ವಿವೇಕದ ಹಳೆ ವಿದ್ಯಾರ್ಥಿ ಬಬ್ಲೂಷ ಚಿತ್ರ ನಟ ಮಣಿ ಶೆಟ್ಟಿ ಕಾಲೇಜಿಗೆ ಭೇಟಿ

DSC_6570ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ, ಅನೇಕ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿ ಇದೀಗ ಬಬ್ಲೂಷ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ ತೆಕ್ಕೆಟೆ ಮೂಲದ ಶ್ರೀ ಮಣಿ ಶೆಟ್ಟಿ, ಯಾನೆ ಮಣಿಕಂಠ ಶೆಟ್ಟಿ ಅವರು ತಾನು ಕಲಿತ ವಿದ್ಯಾಸಂಸ್ಥೆಯಾದ ಕೋಟ ವಿವೇಕ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದರು. ಅನಂತರ ನಡೆದ ಸರಳ ಸಮಾರಂಭದಲ್ಲಿ ನಾಯಕ ನಟ ಶ್ರೀ ಮಣಿ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ತಾನು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಕಾಲೇಜಿನ ಶಿಸ್ತು, ಸಂಯಮ, ಪಾಠ ಪ್ರವಚನ ಮುಂತಾದ ವಿಷಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಹಾಗೆ ತನ್ನ ಸಿನಿಮಾರಂಗದ ಬಗ್ಗೆ ಮಾಹಿತಿ ನೀಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಪರಿಶ್ರಮ ಮತ್ತು ಛಲವನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠವಾದ ಸ್ಥಾನವನ್ನು ಪಡೆಯಬಹುದೆಂದು ತಿಳಿಸಿದರು. ಹಾಗೆಯೇ ತಾನು ನಾಯಕ ನಟನಾಗಿ ಬೆಳೆಯುವಲ್ಲಿ ಪಟ್ಟ ಪರಿಶ್ರಮದ ಬಗ್ಗೆ ವಿವರಿಸಿದರು.
ಜೀವನದಲ್ಲಿ ಈ ವಿದ್ಯಾಸಂಸ್ಥೆಯಿಂದ ಸಾಕಷ್ಟು ಪ್ರಯೋಜನ ಹಾಗು ಪ್ರೇರಣೆಯನ್ನು ಪಡೆದ ಬಗ್ಗೆ ತನ್ನ ಅನುಭವಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ಸದಾಶಿವ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು, ಶ್ರಿವಪ್ರಸಾದ ಶೆಟ್ಟಿಗಾರ್ ಧನ್ಯವಾದವನ್ನಿತ್ತರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter