ಸಮಾಜ ಸೇವಾಸಂಘ –ಉದ್ಘಾಟನಾ ಕಾರ್ಯಕ್ರಮ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2017ನೇ ಸಾಲಿನ ಸಮಾಜಸೇವಾ ಸಂಘದ ಉದ್ಘಾಟನಾ ಸಮಾರಂಭ ಹಾಗು “ಮರ ಇಳೆಗೆ ವರ” ಎಂಬ ಗಿಡ ನೆಡುವ ಕಾರ್ಯಕ್ರಮವು ರೋಟರಿ ಕ್ಲಬ್, ಕೋಟ ಸಿಟಿ ಮತ್ತು ವಿವೇಕ ಪದವಿಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಇತ್ತೀಚೆಗೆ ಜರಗಿತು.
ಕಾಲೇಜಿನ ಎಂ.ಜಿ.ಎಂ. ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ, ಶ್ರೀ ರವೀಂದ್ರ ಉಪಾಧ್ಯ, ಪ್ರಾಂಶುಪಾಲರು, ಸರಕಾರಿ ಪದವಿಪೂರ್ವ ಕಾಲೇಜು, ಬ್ರಹ್ಮಾವರ, ಇವರು ಉದ್ಘಾಟಿಸಿ ಮಾತನಾಡಿ, ಮನುಷ್ಯ ಸಮಾಜಜೀವಿ, ಆತ ಸಮಾಜವನ್ನು ಬಿಟ್ಟು ಬದುಕಲಾರ. ಏಕಾಂಗಿಯಾಗಿ ತನ್ನ ಜೀವನವನ್ನು ನಡೆಸಲಾರ. ಆಗ ಸಮೂಹ, ಸಮಾಜದ ಅಗತ್ಯತೆ ಇರುತ್ತದೆ. ಸಮಾಜದಲ್ಲಿ ಜೀವಿಸುತ್ತಿರುವಾಗ ಪರಸ್ಪರ ಸಹಕಾರ, ಸಹಬಾಳ್ವೆ, ಸೇವಾ ಮನೋಭಾವ ಮುಂತಾದ ಗುಣಗಳನ್ನು ಹೊಂದಿರಬೇಕಾಗುತ್ತದೆ. ಸಮಾಜದ ಸೇವೆಯನ್ನು ಕೇವಲ ಹಣದಿಂದಲೇ ಮಾಡಬೇಕೆಂದಿಲ್ಲ. ಜನರು ತಮ್ಮ ಸೇವಾ ಮನೋಭಾವದಿಂದ, ಪರಸ್ಪರ ಸ್ವಚ್ಛತೆ, ಸಸಿ ನೆಡುವಿಕೆ, ಅದಕ್ಕೆ ನೀರು-ಗೊಬ್ಬರ ನೀಡುವಿಕೆ, ಮರಳನ್ನು ಪೆÇೀಷಿಸುವಿಕೆ ಇತ್ಯಾದಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಕೂಡ ಮುಖ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕೂಡಾ ತಮ್ಮ ವಿದ್ಯಾರ್ಥಿ ಜೀವನದಲ್ಲೇ ತಿಳಿದು ಸಮಾಜಸೇವಾ ಕಾರ್ಯದಲ್ಲಿ ಭಾಗವಹಿಸಿ, ಸಮಾಜಮುಖಿಯಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ, ಉಡುಪಿ ಜಿಲ್ಲಾ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಕ್ಲಫರ್ಡ್ ಲೋಬೋ ಇವರು ಆಗಮಿಸಿ, ವಿದ್ಯಾರ್ಥಿಗಳಿಗೆ ಮರ ಇಳೆಗೆ ವರ ಈ ಕಾರ್ಯಕ್ರಮದಡಿಯಲ್ಲಿ ಸಸ್ಯಗಳನ್ನು ನೆಡುವುದು ಮತ್ತು ಅದರ ಸಂರಕ್ಷಣೆ ಹಾಗು ಅರಣ್ಯದ ಅಭಿವೃದ್ಧಿಯಿಂಡ ಮಾನವನ ಮೇಲಾಗುವ ಪ್ರಯೋಜನ ತಿಳಿಸಿ, ಅರಣ್ಯ ನಾಶದ ದುಷ್ಪರಿಣಾಮಗಳನ್ನು ವಿವರಿಸಿದರು.
ರೋಟರಿ ಕ್ಲಬ್, ಕೋಟ ಸಿಟಿ ಇದರ ಅಧ್ಯಕ್ಷರಾದ ಶ್ರಿ ರೋ| ಸುಬ್ರಾಯ ಆಚಾರ್ಯ ಮತ್ತು ಶ್ರೀ ರೋ | ಶ್ಯಾಮಸುಂದರ ನಾೈರಿ ವಲಯ ಸೇನಾನಿ, ಇವರು ಕಾರ್ಯಕ್ರಮ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಸಮಾರಂಭದ ಅಧ್ಯಕ್ಷತೆ ವಹಿಸಿ, ಮುಖ್ಯ ಅಭ್ಯಾಗತರನ್ನು ಸ್ವಾಗತಿಸಿದರು. ಕುಮಾರಿಯರಾದ ಪ್ರತೀಕ್ಷಾ ಮಧ್ಯಸ್ಥ, ಪಾವನ ಐತಾಳ್, ಮಾಧವಿ ಇವರು ಪ್ರಾರ್ಥಿಸಿದರು.
ರೋಟರಿ ಕ್ಲಬ್, ಕೋಟ ಸಿಟಿ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಕ್ಲಬ್‍ನ ಕಾರ್ಯದರ್ಶಿ ಶ್ರೀ ರೊ| ಶ್ರೀಕಾಂತ್ ವಡೇರಹೋಬಳಿ ಇವರು ಧನ್ಯವಾದವನ್ನಿತ್ತರು. ಈ ಕಾಲೇಜಿನ ಸಮಾಜ ಸೇವಾ ಸಂಘದ ಸದಸ್ಯರಾದ ಎಲ್ಲಾ ವಿದ್ಯಾರ್ಥಿಗಳು ಒಂದೊಂದು ಸಸಿಯನ್ನು ವಿತರಿಸಲಾಯಿತು. ಇರ್ಷಾದ್ ಕಾರ್ಯಕ್ರಮ ನಿರ್ವಹಿಸಿದರು.
ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಅಶೋಕ ಕುಮಾರ್ ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter