‘ಹಿತ್ತಲ ಗಿಡವೇ ಮದ್ದು’ ಮಾಹಿತಿ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ಸಮಾಜಸೇವಾ ಸಂಘದ ಆಶ್ರಯದಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಿತ್ತಲ ಗಿಡವೂ ಔಷಧಿಯಾಗಿ ಉಪಯೋಗಿಸುವುದರ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಅಧ್ಯಾಪಕರ ಶ್ರೀ ಶ್ರೀನಿವಾಸ ಅಡಿಗ ತೆಕ್ಕಟ್ಟೆ ಇವರು ಆಗಮಿಸಿ, ಮಾತನಾಡಿ ‘ನಮ್ಮ ಮನೆಯ ಸುತ್ತಮುತ್ತ ಇರುವ ಸಸ್ಯ, ಗಿಡಗಳು ನಮ್ಮ ಆರೋಗ್ಯ ಸುಧಾರಿಸುವಲ್ಲಿ, ರೋಗಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ. ಆದರೆ ನಮ್ಮ ಸಮಾಜದಲ್ಲಿ ಹೆಚ್ಚಿನ ಜನರಿಗೆ ಅದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಆದ್ದರಿಂದ ಅವರು ನಾಶ ಪಡಿಸುತ್ತಾರೆ’ ಎಂದು ತಿಳಿಸಿ, ಅಮೃತಬಳ್ಳಿ, ಉರಗ, ಭದ್ರಮುಷ್ಟಿ, ಕಿರಾತಕ ಕಡ್ಡಿ, ನೆಲನೆಲ್ಲಿ, ಕೃಷ್ಣ ತುಳಸಿ, ಒಳ್ಳೆಕುಡಿ, ಗರ್ಗ ಇತ್ಯಾದಿ ಸಸ್ಯಗಳನ್ನು ಪ್ರತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ತೋರಿಸಿ ಅದರ ಔಷಧ ಗುಣಧರ್ಮದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ವಹಿಸಿದ್ದರು. ಸಮಾಜಸೇವಾ ಸಂಘದ ಸಂಚಾಲಕ ಶ್ರೀ ಅಶೋಕಕುಮಾರ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕುಮಾರಿ ಅಮೃತಾ ಪ್ರಾರ್ಥಿಸಿ, ಅನುಷಾ ಧನ್ಯವಾದವಿತ್ತರು. ಕುಮಾರಿ ನಮೃತಾ ಜೆ.ಎನ್. ನಿರೂಪಿಸಿದರು. ಶ್ರೀ ಮಂಜುನಾಥ ಉಪಾಧ್ಯರು ಸಹಕರಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter