ವಿವೇಕದಲ್ಲಿ ಶಿಕ್ಷಕರ ದಿನಾಚರಣೆ ‘ಗುರುವಂದನೆ-ಅಭಿವಂದನೆ’

“ಪ್ರತಿಯ್ಯೊಬ್ಬ ವಿದ್ಯಾರ್ಥಿಯಲ್ಲಿಯೂ ಸುಪ್ತವಾದ ಪ್ರತಿಭೆಯಿರುತ್ತದೆ. ಆ ಪ್ರತಿಭೆ ಕಲಾತ್ಮಕವಾಗಿ ಸಂಗೀತ, ಸಾಹಿತ್ಯ, ಅಭಿನಯ, ಕ್ರೀಡೆಗಳಿಂದ ಕೂಡಿರಬಹುದು. ಹೀಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅದನ್ನು ಪೆÇೀಷಿಸಿ, ವಿಕಸನಗೊಳ್ಳುವಂತೆ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಆದ್ದರಿಂದ ಅದರ ಪಾವಿತ್ರ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ತರಗತಿ ಪ್ರವೇಶಿಸುವ ಮುನ್ನ ಸಾಕಷ್ಟು ತಯಾರಿ ನಡೆಸಿರಬೇಕು. ವಿದ್ಯಾರ್ಥಿಗಳಲ್ಲಿ ಭೇದ-ಭಾವ ತೋರದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕು” ಎಂದು ನಿವೃತ್ತ ವಾಣಿಜ್ಯಶಾಸ್ತ್ರ ಪೆÇ್ರಫೆಸರ್ ಶ್ರೀ ಗಣೇಶ್ ಭಟ್ ಇವರು ತಿಳಿಸಿದರು.ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಕೋಟ ವಿದ್ಯಾಸಂಘದ ಆಡಳಿತ ಮಂಡಳಿಯವರು ನಡೆಸುವ ಪರಿಸರದ ಪೆÇೀಷಕ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧ್ಯಾಪಕರ ಸಂಮ್ಮಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣವನ್ನು ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮೈಯ್ಯರು ವಹಿಸಿ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ಸಮರ್ಪಣಾ ಭಾವದಿಂದ ಕರ್ತವ್ಯವನ್ನು ಮಾಡಿದಲ್ಲಿ ಶಿಕ್ಷಕ ಸ್ಥಾನಕ್ಕೆ ನಿಜವಾದ ಗೌರವ ದೊರಕುತ್ತದೆ ಎಂದು ತಿಳಿಸಿದರು.ಅಭ್ಯಾಗತರಾಗಿ ಶ್ರೀ ಆರ್. ಪ್ರಕಾಶ್, ಶಿಕ್ಷಣಾಧಿಕಾರಿಗಳು, ಬ್ರಹ್ಮಾವರ ವಲಯ ಇವರು ಮಾತನಾಡಿ, ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿವೇಕ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು ಅಧ್ಯಾಪಕರ ಸಂಮ್ಮಾನ ಕಾರ್ಯಕ್ರಮ ನಡೆದುಕೊಂಡು ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ, ಶ್ರೀ ಎಂ. ರಾಮದೇವ ಐತಾಳ್, ಕೋಶಾಧಿಕಾರಿ ಶ್ರೀ ವಲೇರಿಯನ್ ಮೆನೇಜಸ್ ಶುಭ ಹಾರೈಸಿದರು.

ಶ್ರೀ ಶಾಂಭವಿ ಹಿ.ಪ್ರಾ.ಶಾಲೆ, ಕೋಟ ಇಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ಶ್ರೀ ರಾಜರಾಮ ಐತಾಳ್, ಸ.ಹಿ.ಪ್ರಾ.ಶಾಲೆ, ಕಾರ್ಕಡ ಶಾಲೆಯ ನಿವೃತ್ತ ಸಹಶಿಕ್ಷಕಿ ಶ್ರೀಮತಿ ಲೀಲಾವತಿ, ಸ.ಹಿ.ಪ್ರಾ.ಶಾಲೆ, ಕೋಟತಟ್ಟು ಇಲ್ಲಿ ನಿವೃತ್ತರಾದ ಸಹಶಿಕ್ಷಕ ಶ್ರೀ ಸತೀಶ ಉಡುಪ ಇವರುಗಳನ್ನು ಸಂಸ್ಥೆಯ ವತಿಯಿಂದ ಸಂಮ್ಮಾನಿಸಲಾಯಿತು. ನಿವೃತ್ತರು ತಮ್ಮ ಸೇವಾಜೀವನದ ಅನುಭವವನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಶ್ರೀ ಕೆ. ಜಗದೀಶ ನಾವಡರು ಸ್ವಾಗತಿಸಿದರು. ಶ್ರೀ ಶಂಭು ಭಟ್ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಶ್ರೀ ಶ್ರೀಪತಿ ಹೇರ್ಳೆ, ಶ್ರೀ ವೆಂಕಟೇಶ ಉಡುಪ, ಆಡಳಿತ ಮಂಡಳಿಯ ಸದಸ್ಯರು, ಬೋಧಕ ವರ್ಗದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ರಮ್ಯಾ ನಿರೂಪಿಸಿದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter