾಂಧಿ ಸ್ಮಾರಕ ಸಭಾಭವನ ಇಲ್ಲಿ ನಡೆಯಿತು.
ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಕೋಟ ವಿವೇಕ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಾಧನೆ ಅಗಾಧ,ಇಲ್ಲಿ ಶಿಕ್ಷಣ ಪಡೆದ ಅದೆಷ್ಟೊ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುತ್ತಿದ್ದಾರೆ. ಇದೊಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಕಂಗೊಳಿಸುತ್ತಿದೆ. ಸಂಸ್ಕಾರಭರಿತ, ಗುಣಮಟ್ಟದ ಶಿಕ್ಷಣ, ಶಿಸ್ತು ಈ ವಿದ್ಯಾದೇಗುಲದಲ್ಲಿ ರಾರಾಜಿಸುತ್ತಿದೆ. ಒರ್ವ ವಿದ್ಯಾರ್ಥಿ ಸಾಧನೆಯ ಹಿಂದೆ ಆ ಶಿಕ್ಷಣ ಸಂಸ್ಥೆಯ ಪಾಲು ಮಹತ್ತರ ಸ್ಥಾನ ನೀಡುತ್ತದೆ.ಪ್ರಸ್ತುತ ಅಮೃತಮಹೋತ್ಸವಕ್ಕೆ ಹಳೆ ವಿದ್ಯಾರ್ಥಿಗಳ ಕೊಡುಗೆ ಸಹಕಾರ ಬಹುಮುಖ್ಯವಾಗಿದೆ ಈ ದಿಸೆಯಲ್ಲಿ ನಾವೆಲ್ಲ ಇದರ ಯಶಸ್ಸಿಗೆ ಟೊಂಕಕಟ್ಟಿ ದುಡಿಯುವ ಎಂದರು.
ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಪಿ.ರಾಘವೇಂದ್ರ ಭಟ್ ಜ್ಞಾಪನಾಪತ್ರ ಅನಾವರಣಗೈದರು.
ವಿದ್ಯಾಸಂಘದ ಅಧ್ಯಕ್ಷ ಪಿ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂದ್ಥೆಯ,ಉಪಾಧ್ಯಕ್ಷರಾದ ಪಿ ಶ್ರೀಧರ ಉಪಾಧ್ಯ, ಜೊತೆಕಾರ್ಯದರ್ಶಿ ಮಂಜುನಾಥ ಉಪಾಧ್ಯ,ಕೋಶಾಧಿಕಾರಿ ವೇರಿಯನ್ ಮೇನೆಜಸ್ , ಸದಸ್ಯರಾದ ಭಾಸ್ಕರ್ ಹಂದೆ, ವಿವೇಕ ಭಾಲಕೀಯರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ, ಬಾಲಕರ ಪ್ರೌಢಶಾಲಾ ಮುಖ್ಯ ಸಹ ಶಿಕ್ಷಕ ವೆಂಕಟೇಶ ಉಡುಪ, ಆಂಗ್ಲ ಮಾಧ್ಯಮದ ಮುಖ್ಯಸ್ಥ ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾ ಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ ನಾವಡ ವಂದಿಸಿದರು. ಕಾರ್ಯಕ್ರವನ್ನು ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.
ಕೋಟ ವಿವೇಕ ವಿದ್ಯಾಸಂಸ್ಥೆಯ 2023-2024ನೇ ಸಾಲಿನಲ್ಲಿ ಅಮೃತ ಮಹೋತ್ಸವದ ಸಂಭ್ರಮ ಆಚರಿಸಿಕೊಳ್ಳುವ ಹಿನ್ನಲೆಯಲ್ಲಿ ಇದರ ಲಾಂಛನ,ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು. ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್, ನಿವೃತ್ತ ಪ್ರಾಂಶುಪಾಲ ಪಿ.ರಾಘವೇಂದ್ರ ಭಟ್, ವಿದ್ಯಾಸಂಘದ ಅಧ್ಯಕ್ಷ ಸಿ.ಎ.ಪ್ರಭಾಕರ ಮಯ್ಯ, ಕಾಲೇಜಿನ ಪ್ರಾಂಶುಪಾಂಶುಪಾಲ ಕೆ.ಜಗದೀಶ ನಾವಡ ಇದ್ದರು.