ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆ, ಕುದಿ, ಇಲ್ಲಿ ಜರುಗಿದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಜಿಲ್ಲಾಮಟ್ಟದ ಸ್ಪರ್ಧೆಯ ಸಂಗೀತ ವಿಭಾಗದಲ್ಲಿ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶ್ರಾವ್ಯ, ನೇಹಾ ಹೊಳ್ಳ, ರಂಜನಾ, ಅಶ್ವಿನಿ, ಆರ್ಯ ವೈದ್ಯ, ಮೇಘನಾ, ಪ್ರತೀಕ್ಷಾ ಮಧ್ಯಸ್ಥ, ದಿನಕರ, ಶಮಂತಕ, ಇರ್ಷಾದ್ ಇವರ ತಂಡವು ಪ್ರಥಮ ಸ್ಥಾನ ಪಡೆದು ಅಕ್ಟೋಬರ್‍ನಲ್ಲಿ ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
