ವಿವೇಕ ವಿದ್ಯಾಸಂಸ್ಥೆಗಳ ಆವರಣದಲ್ಲಿ 68ನೇ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ರಾಷ್ಟ್ರ ಧ್ವಜಾರೋಹಣವನ್ನು ಮಾಡಿ ಸಂಸ್ಥೆಗಳ ವಿದ್ಯಾರ್ಥಿಗಳನ್ನುದ್ದೇಶಿಸಿ,
‘ನಾವು ಈಗ 68ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಪ್ರಪಂಚದಲ್ಲಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಿರುವ ದೇಶಗಳಲ್ಲಿ ಭಾರತವು ಒಂದು ಬಹು ಮುಖ್ಯ ದೇಶವಾಗಿದೆ. ಪ್ರಜೆಗಳು, ಪ್ರಜೆಗಳಿಂದ, ಪ್ರಜೆಗಳಿಗೋಸ್ಕರವಾಗಿ ನೆಡಸಲ್ಪಡುವ ವ್ಯವಸ್ಥೆಯೇ ಪ್ರಜಾಪ್ರಭುತ್ವವಾಗಿದೆ. ಆದ್ದರಿಂದ ನಮಗೆ, ಈ ಗಣರಾಜ್ಯೋತ್ಸವವು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವ ಉತ್ಸವವೇ ಆಗಿದೆ. ಭಾರತೀಯರಾದ ನಾವು ನಮ್ಮ ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಬೇಕು. ದೇಶದ ಪ್ರಗತಿಯಲ್ಲಿ ನಾವು ನಮ್ಮದೇ ಕೊಡುಗೆಯನ್ನು ನೀಡಬೇಕು. ಸ್ವಚ್ಛ ಹಾಗು ಭ್ರಷ್ಟಾಚಾರಮುಕ್ತ ದೇಶವಾಗಿಸುವಲ್ಲಿ ಪ್ರಯತ್ನಿಸಬೇಕು. ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಆಂದೋಲನದಲ್ಲಿ ನಾವು ಕೂಡ ಭಾಗವಹಿಸಿ, ಕೇವಲ ಭೂಮಿಯ ಕೊಳಕು, ಕಸವನ್ನು ಮಾತ್ರ ಅಲ್ಲ, ಮನಸ್ಸಿನ ಕೊಳಕನ್ನು ತೆಗೆದು ಹಾಕೋಣ’ ಎಂದು ಕರೆಯಿತ್ತರು.
ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳರು, ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ.ರಾಮದೇವ ಐತಾಳ್, ವಿವೇಕ ಪ.ಪೂ.ಕಾಲೇಜಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ವೆಂಕಟೇಶ ಉಡುಪರು ಉಪಸ್ಥಿತರಿದ್ದರು.
ವಿದ್ಯಾರ್ಥಿ ನಾಯಕ ಕುಮಾರ ವಿನೀತ ಭಟ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. 