ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಂಭ್ರಮ

ವಿವೇಕ ಪದವಿಪೂರ್ವ ಕಾಲೇಜು, ಕೋಟ, ಇದರ 2016ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮ ಜರುಗಿತು.DSC_6990

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಎಸ್.ಎಸ್.ನಾಯಕ್, ಸನ್ನದು ಲೆಕ್ಕಪರಿಶೋಧಕರು, ಮಂಗಳೂರು ಇವರು ವಹಿಸಿ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಾಠದೊಂದಿಗೆ ಪಾಠೇತರ ಚಟುವಟಿಕೆಗಳಲ್ಲಿ ಕೂಡಾ ಭಾಗವಹಿಸಬೇಕು. ಅದು ಪಾಠ ಹೇಗೆ ಮುಖ್ಯೋವೋ ಹಾಗೆಯೇ ಜೀವನದಲ್ಲಿ ಕ್ರೀಡೆ, ಕಲೆ, ಭಾಷಣ, ನಾಟಕ, ಲಲಿತ ಕಲೆ ಇತ್ಯಾದಿಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಜೊತೆಗೆ ವಿದ್ಯಾರ್ಥಿಗಳು ಅಧ್ಯಯನದ ಕುರಿತಾಗಿ ಪರಿಶ್ರಮ ಸತತ ಪ್ರಯತ್ನ, ಸಾಧನೆ, ಬದ್ಧತೆಯನ್ನು ಬೆಳೆಗಿಸಿಕೊಳ್ಳಬೇಕು’ ಎಂದು ತಿಳಿಸುತ್ತಾ ಸಂದರ್ಭಕ್ಕೆ ಸರಿಯಾಗಿ ಸಂಸ್ಕೃತ ಶ್ಲೋಕಗಳನ್ನು ಉದಾಹರಿಸುತ್ತಾ ತಿಳಿಯಪಡಿಸಿದರು.

DSC_6995

ಹಾಗೆಯೇ ಸಮಾರಂಭದ ಅಭ್ಯಾಗತರಾಗಿ ಆಗಮಿಸಿದ ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇದರ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ|| ಎ.ಪಿ. ಭಟ್ ಮಾತನಾಡಿ, ವಿವೇಕ ವಿದ್ಯಾಸಂಸ್ಥೆ ಶಿಸ್ತು, ಪಾಠಕ್ರಮಕ್ಕೆ ಹಾಗು ಒಳ್ಳೆಯ ಫಲಿತಾಂಶಕ್ಕೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳು ಇಲ್ಲಿರುವ ಶಿಸ್ತನ್ನು ಬೆಳೆಸಿಕೊಂಡು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲಿ ಅಧ್ಯಯನದ ಮುಕ್ತ ವಾತಾವರಣದ ಸಂಪೂರ್ಣ ಬಳಕೆಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು. ಕೇವಲ ಇಂಜಿನಿಯರ್, ಡಾಕ್ಟರ್ ಆಗುವ ಕನಸ್ಸನ್ನು ಕಾಣದೆ, ವಿಜ್ಞಾನದ ಬೇರೆ ಬೇರೆ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಅಧ್ಯಯನವನು ಮಾಡಬೇಕೆಂದು ಕರೆಯಿತ್ತರು.
DSC_6980ಇನ್ನೋರ್ವ ಅಭ್ಯಾಗತ ಶ್ರೀ ಎಚ್. ಪ್ರಮೋದ ಹಂದೆ, ವಕೀಲರು, ಇವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜೊತೆಗೆ ಪರಿಸರದ ಬಗ್ಗೆ ಹಾಗು ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ಹಾಗೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸ್ವೀಕರಿಸಿ, ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಕೋಟ ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಕೆ. ಮಹಾಬಲೇಶ್ವರ ಆಚಾರ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕಾಂಕ ‘ಜಾಗೃತಿ’ ಇದರ ರಕ್ಷಾ ಕವಚ ಅನಾವರಣಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ವಿದ್ಯಾರ್ಥಿ ನಾಯಕ ವಿನೀತ್ ಭಟ್ ಹಾಗು ಪ್ರೌಢಶಾಲಾ ವಿಭಾಗದ ವರದಿಯನ್ನು ವಿದ್ಯಾರ್ಥಿ ಉಪಮುಖಂಡ ಸ್ವಸ್ಥಿಕ್ ಭಂಡಾರಿ ವಾಚಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಂತರ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳನ್ನು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಗೇ ವಿದ್ಯಾಭಿಮಾನಿಗಳು, ದಾನಿಗಳು ನೀಡಿದ ದತ್ತಿನಿಧಿಯನ್ನು ಕೂಡಾ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀ ವೆಂಕಟೇಶ ಉಡುಪರು ಧನ್ಯವಾದವನ್ನಿತ್ತರು. ಕನ್ನಡ ಉಪನ್ಯಾಸಕ ಶ್ರೀ ಸದಾಶಿವ ಹೊಳ್ಳರು ಕಾರ್ಯಕ್ರಮ ನಿರ್ವಹಿಸಿದರು.

ಹಾಗೆಯೇ ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದ ಅಂಗವಾಗಿ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ಕೂಡಾ ಜರುಗಿತು. ವಿವಿಧ ನೃತ್ಯಗಳು, ಸಂಗೀತ ಸುಧೇ, ರೂಪಕಗಳು, ಚಂಡೆವಾದನ, ನಾಟಕಗಳು ಉತ್ತಮವಾಗಿ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟಿತು. ಇದರೊಂದಿಗೆ ಇನ್ಫೋಸಿಸಿ ಹಾಗು ಎಂ.ಟಿ.ಆರ್. ಮೈಯ್ಯರು ಕೊಡಮಾಡುವ ವಿವೇಕ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿತ್ತಿರುವ ಅತ್ಯತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter