ಬೆಂಗಳೂರಿನಲ್ಲಿ ವಿವೇಕ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವ- ಜಾಗೃತಿ ಸಮಾವೇಶ

ಕೋಟ: ದಿನಾಂಕ 09-04-2023 ರಂದು ಬೆಂಗಳೂರಿನ ಬಸವನ ಗುಡಿಯ ಶ್ರೀ ಗುರುನರಸಿಂಹ ಕಲ್ಯಾಣಮಂಟಪದಲ್ಲಿ ವಿವೇಕ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವ- ಜಾಗೃತಿ ಸಮಾವೇಶವು ಅದ್ದೂರಿಯಾಗಿ ನಡೆಯಿತು.

ಸಭೆಯಲ್ಲಿ ವಿವೇಕದ ಅಭಿಮಾನಿಗಳು ಮತ್ತು ಹಿಂದಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭೆಯು ಸುಮಧುರ ಕ್ಷಣಗಳಿಗೆ ಸಾಕ್ಷಿಯಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅಮೃತ ಮಹೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ಅವರ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೀಧರ ಉಪಾದ್ಯರು ವಹಿಸಿದ್ದರು, ವೇದಿಕೆಯಲ್ಲಿ. ಡಾ. ಮಾಧವ ಉಡುಪರು,ಡಾ.ಸುರೇಶ ಐತಾಳರು (Shekara Hospital Bangalore),ಡಾ.ಗಿರಿಧರ ಉಪಾದ್ಯರು, ಶ್ರೀ ರಮಾನಂದ ಭಟ್ಟರು ಉಪಸ್ಥಿತರಿದ್ದು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿನ ವಿದ್ಯಾರ್ಥಿ FM Radio Anchor ಶ್ರೀಮತಿ ರೇವತಿ ಶೆಟ್ಟಿ ಮಾಡಿದರು, ವಿವೇಕ ಬಾಲಕಿಯರ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಜಗದೀಶ ಹೊಳ್ಳರು ಧನ್ಯವಾದ ಅರ್ಪಿಸಿದರು.

ಸಂಸ್ಥೆಯ ಹಿಂದಿನ ವಿದ್ಯಾರ್ಥಿಗಳಾದ ಶ್ರೀಮತಿ ಕಲ್ಪನಾ, ಜಿ.ಶ್ರೀ ಶ್ರೀಧರ ಐತಾಳರು, ಶ್ರೀ ವಾಸುದೇವ ಅಡಿಗರು, ಶ್ರೀ ನವೀನರು, ಶ್ರೀ ರವೀಂದ್ರ ಉಪಾದ್ಯರು, ಶ್ರೀ ಡೆನಿಸ್ ಬಾಂಜಿ, ಶ್ರೀ ಸನತ್ ಕುಮಾರ್ ಬೆಂಗಳೂರು ಹಾಗು ಸಂಸ್ಥೆಯಾ ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *