ಆತ್ಮೀಯ ವಿದಾಯ ಸಮಾರಂಭ

ಕೋಟ : ವಿವೇಕ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಿವೇಕ
ಬಾಲಕಿಯರ ಪ್ರೌಢಶಾಲೆಯಲ್ಲಿ ಪೇದೆಯಾಗಿ 41ವರ್ಷಗಳ ಕಾಲ
ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶ್ರೀ ಪಿ. ಬಸವ ಪೂಜಾರಿ
ಇವರನ್ನು ಕೋಟ ವಿದ್ಯಾಸಂಘ ಮತ್ತು ವಿವೇಕ ವಿದ್ಯಾಸಂಸ್ಥೆಗಳ
ಸಿಬ್ಬಂದಿ ವರ್ಗದ ಜಂಟಿ ಆಶ್ರಯದಲ್ಲಿ ಸಂಮ್ಮಾನಿಸಿ ಭಾವಪೂರ್ಣ
ವಿದಾಯವನ್ನು ಕೋರಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ
ಅಧ್ಯಕ್ಷರಾದ ಶ್ರೀ ಪಿ. ಪ್ರಭಾಕರ ಮೈಯ್ಯರವರು ವಹಿಸಿ,
ಮಾತನಾಡಿ, ಇಲಾಖಾ ನಿಯಮದಂತೆ ವಯೋನಿವೃತ್ತಿ ಸಹಜ, ಆದರೆ
ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ಸಂಸ್ಥೆಗಳ ಕುರಿತಾಗಿ
ಸೇವಾ ಮನೋಭಾವದೊಂದಿಗೆ ಇದು ನನ್ನ ಸಂಸ್ಥೆ ಎಂಬ ವಿಶೇಷ
ಅಭಿಮಾನದೊಂದಿಗೆ ಸೇವೆಯನ್ನು ಸಲ್ಲಿಸಿದಲ್ಲಿ ನಮ್ಮ ಜೀವನ
ಸಾರ್ಥಕವಾಗುತ್ತದೆ. ಸಂಸ್ಥೆಗಳ ಬಗ್ಗೆ ಅಪಾರ ಅಭಿಮಾನ, ಪ್ರೀತಿ
ಹೆಚ್ಚುತ್ತದೆ ಎಂದು ತಿಳಿಸಿದರು.
ಅವರು ಪಿ. ಬಸವ ಪೂಜಾರಿಯವರ ಕರ್ತವ್ಯ, ಶ್ರದ್ಧೆ,
ತನ್ಮಯತೆಯನ್ನು, ಬದ್ಧತೆಯನ್ನು ಮುಕ್ತಕಂಠದಿಂದ
ಪ್ರಶಂಸಿದರು.
ವಿದ್ಯಾಸಂಘದ ಕೋಶಾಧಿಕಾರಿ, ಶ್ರೀ ವಲೇರಿಯನ್ ಮೇನೆಜಸ್
ಮತ್ತು ಜೊತೆ ಕಾರ್ಯದಶರ್ಿ ಶ್ರೀ ಎಂ.ರಾಮದೇವ ಐತಾಳರು
ನಿವೃತ್ತರ ಕರ್ತವ್ಯ ನಿಷ್ಟೆಯನ್ನು ಮೆಚ್ಚಿ ಮುಂದಿನ ಜೀವನಕ್ಕೆ
ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಜಗದೀಶ ಹೊಳ್ಳ, ಶ್ರೀ
ಶ್ರೀಪತಿ ಹೇಳರ್ೆ, ಶ್ರೀ ವೆಂಕಟೇಶ ಉಡುಪರು ನಿವೃತ್ತರ ಕುರಿತಾಗಿ
ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು
ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಡಳಿತ
ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕಿ
ಶ್ರೀಮತಿ ಅನಿತಾ ಹೊಳ್ಳ ಪ್ರಾಥರ್ಿಸಿದರು. ಶಿಕ್ಷಕ ಶ್ರೀ ನರೇಂದ್ರ
ಕುಮಾರ್ ಕಾರ್ಯಕ್ರಮ ನಿರ್ವಹಿಸಿದರೆ, ಶ್ರೀ ಸಂಜೀವ ಜಿ. ಇವರು
ಧನ್ಯವಾದವನ್ನಿತ್ತರು

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter