Monthly Archives: January 2017

ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ 68ನೇ ಗಣರಾಜ್ಯೋತ್ಸವ ಆಚರಣೆ

ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ 68ನೇ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ರಾಷ್ಟ್ರ ಧ್ವಜಾರೋಹಣವನ್ನು ಮಾಡಿ ಸಂಸ್ಥೆಗಳ ವಿದ್ಯಾರ್ಥಿಗಳನ್ನುದ್ದೇಶಿಸಿ,‘ನಾವು ಈಗ 68ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಿರುವ ದೇಶಗಳಲ್ಲಿ ಭಾರತವು ಒಂದು ಬಹು ಮುಖ್ಯ ದೇಶವಾಗಿದೆ. ಪ್ರಜೆಗಳು, ಪ್ರಜೆಗಳಿಂದ, ಪ್ರಜೆಗಳಿಗೋಸ್ಕರವಾಗಿ ನೆಡಸಲ್ಪಡುವ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದೆ. ಆದ್ದರಿಂದ ನಮಗೆ, ಈ ಗಣರಾಜ್ಯೋತ್ಸವವು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವ ಉತ್ಸವವೇ ಆಗಿದೆ. ಭಾರತೀಯರಾದ ನಾವು ನಮ್ಮ ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕು. ದೇಶದ ಪ್ರಗತಿಯಲ್ಲಿ ನಾವು ನಮ್ಮದೇ ಕೊಡುಗೆಯನ್ನು ನೀಡಬೇಕು. ಸ್ವಚ್ಛ ಹಾಗು ಭ್ರಷ್ಟಾಚಾರಮುಕ್ತ ದೇಶವಾಗಿಸುವಲ್ಲಿ ಪ್ರಯತ್ನಿಸಬೇಕು. ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಆಂದೋಲನದಲ್ಲಿ ನಾವು ಕೂಡ ಭಾಗವಹಿಸಿ, ಕೇವಲ ಭೂಮಿಯ ಕೊಳಕು, ಕಸವನ್ನು ಮಾತ್ರ ಅಲ್ಲ, ಮನಸ್ಸಿನ ಕೊಳಕನ್ನು ತೆಗೆದು ಹಾಕೋಣ’ ಎಂದು ಕರೆಯಿತ್ತರು.ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳರು, ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ.ರಾಮದೇವ ಐತಾಳ್, ವಿವೇಕ ಪ.ಪೂ.ಕಾಲೇಜಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಕುಮಾರ ವಿನೀತ ಭಟ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಕೋಟದ ವಿವೇಕ ವಿದ್ಯಾಸಂಸ್ಥೆಗಳಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ

ಉಚಿತ ಸೈಕಲ್ ವಿತರಣೆ, ಕ್ಷೀರ ಭಾಗ್ಯ ಯೋಜನೆ, ಉಚಿತ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಒಂದು ಗುರಿಯಿಟ್ಟುಕೊಂಡು ಅಧ್ಯಯನ ಮಾಡಬೇಕು ಎಂದು ಕೋಟ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಶ್ರೀ ಪ್ರಮೋದ ಹಂದೆಯವರು ಕೋಟದ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
2ಅವರು ಕೋಟದ ವಿವೇಕ ವಿದ್ಯಾಸಂಸ್ಥೆಯ ಪ್ರೌಢಶಾಲೆಯ ಮಕ್ಕಳಿಗೆ 2016-17ನೇ ಸಾಲಿನ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರಾಘವೆಂದ್ರ ಕಾಂಚನ್‍ನವರು ‘ಇದೊಂದು ಸರ್ಕಾರದ ಅತ್ಯುತ್ತಮ ಯೋಜನೆಯಾಗಿದ್ದು ಸರ್ಕಾರದಿಂದ ಕೊಡುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳೆಲ್ಲರೂ ರಾಷ್ಟ್ರೀಯ ಹೆದ್ದಾರಿಯ ನಿಯಮಗಳನ್ನು ಪಾಲಿಸಿಕೊಂಡು ಶಾಲೆಗೆ ಸರಿಯಾದ ವೇಳೆಯಲ್ಲಿ ಬರಬೇಕು’ ಎಂದು ಕಿವಿ ಮಾತು ಹೇಳಿದರು.

1

ಈ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯರು ಶ್ರೀಮತಿ ಲಲಿತಾ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರಿ ಜಯಪ್ರಕಾಶ್ ಹಾಗು ಕೋಟ ವಿದ್ಯಾಸಂಘದ ಕಾರ್ಯದರ್ಶಿಗಳಾದ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ವಿವೇಕ ಪ.ಪೂ.ಕಾಲೇಜಿನ ಪ್ರಾಂಶುಪಾಲ ಶ್ರೀ ಕೆ. ಜಗದೀಶ ನಾವಡರು ಅತಿಥಿ ಹಾಗು ಸೇರಿರುವ ವಿದ್ಯಾರ್ಥಿ ಹಾಗು ಪೋಷಕರನ್ನು ಸ್ವಾಗತಿಸಿದರು. ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳರು ಧನ್ಯವಾದ ಸಮರ್ಪಣೆ ಮಾಡಿದರು. ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ.ರಾಮದೇವ ಐತಾಳ್, ವಿವೇಕ ಪ.ಪೂ.ಕಾಲೇಜಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ನರೇಂದ್ರ ಕುಮಾರ್ ಇವರು ನಿರ್ವಹಿಸಿದ್ದರು.

ಸೃಜನಶೀಲ ಮತ್ತು ಸಂವಹನ ಕೌಶಲ ತರಬೇತಿ

DSC_7181‘ಒಂದು ಕೆಲಸವನ್ನು ಸಾಮಾನ್ಯವಾಗಿ ಮಾಡುವುದು ಸಹಜ. ಆದರೆ, ಅದನ್ನು ತನ್ನದೇ ಆದ ರೀತಿಯಲ್ಲಿ, ಶೈಲಿಯಲ್ಲಿ, ವಿಶಿಷ್ಟ ರೀತಿಯಲ್ಲಿ ಯೋಚಿಸಿ, ಮಾಡುವುದೇ ಸೃಜನಶೀಲತೆ, ಪ್ರತಿಯೊಬ್ಬ ವ್ಯಕ್ತಿಯು ಸೃಜನಶೀಲನಾಗಿರುತ್ತಾನೆ. ತನ್ನಲ್ಲಿರುವ ಕೌಶಲವನು ಉಪಯೋಗಿಸಿಕೊಂಡು ತನ್ನತನವನ್ನು ಅದರಲ್ಲಿ ತೋರಿಸಬೇಕು’ ಎಂದು ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿಯಾದ ಪ್ರಸ್ತುತ ಬೆಂಗಳೂರಿನ ಸೀಮನ್ಸ್ ಕಂಪೆನಿ ಉದ್ಯೋಗಿಯಾಗಿರುವ ಶ್ರೀ ವಿದ್ಯಾಭೂಷಣ ಹಂದೆಯವರು ತಿಳಿಸಿದರು.
ಅವರು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸೃಜನಶೀಲ ಮತ್ತು ಸಂವಹನ ತರಬೇತಿಯನ್ನು ನೀಡುತ್ತಾ ಮಾತನಾಡಿದರು. ಕೆಲವು ಪ್ರಾಯೋಗಿಕ ವಿಷಯಗಳ ಮೂಲಕ ಕೌಶಲವನ್ನು ಹೇಗೆ ಅಭಿವೃದ್ಧಿ ಪಡೆಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು. ಹಾಗೆಯೇ ವಿದ್ಯಾರ್ಥಿಗಳು ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಉತ್ತಮ ಸಂವಹನೆಯಿಂದ ಮನುಷ್ಯ ತನ್ನ ಜೀವನದಲ್ಲಿ ಹಾಗು ಔದ್ಯೊಗಿಕ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಇನ್ನೊಬ್ಬರ ಮಾತನ್ನು ಕೇಳುವಾಗ ಸರಿಯಾಗಿ ಕೇಳಿ ಅರ್ಥ ಮಾಡಿಕೊಂಡು ಮತ್ತೊಬ್ಬರಿಗೆ ಅದನ್ನು ಹೇಳಿದರೆ ಮಾತ್ರ ಉತ್ತಮ ಸಂವಹನೆ ಮಾಡಲು ಸಾಧ್ಯ ಎಂದು ಪ್ರಾಯೋಗಿಕವಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಶ್ರೀ ವಿದ್ಯಾಭೂಷಣ ಹಂದೆಯವರನ್ನು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ಶಿವಪ್ರಸಾದ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವನ್ನಿತ್ತರು.

ವಿವೇಕದ ಹಳೆ ವಿದ್ಯಾರ್ಥಿ ಬಬ್ಲೂಷ ಚಿತ್ರ ನಟ ಮಣಿ ಶೆಟ್ಟಿ ಕಾಲೇಜಿಗೆ ಭೇಟಿ

DSC_6570ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ, ಅನೇಕ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿ ಇದೀಗ ಬಬ್ಲೂಷ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ ತೆಕ್ಕೆಟೆ ಮೂಲದ ಶ್ರೀ ಮಣಿ ಶೆಟ್ಟಿ, ಯಾನೆ ಮಣಿಕಂಠ ಶೆಟ್ಟಿ ಅವರು ತಾನು ಕಲಿತ ವಿದ್ಯಾಸಂಸ್ಥೆಯಾದ ಕೋಟ ವಿವೇಕ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದರು. ಅನಂತರ ನಡೆದ ಸರಳ ಸಮಾರಂಭದಲ್ಲಿ ನಾಯಕ ನಟ ಶ್ರೀ ಮಣಿ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ತಾನು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಕಾಲೇಜಿನ ಶಿಸ್ತು, ಸಂಯಮ, ಪಾಠ ಪ್ರವಚನ ಮುಂತಾದ ವಿಷಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಹಾಗೆ ತನ್ನ ಸಿನಿಮಾರಂಗದ ಬಗ್ಗೆ ಮಾಹಿತಿ ನೀಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಪರಿಶ್ರಮ ಮತ್ತು ಛಲವನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠವಾದ ಸ್ಥಾನವನ್ನು ಪಡೆಯಬಹುದೆಂದು ತಿಳಿಸಿದರು. ಹಾಗೆಯೇ ತಾನು ನಾಯಕ ನಟನಾಗಿ ಬೆಳೆಯುವಲ್ಲಿ ಪಟ್ಟ ಪರಿಶ್ರಮದ ಬಗ್ಗೆ ವಿವರಿಸಿದರು.
ಜೀವನದಲ್ಲಿ ಈ ವಿದ್ಯಾಸಂಸ್ಥೆಯಿಂದ ಸಾಕಷ್ಟು ಪ್ರಯೋಜನ ಹಾಗು ಪ್ರೇರಣೆಯನ್ನು ಪಡೆದ ಬಗ್ಗೆ ತನ್ನ ಅನುಭವಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀ ಸದಾಶಿವ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು, ಶ್ರಿವಪ್ರಸಾದ ಶೆಟ್ಟಿಗಾರ್ ಧನ್ಯವಾದವನ್ನಿತ್ತರು.

ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಂಭ್ರಮ

ವಿವೇಕ ಪದವಿಪೂರ್ವ ಕಾಲೇಜು, ಕೋಟ, ಇದರ 2016ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ಕಾರ್ಯಕ್ರಮ ಜರುಗಿತು.DSC_6990

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಎಸ್.ಎಸ್.ನಾಯಕ್, ಸನ್ನದು ಲೆಕ್ಕಪರಿಶೋಧಕರು, ಮಂಗಳೂರು ಇವರು ವಹಿಸಿ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪಾಠದೊಂದಿಗೆ ಪಾಠೇತರ ಚಟುವಟಿಕೆಗಳಲ್ಲಿ ಕೂಡಾ ಭಾಗವಹಿಸಬೇಕು. ಅದು ಪಾಠ ಹೇಗೆ ಮುಖ್ಯೋವೋ ಹಾಗೆಯೇ ಜೀವನದಲ್ಲಿ ಕ್ರೀಡೆ, ಕಲೆ, ಭಾಷಣ, ನಾಟಕ, ಲಲಿತ ಕಲೆ ಇತ್ಯಾದಿಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಜೊತೆಗೆ ವಿದ್ಯಾರ್ಥಿಗಳು ಅಧ್ಯಯನದ ಕುರಿತಾಗಿ ಪರಿಶ್ರಮ ಸತತ ಪ್ರಯತ್ನ, ಸಾಧನೆ, ಬದ್ಧತೆಯನ್ನು ಬೆಳೆಗಿಸಿಕೊಳ್ಳಬೇಕು’ ಎಂದು ತಿಳಿಸುತ್ತಾ ಸಂದರ್ಭಕ್ಕೆ ಸರಿಯಾಗಿ ಸಂಸ್ಕೃತ ಶ್ಲೋಕಗಳನ್ನು ಉದಾಹರಿಸುತ್ತಾ ತಿಳಿಯಪಡಿಸಿದರು.

DSC_6995

ಹಾಗೆಯೇ ಸಮಾರಂಭದ ಅಭ್ಯಾಗತರಾಗಿ ಆಗಮಿಸಿದ ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇದರ ಭೌತಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ|| ಎ.ಪಿ. ಭಟ್ ಮಾತನಾಡಿ, ವಿವೇಕ ವಿದ್ಯಾಸಂಸ್ಥೆ ಶಿಸ್ತು, ಪಾಠಕ್ರಮಕ್ಕೆ ಹಾಗು ಒಳ್ಳೆಯ ಫಲಿತಾಂಶಕ್ಕೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳು ಇಲ್ಲಿರುವ ಶಿಸ್ತನ್ನು ಬೆಳೆಸಿಕೊಂಡು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲಿ ಅಧ್ಯಯನದ ಮುಕ್ತ ವಾತಾವರಣದ ಸಂಪೂರ್ಣ ಬಳಕೆಯನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು. ಕೇವಲ ಇಂಜಿನಿಯರ್, ಡಾಕ್ಟರ್ ಆಗುವ ಕನಸ್ಸನ್ನು ಕಾಣದೆ, ವಿಜ್ಞಾನದ ಬೇರೆ ಬೇರೆ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಅಧ್ಯಯನವನು ಮಾಡಬೇಕೆಂದು ಕರೆಯಿತ್ತರು.
DSC_6980ಇನ್ನೋರ್ವ ಅಭ್ಯಾಗತ ಶ್ರೀ ಎಚ್. ಪ್ರಮೋದ ಹಂದೆ, ವಕೀಲರು, ಇವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಜೊತೆಗೆ ಪರಿಸರದ ಬಗ್ಗೆ ಹಾಗು ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ಹಾಗೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸ್ವೀಕರಿಸಿ, ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಕೋಟ ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಕೆ. ಮಹಾಬಲೇಶ್ವರ ಆಚಾರ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕಾಂಕ ‘ಜಾಗೃತಿ’ ಇದರ ರಕ್ಷಾ ಕವಚ ಅನಾವರಣಗೊಳಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿ ಅಭ್ಯಾಗತರನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ವಿದ್ಯಾರ್ಥಿ ನಾಯಕ ವಿನೀತ್ ಭಟ್ ಹಾಗು ಪ್ರೌಢಶಾಲಾ ವಿಭಾಗದ ವರದಿಯನ್ನು ವಿದ್ಯಾರ್ಥಿ ಉಪಮುಖಂಡ ಸ್ವಸ್ಥಿಕ್ ಭಂಡಾರಿ ವಾಚಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಂತರ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳನ್ನು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಾಗೇ ವಿದ್ಯಾಭಿಮಾನಿಗಳು, ದಾನಿಗಳು ನೀಡಿದ ದತ್ತಿನಿಧಿಯನ್ನು ಕೂಡಾ ವಿತರಿಸಲಾಯಿತು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕರಾದ ಶ್ರೀ ವೆಂಕಟೇಶ ಉಡುಪರು ಧನ್ಯವಾದವನ್ನಿತ್ತರು. ಕನ್ನಡ ಉಪನ್ಯಾಸಕ ಶ್ರೀ ಸದಾಶಿವ ಹೊಳ್ಳರು ಕಾರ್ಯಕ್ರಮ ನಿರ್ವಹಿಸಿದರು.

ಹಾಗೆಯೇ ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದ ಅಂಗವಾಗಿ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ಕೂಡಾ ಜರುಗಿತು. ವಿವಿಧ ನೃತ್ಯಗಳು, ಸಂಗೀತ ಸುಧೇ, ರೂಪಕಗಳು, ಚಂಡೆವಾದನ, ನಾಟಕಗಳು ಉತ್ತಮವಾಗಿ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟಿತು. ಇದರೊಂದಿಗೆ ಇನ್ಫೋಸಿಸಿ ಹಾಗು ಎಂ.ಟಿ.ಆರ್. ಮೈಯ್ಯರು ಕೊಡಮಾಡುವ ವಿವೇಕ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿತ್ತಿರುವ ಅತ್ಯತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವೇಕ ವಿದ್ಯಾಸಂಸ್ಥೆಯ ವತಿಯಿಂದ ಪ್ರಶಸ್ತಿ ಪುರಸ್ಕೃತ ಸಂಮ್ಮಾನ

DSC_5495  ಸಮಾಜ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕೊಡಮಾಡುವ 2016-17ನೇ ಸಾಲಿನಲ್ಲಿ ಪ್ರಶಸ್ತಿ ಪುರಸ್ಕೃತರಾದ, ನಿವೃತ್ತ ಅಧ್ಯಾಪಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀ ಎಚ್. ಶ್ರೀಧರ ಹಂದೆ ಇವರನ್ನು, ಕೋಟ ವಿವೇಕ ವಿದ್ಯಾಸಂಸ್ಥೆಗಳ ಪರವಾಗಿ ಅವರ ಮನೆಗೆ ಭೇಟಿ ನೀಡಿ ಸಂಸ್ಥೆಗಳ ಮುಖ್ಯಸ್ಥರು ಪ್ರಶಸ್ತಿ ಪುರಸ್ಕೃತರನ್ನು ಶಾಲು ಹೊದಿಸಿ ಹಣ್ಣು ಹಂಪಲು ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಸಂಮ್ಮಾನಿತರ ಸಮಾಜಸೇವೆಯನ್ನು ಹಾಗು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವುಡರು, ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳರು, ಶ್ರೀ ಎಂ.ರಾಮದೇವ ಐತಾಳರು ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಗಳ ಇನ್ನಿತರ ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದರವರು ಹಾಜರಿದ್ದರು.

ವಿವೇಕ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ 2016-17

ಕೋಟ : ವಿವೇಕ ವಿದ್ಯಾಸಂಸ್ಥೆಗಳ 2016-17ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ವಿವೇಕದ ಕ್ರೀಡಾಂಗಣದಲ್ಲಿ ಜರುಗಿತು.DSC_4524

ಕ್ರೀಡಾಕೂಟದ ಉದ್ಘಾಟನೆಯನ್ನು ಕೋಟ ವಿದ್ಯಾಸಂಘದ ಕಾರ್ಯದರ್ಶಿಗಳಾದ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ಕ್ರೀಡಾಧ್ವಜವನ್ನು ಅರಳಿಸುವ ಮೂಲಕ ನೆರವೇರಿಸಿ ಮಾತನಾಡಿ “ವಿದ್ಯಾರ್ಥಿಗಳಿಗೆ ಪಾಠ ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಕ್ರೀಡೆ ಹಾಗು ಪಾಠೇತರ ಚಟುವಟಿಕೆಗಳು ಅತೀ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಸ್ವಯಂಸ್ಫೂರ್ತಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸ್ಪರ್ಧಾತ್ಮಕವಾದ ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋಲು ಬಂದಾಗ ಕುಗ್ಗದೇ ಅದನ್ನು ಕ್ರೀಡಾಸ್ಫೂರ್ತಿಯಿಂದ ಸಹಜವಾಗಿ ಸ್ವೀಕರಿಸಬೇಕು. ದೈಹಿಕ ಹಾಗು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ತುಂಬಾ ಸಹಕಾರಿಯಾಗುತ್ತದೆ” ಎಂದು ತಿಳಿಸಿದರು.DSC_4585

ಸಮಾರಂಭದ ಮುಖ್ಯ ಅತಿಥಿಯಾಗಿ, ರಾಜ್ಯ ಹಾಗು ರಾಷ್ಟ್ರಮಟ್ಟದ ಈಜುಗಾರ ಹಾಗೇ ಈಜು ತರಬೇತುದಾರರಾದ ಶ್ರೀ ಪಿ. ಗೋಪಾಲಕೃಷ್ಣ ಅಡಿಗ, ಪಾರಂಪಳ್ಳಿ ಇವರು ಆಗಮಿಸಿ ಶುಭ ಹಾರೈಸಿದರು. ಅಲ್ಲದೇ ಶ್ರೀ ಗೋಪಾಲಕೃಷ್ಣ ಅಡಿಗರನ್ನು ವಿಶೇಷವಾಗಿ ಗುರುತಿಸಿ ಸಂಮ್ಮಾನಿಸಲಾಯಿತು.

DSC_4583

ವಿವೇಕ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಗೌರವರಕ್ಷೆಯನ್ನು ಸ್ವೀಕರಿಸಿದರು. ಕ್ರೀಡಾಕೂಟದ ಅಧ್ಯಕ್ಷರೂ, ಕಾಲೇಜಿನ ಪ್ರಾಂಶುಪಾಲರೂ ಆದ ಶ್ರೀ ಕೆ. ಜಗದೀಶ ನಾವುಡರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕ್ರೀಡಾಕೂಟದ ಅರಂಭದಲ್ಲಿ ವಿವೇಕ ವಿದ್ಯಾಸಂಸ್ಥೆಗಳ ಎಲ್ಲಾ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ನೆರವಿ, ಕ್ರೀಡಾ ಜ್ಯೋತಿ ಬೆಳಗಿಸುವಿಕೆ, ಇತ್ಯಾದಿ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ರಾಮದೇವ ಐತಾಳ್, ಶ್ರೀ ಕೆ. ಜಗದೀಶ ಹೊಳ್ಳ, ಹಿರಿಯ ಸಹಶಿಕ್ಷಕ ಶ್ರೀ ಎ.ವೆಂಕಟೇಶ ಉಡುಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಬಿ. ವಸಂತ ಶೆಟ್ಟಿ ಉಪಸ್ಥಿತರಿದ್ದರು. ಕ್ರೀಡಾಕೂಟದ ನಿರ್ವಹಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಮಮತಾ, ಶ್ರೀ ಗಣೇಶ್ ಶೆಟ್ಟಿ, ಶ್ರೀ ನವೀನ್ ಕುಮಾರ್ ಶೆಟ್ಟಿ ಹಾಗು ಸಿಬ್ಬಂದಿ ವರ್ಗದವರು ನೆರವೇರಿಸಿ ಕೊಟ್ಟರು.

ಜಿಲ್ಲಾಮಟ್ಟದ ಕಲೋತ್ಸವ

DSC_3289ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆ, ಕುದಿ, ಇಲ್ಲಿ ಜರುಗಿದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಜಿಲ್ಲಾಮಟ್ಟದ ಸ್ಪರ್ಧೆಯ ಸಂಗೀತ ವಿಭಾಗದಲ್ಲಿ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ  ಶ್ರಾವ್ಯ, ನೇಹಾ ಹೊಳ್ಳ, ರಂಜನಾ, ಅಶ್ವಿನಿ, ಆರ್ಯ ವೈದ್ಯ, ಮೇಘನಾ, ಪ್ರತೀಕ್ಷಾ ಮಧ್ಯಸ್ಥ, ದಿನಕರ, ಶಮಂತಕ, ಇರ್ಷಾದ್ ಇವರ ತಂಡವು  ಪ್ರಥಮ ಸ್ಥಾನ ಪಡೆದು ಅಕ್ಟೋಬರ್‍ನಲ್ಲಿ ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.