ಹೆಣ್ಣು ಮಕ್ಕಳ ಸ್ವರಕ್ಷಣಾ ಮಾಹಿತಿ

   ಆಧುನಿಕಕವಾಗಿ ಬದಲಾಗುತ್ತಿರುವ ಈ ಸಮಾಜದಲ್ಲಿ ಸ್ತ್ರೀಯರು ಅಥವಾ ಹೆಣ್ಮಕ್ಕಳು ನಿಭರ್ೀತಿಯಿಂದ ಇರುವುದಕ್ಕೆ, ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಆಗಾಗ್ಗೆ ಹೆಣ್ಣು ಮಕ್ಕಳ ಮತ್ತು ಸ್ತ್ರೀಯರ ಮೇಲೆ ದೌರ್ಜನಯಗಳು, ಕಿರುಕುಳಗಳು, ನಡೆಯುತ್ತಲೇ ಇರುತ್ತದೆ. ಇದರಿಂದ ರಕ್ಷಣೆಯನ್ನು ಪಡೆಯ ಬೇಕಾದರೆ ಸ್ತ್ರೀಯರು ಹೆಣ್ಣು ಮಕ್ಕಳು ಕೆಲವು ಸ್ವರಕ್ಷಣೆಗೆ ವಿಧಾನವನ್ನು ತಿಳಿಯುವುದು ಅತ್ಯಂತ ಅಗತ್ಯ ಎಂದು ಕಾತರ್ಿಕ್ ಎಸ್. ಕಟೀಲ್ ತಿಳಿಸಿದರು.img_8557
ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಅಜಪುರ ಕನರ್ಾಟಕ ಸಂಘ, ಬ್ರಹ್ಮಾವರ, ಇವರು ಸಂಯೋಜಿಸಿದ ‘ಹೆಣ್ಣು ಮಕ್ಕಳ ಸ್ವರಕ್ಷಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ತ್ರೀಯರು ಹೆಣ್ಣು ಮಕ್ಕಳು ಇಂದು ಮಾರ್ಗದಲ್ಲಿ ನಿಭರ್ೀತಿಯಿಂದ ಸಂಚರಿಸುವಂತೆ ಆಗಬೇಕು, ಹಾಗೆಯೇ ಸಾರ್ವಜನಿಕವಾಗಿ ಎಲ್ಲಾ ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸುವಂತೆ ಆಗಬೇಕು. ಆದರೆ ಪರಿವರ್ತನಾ ಸಮಾಜದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿ ಸಾಕಷ್ಟು ದೌರ್ಜನ್ಯ, ಕಿರುಕುಳಗಳಿಗೆ ಮಹಿಳೆಯರು ಬಲಿಪಶುವಾಗುತ್ತಾರೆ. ಇದು ಸಲ್ಲದು. ಎಂದು ತಿಳಿಸಿದರು. ಅಲ್ಲದೇ ದೌರ್ಜನ್ಯ ಕಿರುಕುಳ ಅತ್ಯಾಚಾರ ನಡೆಯುವುದರಿಂದ ಸ್ತ್ರೀಯರು ಹೇಗೆ ತಪ್ಪಿಸಿಕೊಳ್ಳಬಹುದು ಎಂಬ ವಿಧಾನಗಳನ್ನು ತಿಳಿಸಿಕೊಟ್ಟರು.
ಸ್ವರಕ್ಷಣೆಯ ಕೆಲವು ವಿಧಾನಗಳನ್ನು ತಿಳಿಸಿಕೊಟ್ಟರು. ಸ್ವರಕ್ಷಣೆಯ ಕೆಲವು ಹಂತವನ್ನು ಪ್ರಾಯೋಗಿಕವಾಗಿ ವಿವರಿಸಿ, ವಿದ್ಯಾಥರ್ಿನಿಯರು ದಿನವು ರಕ್ಷಣೆಯ ಅಭ್ಯಾಸವನ್ನು ಕರಗತ ಮಾಡಿಕೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ಕಾತರ್ಿಕ್ ಕಟೀಲ್ ಅವರು ತಾಯಿ ಶ್ರೀಮತಿ ಶೋಭಾ ಕಟೀಲ್ ಕೂಡ ಉಪಸ್ಥಿತರಿದ್ದು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಅಜಪುರ ಕನರ್ಾಟಕ ಸಂಘದ ಉಪಾಧ್ಯಕ್ಷರಾದ ಶ್ರೀ ಎಚ್. ರಾಘವೇಂದ್ರ ಭಟ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಸದಾಶಿವ ಹೊಳ್ಳರು ವೇದಿಕೆಯಲ್ಲಿ ಉಪಸ್ಥಿತರಿದ್ದು ಸ್ವಾಗತಿಸಿದರು. ಉಪನ್ಯಾಸಕ ಶಿವಪ್ರಸಾದ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter