ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ
ವಿದ್ಯಾಥರ್ಿಗಳಿಗೆ ಚಾಟರ್ೆಡ್ ಅಕೌಂಟೆಂಟ್ನ ತಯಾರಿ ಮತ್ತು ಅದರ
ಪರೀಕ್ಷೆಗಳ ಕುರಿತಾಗಿ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಿ.ಎ.ಅಮರೀಷ್
ಹೊಳ್ಳ ಇವರು ಆಗಮಿಸಿ, ವಿದ್ಯಾಥರ್ಿಗಳಿಗೆ ಸಿ.ಎ. ಕುರಿತಾಗಿ
ಪೂರ್ವಭಾವಿಯಾಗಿ ಸಿದ್ಧತೆಯನ್ನು ಹೇಗೆ ನಡೆಸಬೇಕು ಮತ್ತು
ಅದರ ಪರೀಕ್ಷೆಗಳ ಬಗ್ಗೆ ವಿವರಿಸಿದರು.
ವಿದ್ಯಾಥರ್ಿಗಳು ಜೀವನದಲ್ಲಿ ನಿಖರವಾದ ಗುರಿಯನ್ನು ಹೊಂದಿ
ಅದರ ಬಗ್ಗೆ ನಿರಂತರ ಪ್ರಯತ್ನ ಮಾಡಿದರೆ ಯಶಸ್ವಿಯಾಗಲು
ಸಾಧ್ಯ ಎಂದು ತಿಳಿಸುತ್ತಾ ಸಿ.ಎ. ತಯಾರಿ ಪರೀಕ್ಷೆಗಳ ಬಗ್ಗೆ ತಮ್ಮ
ಅನುಭವವನ್ನು ಹಂಚಿಕೊಂಡರು.
ವಿಶೇಷವೆಂದರೆ ಸಂಪನ್ಮೂಲ ವ್ಯಕ್ತಿ ಶ್ರೀ ಅಮರೀಷ ಹೊಳ್ಳ
ವಿವೇಕ ವಿದ್ಯಾಸಂಸ್ಥೆಗಳಲ್ಲಿ ಸತತ ಐದು ವರ್ಷ ಅಧ್ಯಯನ ನಡೆಸಿ,
ಪ್ರಸ್ತುತ ಬೆಂಗಳೂರಿನಲ್ಲಿ ಸಿ.ಎ. ಯಾಗಿ ಕಾರ್ಯವನ್ನು
ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.
ಜಗದೀಶ ನಾವಡರು ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಪದ್ಮಿನಿ
ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಶ್ರೀ ಸಂಜೀವ
ಜಿ. ಕಾರ್ಯಕ್ರಮ ಸಂಯೋಜಿಸಿದ್ದರು
