ಕೋಟದ ವಿವೇಕದ ವಿದ್ಯಾರ್ಥಿ ಸರಕಾರದ ರಚನೆಗಾಗಿ ಸಂಸದೀಯ ಪ್ರಜಾಪ್ರಭುತ್ವ ಮಾದರಿ ಚುನಾವಣೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ಮುಖಂಡನ ಆಯ್ಕೆಗಾಗಿ ಸಂದೀಯ ಪ್ರಜಾಪ್ರಭುತ್ವ ಮಾದರಿಯಲ್ಲಿ ವಿದ್ಯಾರ್ಥಿಗಳ ಮತದಾನ ಪ್ರಕ್ರಿಯೆಯನ್ನು ಏರ್ಪಡಿಸಲಾಗಿತ್ತು.

                ಶಾಲಾ ವಿದ್ಯಾರ್ಥಿಗಳಿಗೆ ಮತದಾನ ಪ್ರಕ್ರಿಯೆ, ಅಭ್ಯರ್ಥಿಗಳ ಆಯ್ಕೆ ಇದರ ಅರಿವು ಮೂಡಿಸುವ ಸಲುವಾಗಿ ಆರಂಭವಾದ ಈ ಚುನಾವಣೆಯಲ್ಲಿ ಅಭ್ರ್ಯರ್ಥಿಗಳ ನಾಮಪತ್ರ ಸಲ್ಲಿಕೆ, ಅದರ ಪರಿಶೀಲನೆ, ನಾಮಪತ್ರ ಹಿಂತೆಗೆಯುವಿಕೆ ಇದರ ಬಗ್ಗೆ ಸೂಕ್ತ ಮಾಹಿತಿ ನೀಡಲಾಯಿತು. ಮೊದಲ ದಿನವೇ ನಾಮಪತ್ರ ಸಲ್ಲಿಸಲು ಅವಕಾಶ ನೀಡಿ ನಾಮಪತ್ರ ಪರಿಶೀಲಿಸಿ, ಅಭ್ಯರ್ಥಿಗಳ ಘೋಷಣೆ ನಡೆಯಿತು.

ಮತದಾನ ಆರಂಭವಾಗುವ ಮೊದಲು ಅಭ್ಯರ್ಥಿಗಳಿಂದ ಪ್ರತೀ ತರಗತಿಗೆ ತೆರಳಿ ಮತಯಾಚಸಿ ಬೆಂಬಲ ಕೋರಿದರು. ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ವಿಘ್ನೇಶ ಕಾಮತ್ ಹಾಗು ಯಶೋಧರ ಶಾಸ್ತ್ರಿ ಮತ್ತು ಉಪನಾಯಕನ ಸ್ಥಾನಕ್ಕೆ ಮನೋಜ ಹಾಗು ಪ್ರಜ್ವಲ್ ಸ್ಪರ್ಧಿಸಿದ್ದರು. 546 ವಿದ್ಯಾರ್ಥಿನಿಯರು ಹಾಗು 688 ವಿದ್ಯಾರ್ಥಿಗಳು ಸೇರಿ ಸುಮಾರು 1250 ವಿದ್ಯಾರ್ಥಿಗಳ 16 ವಿಭಾಗಳು, ತಲಾ 2 ತರಗತಿಗೆ ಒಂದರಂತೆ ಒಟ್ಟು 8 ಮತಗಟ್ಟೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕರ್ತವ್ಯ ನಿರ್ವಹಿಸಲು ಉಪನ್ಯಾಸಕರನ್ನು ಚುನಾವಣಾ ಅಧಿಕಾರಿಗಳನ್ನಾಗಿ ನೇಮಿಸಿ, ಅವರೊಂದಿಗೆ ಕೆಲವು ವಿದ್ಯಾರ್ಥಿಗಳನ್ನು ಚುನಾವಣಾ ಮತಗಟ್ಟೆಯ ಭದ್ರತೆಗಾಗಿ ಪೆÇೀಲಿಸ್ ಸಿಬ್ಬಂದಿಯಾಗಿ ನೇಮಿಸಲಾಗಿತ್ತು. ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳಿಗಿರುವ ಮತಪತ್ರಗಳನ್ನು ಮುದ್ರಿಸಿ ಮತ ಹಾಕಲು ವ್ಯವಸ್ಥೆ ಮಾಡಲಾಗಿತ್ತು.

ಮತದಾನದ ನಂತರ ಮತಪತ್ರಗಳಿರುವ ಮತಪೆಟ್ಟಿಗೆಯನ್ನು ಪೆÇಲೀಸ್ ಭದ್ರತೆಯೊಂದಿಗೆ ಸ್ಟ್ರಾಂಗ್ ರೂಪ್‍ನಲ್ಲಿ ಇರಿಸಲಾಯಿತು.

ಆಮೇಲೆ ಪ್ರಾಂಶುಪಾಲರು ಹಾಗು ಸರ್ವ ಶಿಕ್ಷಕರ ಸಮ್ಮುಖದಲ್ಲಿ ಮತಪೆಟ್ಟಿಗೆಯನ್ನು ತೆರೆದು ಮತಗಳ ಎಣಿಕೆಯನ್ನು ಮಾಡಲಾಯಿತು. ಇದಕ್ಕೆ ಅಭ್ಯರ್ಥಿಗಳು ಸಾಕ್ಷಿಯಾದರು.

ಕೊನೆಯ ಸುತ್ತಿನ ಎಣಿಕೆಯ ನಂತರ ಪ್ರಾಂಶುಪಾಲರು, 864 ಮತವನ್ನು ಪಡೆದ ಯಶೋಧರ ಶಾಸ್ತ್ರಿಯನ್ನು ವಿದ್ಯಾರ್ಥಿ ನಾಯಕನಾಗಿ  ಹಾಗು ಪ್ರಜ್ವಲ್ ವಿದ್ಯಾರ್ಥಿ ಉಪನಾಯಕನೆಂದು ಪ್ರಕಟಿಸಿದರು.

ಈ ಎಲ್ಲಾ ಕಾರ್ಯಕ್ಕೆ ಎಲ್ಲಾ ಶಿಕ್ಷಕ ಹಾಗು ಶಿಕ್ಷಕೇತರ ಸಿಬ್ಬಂದಿಗಳು ಕೈಗೂಡಿಸಿದ್ದರು ಹಾಗು ಮುಖ್ಯ ಚುನಾವಣಾಧಿಕಾರಿಯಾಗಿ ಶ್ರೀ ಗಣೇಶ ಶೆಟ್ಟಿ ಹಾಗು ಶ್ರೀಮತಿ ರತಿ ಬಾೈರವರು ಕಾರ್ಯ ನಿರ್ವಹಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter