ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ
ವಿದ್ಯಾರ್ಥಿ ಸಂಘದ ಉದ್ಘಾಟನೆಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿ ಸರಕಾರದ ಉದ್ಘಾಟಕರಾಗಿ, ಶ್ರೀ ವಾಸು ಮೊಗೇರ,
ರಾಜ್ಯಶಾಸ್ತ್ರ ಉಪನ್ಯಾಸಕರು, ಬ್ರಹ್ಮಾವರ ಸರಕಾರಿ ಪ.ಪೂ.ಕಾಲೇಜು,
ಇವರು ಆಗಮಿಸಿ ದೀಪವನ್ನು ಬೆಳಗಿಸುವುದರ ಮೂಲಕ
ಉದ್ಘಾಟಿಸಿದರು.
ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತನಾಡಿ ಸಂಸತ್ತಿನ ರಚನೆ, ಆದರ
ಕಾರ್ಯ ವೈಖರಿ ಮತ್ತು ಅಲ್ಲಿ ಸ್ವೀಕರಿಸುವ ನಿರ್ಣಯಗಳ ಬಗ್ಗೆ ತಿಳಿಸಿ,
ವಿದ್ಯಾಥರ್ಿಗಳು ವಿದ್ಯಾಥರ್ಿ ಜೀವನದಲ್ಲೇ ಸಂಸತ್ತಿನ ಕುರಿತಾಗಿ
ತಿಳಿದುಕೊಳ್ಳಬೇಕು. ಶಾಲೆಯ ವಿದ್ಯಾಥರ್ಿ ಸರಕಾರದಲ್ಲಿ ನೀಡಿರುವ
ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಇದರಿಂದ
ವಿದ್ಯಾಥರ್ಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದು
ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು,
ವಾಕ್ಪತಿ, ಉಪವಾಕ್ಪತಿಯು ಸೇರಿದಂತೆ ಮಂತ್ರಿಮಂಡಲದ ಸದಸ್ಯರಿಗೆ
ಪ್ರಮಾಣ ವಚನ ಬೋಧಿಸಿದರು.
ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕ ಶ್ರೀ ವೆಂಕಟೇಶ
ಉಡುಪರು ಶುಭ ಹಾರೈಸಿದರು.
ವಿದ್ಯಾಥರ್ಿ ಸರಕಾರದ ಮುಖ್ಯಮಂತ್ರಿ ರಿತೇಶ್ ಕುಂದರ್
ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ಉಪಮುಖ್ಯಮಂತ್ರಿ ವಿಶಾಲ್ ಧನ್ಯವಾದವನ್ನಿತ್ತರು. ಕುಮಾರಿ
ಯಜುಷಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಶ್ರೀ ಎ.
ಗಣೇಶಕುಮಾರ ಶೆಟ್ಟಿ ಮತ್ತು ಶಿಕ್ಷಕಿ ರತಿ ಬಾ ಕಾರ್ಯಕ್ರಮ
ಸಂಯೋಜಿಸಿದ್ದರು

Leave a Reply

Your email address will not be published. Required fields are marked *