ಸಾಹಿತ್ಯ ಸಂಘದ ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ
ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ
ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ವಿಶ್ವನಾಥ ಕರಬ,
ಪ್ರಾಂಶುಪಾಲರು, ಸ.ಪ.ಪೂ.ಕಾಲೇಜು, ತೆಂಕನಿಡಿಯೂರು ಇವರು
ದೀಪ ಬೆಳಗಿಸಿ ಉದ್ಘಾಟಿಸಿದರು.
ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತನಾಡಿ, ನಮ್ಮ ಜೀವನದಲ್ಲಿ
ಬದುಕನ್ನು ಅರಳಿಸುವ, ಮನಸ್ಸಿಗೆ ಆನಂದವನ್ನು ನೀಡುವ,
ಮನುಷ್ಯನನ್ನು ಸಹೃದಯವಂತನ್ನನ್ನಾಗಿಸುವುದೇ
ಸಾಹಿತ್ಯವಾಗಿದೆ. ಉತ್ತಮ ಕಾವ್ಯವನ್ನು ಓದುವುದದರಿಂದ ಮನಸ್ಸು
ಪ್ರಸನ್ನತೆಯಿಂದ ಕೂಡಿರುತ್ತದೆ. ಆದ್ದರಿಂದ ವಿದ್ಯಾಥರ್ಿಗಳು ಸಾಹಿತ್ಯ
ಅಧ್ಯಯನದ ಜೊತೆಗೆ, ಕವಿತೆ, ಕವನ, ನಾಟಕ, ಹನಿಗವನ
ಮುಂತಾದವುಗಳನ್ನು ಬರೆಯುವ ಆಸಕ್ತಿಯನ್ನು
ಬೆಳೆಸಿಕೊಳ್ಳಬೇಕು. ಎಲ್ಲರಲ್ಲಿಯೂ ಒಂದೊಂದು ಸುಪ್ತವಾದ
ಪ್ರತಿಭೆ ಇರುತ್ತದೆ. ಪ್ರತಿಭೆ ಹೊರಸೂಸಲು ಉತ್ತಮವಾದ
ಅವಕಾಶ, ವೇದಿಕೆ ಬೇಕಾಗುತ್ತದೆ. ಇದಕ್ಕೆ ಕಾಲೇಜಿನ ಸಾಹಿತ್ಯ
ಸಂಘವು ತುಂಬಾ ಸಹಕಾರಿ, ಆದ್ದರಿಂದ ವಿದ್ಯಾಥರ್ಿಗಳು ಸಿಕ್ಕ
ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು
ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು
ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾಥರ್ಿನಿಯರಾದ ಕುಮಾರಿ
ಸಾಹಿತ್ಯ ಮತ್ತು ಶ್ರೀರಕ್ಷಾ ಪಾಥರ್ಿದಿಸಿದರು.
ಸಾಹಿತ್ಯ ಸಂಘದ ಕಾರ್ಯದಶರ್ಿ ಕುಮಾರಿ ಯಜುಷಾ
ಧನ್ಯವಾದವನ್ನಿತ್ತರು. ಜೊತೆ ಕಾರ್ಯದಶರ್ಿ ಕುಮಾರ
ಲಕ್ಷ್ಮಿಕಾಂತ ಸುವರ್ಣ ಉಪಸ್ಥಿತರಿದ್ದರು.
ಕುಮಾರಿ ನಾದಶ್ರೀ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ
ಶ್ರೀ ಚಂದ್ರಶೇಖರ ಎಚ್.ಎಸ್. ಕಾರ್ಯಕ್ರಮ ಸಂಯೋಜಿಸಿದ್ದರು

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter