ಕೋಟದ ವಿವೇಕ ಪದವಿಪೂರ್ವ ಕಾಲೇಜು ಇಲ್ಲಿ ಯುವ ಸಂಸತ್ ಸ್ಪರ್ಧೆ

ಕೋಟ: ಸಂಸದೀಯ ವ್ಯವಹಾರಗಳ ಇಲಾಖೆ ಹಾಗು ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆಇವರ ಸಹಯೋಗದಲ್ಲಿ ಆಡಳಿತ ಮಂಡಳಿ, ಕೋಟ ವಿದ್ಯಾಸಂಘ ಮತ್ತು ವಿವೇಕ ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿಕಾಲೇಜಿನ ಸಭಾಂಗಣದಲ್ಲಿ ಯುವ ಸಂಸತ್ ಸ್ಪರ್ಧೆ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಸಂಸತ್‍ನಕಾರ್ಯ ಕಲಾಪ, ಮಸೂದೆ ಮಂಡನೆ, ಅನುಮೋದನೆ ಮುಂತಾದಕಾರ್ಯ ವೈಖರಿಯನ್ನು ತಿಳಿದುಕೊಳ್ಳಬೇಕು. ತನ್ಮೂಲಕ ಭವಿಷ್ಯದಲ್ಲಿಉತ್ತಮ ನಾಯಕನ ಗುಣಗಳನ್ನು ಬೆಳೆಸಿಕೊಳ್ಳಬಹುದು. ಸಂಸತ್‍ನಲ್ಲಿ ನಡೆಯುವ ಒಳ್ಳೆಯ ಘಟನೆಗಳನ್ನು ಸ್ವೀಕರಿಸಬೇಕೆಂದು ತಿಳಿಸಿದರು.

ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಈಗಿನಿಂದಲೇಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು ಒಳ್ಳೆಯ ವಾಕಪಟುತ್ವ, ನಿತ್ಯ ನಿಷ್ಠೆ, ಕರ್ತವ್ಯ ಪ್ರಜ್ಞೆಯನ್ನು ಹೊಂದಬೇಕೆಂದು ವಿವರಿಸಿದರು. ಮುಖ್ಯ ಅತಿಥಿಯಾಗಿ ಕೊಟತಟ್ಟುಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ, ಭಾಸ್ಕರ ಆಚಾರ್ಯ ಹಾಗು ಹಿರಿಯ ಶಿಕ್ಷಕರಾದ ಪ್ರೇಮಾನಂದ, ಉಪನ್ಯಾಸಕ ದಯಾನಂದ ಉಪಸ್ಥಿತರಿದ್ದರು.

ಯುವ ಸಂಸತ್ ಸ್ಪರ್ಧೆಯಲ್ಲಿತೀರ್ಪುಗಾರರಾಗಿ ಸರಕಾರಿ ಪ್ರಥಮದರ್ಜೆಕಾಲೇಜಿನಸಹಾಯಕ ಪ್ರಾಧ್ಯಾಪಕ ಪಾಂಡುರಂಗ, ಶಿಕ್ಷಕ ನರೇಂದ್ರಕುಮಾರ್, ಶಿಕ್ಶಕಿ ರತಿ ಬಾೈ ಇವರು ಸಹಕರಿಸಿದ್ದರು. ಮಧ್ಯಾಹ್ನದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರುಗಳಿಗೆ ಪ್ರಶಸ್ತಿ ಪತ್ರ ಬಹುಮಾನಗಳನ್ನು ವಿತರಿಸಲಾಯಿತು. ಪ್ರಥಮ ಸ್ಥಾನದಲ್ಲಿ ಲಕ್ಷ್ಮಿಕಾಂತ, ಸ.ಪ.ಪೂ.ಕಾಲೇಜು, ಉಡುಪಿ, ದ್ವಿತೀಯ ಸ್ಥಾನದಲ್ಲಿಅನಂತಕೃಷ್ಣ ನಾವಡ, ವಿವೇಕ ಪ.ಪೂಕಾಲೇಜು, ಕೋಟ, ತೃತೀಯ ಸ್ಥಾನದಲ್ಲಿ ಸುಜಯ ಶೆಟ್ಟಿ, ಸ.ಪ.ಪೂ.ಕಾಲೇಜು, ಕುಂದಾಪುರ, ಚತುರ್ಥ ಸ್ಥಾನದಲ್ಲಿ ಶ್ರೀನಿಧಿ, ವಿವೇಕ ಪ.ಪೂ.ಕಾಲೇಜು, ಕೋಟ, ಪಂಚಮ ಸ್ಥಾನದಲ್ಲಿ ಪ್ರಣತಿ ವೈ.ಪಿ., ವಿವೇಕ ಪ.ಪೂ.ಕಾಲೇಜು, ಕೋಟಇವರುಆಯ್ಕೆಯಾದರು.

ತರಬೇತುದಾರರಾಗಿ ಉಪನ್ಯಾಸಕ ದಯಾನಂದ, ವಾಸು ಮೊಗೇರ ಬ್ರಹ್ಮಾವರ, ಪ್ರಕಾಶ ಗೋಳಿಯಂಗಡಿ, ರಾಘವೇಂದ್ರ ಬಿದ್ಕಲ್‍ಕಟ್ಟೆ, ಪರಮೇಶ್ವರ ಉಡುಪಿ, ಸಂಧ್ಯಾ ನಾಯಕ್‍ಕುಂದಾಪುರ, ಸುನಂದಾ ಕೆ ತೆಕ್ಕಟ್ಟೆ ಇವರು ಸಹಕರಿಸಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕ ಚಂದ್ರಶೇಖರ ಎಚ್.ಎಸ್. ಕಾರ್ಯಕ್ರಮ ನಿರೂಪಿಸಿ ಕೃಷ್ಣ ವಂದಿಸಿದರು.

ಸಂಸದೀಯ ವ್ಯವಹಾರಗಳ ಇಲಾಖೆ ಹಾಗು ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆಇವರ ಸಹಯೋಗದಲ್ಲಿ ಆಡಳಿತ ಮಂಡಳಿ, ಕೋಟ ವಿದ್ಯಾಸಂಘ ಮತ್ತು ವಿವೇಕ ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿಕಾಲೇಜಿನ ಸಭಾಂಗಣದಲ್ಲಿಯುವ ಸಂಸತ್ ಸ್ಪರ್ಧೆಯನ್ನು ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವಡ, ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಮತ್ತಿತರರು ಉಪಸ್ಥಿತರಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter